ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಸಮಾಜದಲ್ಲಿ ಗುರುತರವಾದ ಸೇವೆ ಧ್ವನಿವರ್ಧಕರದ್ದಾಗಿದೆ-ವಾಸುದೇವ ಹೊಳ್ಳ

ಕೋಲಾರ : ಸಮಾಜದ ಯಾಮದೇ ಕಾರ್ಯಕ್ರಮದ
ವೊದಲು ಬಂದು ಕಡೆಯಲ್ಲಿ ಸೇವೆ ಸಲ್ಲಿಸಿ ಮನೆಗೆ ತೆರಳುವ
ದ್ವನಿವರ್ಧಕ ಮಾಲೀಕರ ಸೇವೆ ಸಮಾಜದಲ್ಲಿ ಗುರುತುರವಾ
ಗಿದೆ. ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ
ಅಧ್ಯಕ್ಷ ಎಂ.ವಾಸುದೇವ್‌ಹೊಳ್ಳ ಅಭಿಪ್ರಾಯಪಟ್ಟರು.
ನಗರದಲ್ಲಿಂದು ಎಂ.ಡಿ. ಪ್ಲಾಜಾದಲ್ಲಿ ಜರುಗಿದ
ಕೋಲಾರ ತಾಲ್ಲೂಕು ಧ್ವನಿವರ್ದಕ ಮಾಲೀಕರ ಸಂಘದ
ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು
ಮಾತನಾಡುತ್ತಿದ್ದರು.
ಶುಭ, ದುಃಖ ಮತ್ತು ಮನರಂಜನೆ ಯಾಮದೇ
ಕಾರ್ಯಕ್ರಮಕ್ಕೆ ದ್ವನಿವರ್ಧಕ ಸೇವೆ ಅತ್ಯಗತ್ಯವಾಗಿದೆ. ಇವರ ಸೇವೆ
ಸಮಾಜಕ್ಕೆ ಅತ್ಯಮೂಲ್ಯವಾಗಿದೆ. ಇವರ ಕಾರ್ಯಕ್ರಮಕ್ಕೆ
ರಾಜಕಾರಣಿಗಳು ಗೈರುಹಾಜರಿಯಾಗಿರುಮದಕ್ಕೆ ಕಾರ್ಯಕರ್ತರು
ಬೇಸರ ಪಡದೆ ತಮ್ಮ ಸಂಘಟನೆಯನ್ನು ಕಟ್ಟಿ ಇದನ್ನು
ಬೆಳೆಸಿಕೊಳ್ಳುವಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು.
ನಗರಸಭಾಧ್ಯಕ್ಷೆ ನಾಜಿಯಾಬಾಬಾಜಾನ್‌ ನೂತನ
ಸಂಘಕ್ಕೆ ಶುಭ ಹಾರೈಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ
ರೇವಣ್ಣ ಮಾತನಾಡಿ, ಧ್ವನಿವರ್ಧಕ ಮಾಲೀಕರು ಕಾರ್ಮಿಕರ
ಸಮಸ್ಯೆಗಳಿಗೆ ಸ್ವಂದಿಸಬೇಕು. ತಮ್ಮ ಇಲಾಖೆಯಿಂದ
ಅಗತ್ಯವಾದ ನೆರಮ ನೀಡಲಾಗುಮದೆಂದು ತಿಳಿಸಿದರು.
ಪತ್ರಕರ್ತ ಸಿ.ಜಿ. ಮುರಳಿ ಮಾತನಾಡಿದರು. ಮುಖಂಡ
ಜಮೀರ್‌ ಅಹ್ಮದ್‌, ಮತ್ತಿತರ ಗಣ್ಯರು ಹಾಜರಿದ್ದರು.ಈ
ಸಂದರ್ಭದಲ್ಲಿ ಹಿರಿಯ ಧ್ವನಿವರ್ಧಕ ಮಾಲೀಕರಿಗೆ ಸನ್ಮಾನ
ಮಾಡಲಾಯಿತು.

No Comments to “ಸಮಾಜದಲ್ಲಿ ಗುರುತರವಾದ ಸೇವೆ ಧ್ವನಿವರ್ಧಕರದ್ದಾಗಿದೆ-ವಾಸುದೇವ ಹೊಳ್ಳ”

add a comment.

Leave a Reply

You must be logged in to post a comment.