ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಡಾಂಬರ್‌ ರಸ್ತೆ ಡಮಾರ್‌!!

ಕೋಲಾರ : ನಗರದ ರಸ್ತೆಗಳಲ್ಲಿ ವಾಹನ ಮತ್ತು ಜನರು ಓಡಾಡಲು ಸಾಧ್ಯವಾದ ಪರಿಸ್ಥಿತಿ ಈಗ ನಗರದಲ್ಲಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆದ ಮಾಧ್ಯಮಗಳ ವರದಿಗಳು, ಸಂಘ ಸಂಸ್ಥೆಗಳ ಪ್ರತಿಭಟನೆಗಳಿಗೆ ಕೊನೆಗೂ ಮಣಿದ ಜಿಲ್ಲಾಡಳಿತ, ರಸ್ತೆಗೆ ತಾರು ಹಾಕುವ ಕಾಮಗಾರಿಗೆ ಕಳೆದ ಮೂರು ದಿನಗಳ ಹಿಂದೆ ಪ್ರಾರಂಭಿಸಿದ್ದು, ಭಾರೀ ಕಳಪೆ ಕಾಮಗಾರಿಯಿಂದ ಕೂಡಿರುವ ಈ ರಸ್ತೆ ಕೇವಲ ಮೂರೇ ದಿನಕ್ಕೆ ರಸ್ತೆಯ ಜೆಲ್ಲಿ ಮೇಲೆ ಎದ್ದಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ನಗರದ ಮೆಕ್ಕೆ ಸರ್ಕಲ್‌ನಿಂದ ಬಂಗಾರಪೇಟೆ ವೃತ್ತದವರೆಗೆ ತಾರು ರಸ್ತೆ ಕಾಮಗಾರಿಕೆ ಕೆಲಸ ಪ್ರಾರಂಭವಾಗಿದ್ದು ಇದರ ಗುಣಮಟ್ಟಮ ಎಷ್ಟರ ಮಟ್ಟಿಗೆ ಇತ್ತೆಂದರೆ ಕೇವಲ ಮೂರೇ ದಿನಕ್ಕೆ ತಾರು ಕಿತ್ತುಹೋಗಿದೆ. ಬ್ರೆಕ್‌ ಹಾಕಿದರೇ.. ಜೀವಕೆ ಕುತ್ತು ಗ್ಯಾರಂಟಿ.. ತಾರು ಹಾಕಿರು ಪರಿ ನೋಡಿದರೆ ಕಲ್ಲುಗಳು ನುಣುಪಾಗಿದ್ದು, ಯಾಮದೇ ವಾಹನ ಬ್ರೆಕ್‌ ಹಾಕಿದ ಕ್ಷಣದಲೇ ಪಲ್ಟಿ ಹೊಡೆಯುಮದು ಖಚಿತ. ಜಿಲ್ಲಾಡಳಿತ ತಕ್ಷಣ ತಾರು ಹಾಕಿರುವ ರಸ್ತೆಗಳನ್ನು ಕ್ಲೀನ್‌ ಮಾಡಿಸಿದರೆ ಅನಾಹುತಗಳಗಳನ್ನು ತಪ್ಪಿಸಬಹುದು.. ಡಿ.ಸಿ ಭೇಟಿ : ಸದರಿ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ಗುಣಮಟ್ಟವನ್ನು ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ ಮೀನಾ ಪರಿಶೀಲಿಸಿದ್ದರು.ಉತ್ತಮ ಗುಣಮಟ್ಟ ಕಾಮಗಾರಿ ಮಾಡುವಂತೆ ಸೂಚಿಸಿ ಅವರು ತೆರಳಿದ್ದರು. ಆದರೂ ಲೆಕ್ಕಿಸದೆ ಗುತ್ತಿಗೆಗಾರರು ಕಳಫೆ ಕಾಮಗಾರಿಕೆಯನ್ನು ಮಾಡಿದ್ದಾರೆಂದು ಆರೋಪಿಸಿರುವ ಸಾರ್ವಜನಿಕರು ಸದರಿ ಗೆತ್ತಿಗೆದಾರರನ್ನು ಕೈಬಿಟ್ಟು ಬೇರೆ ಗುತ್ತಿಗೆದಾರರನ್ನು ನೇಮಿಸಿ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕೆಂದು ನಗರದ ನಾಗರೀಕರು ಮತ್ತು ಸಂಘ ಸಂಸ್ಥೆಗಳು ಒತ್ತಾಯಿಸಿವೆ. ಸ್ಫೀರಿಟ್‌ಗೆ ನೀರು ಕಳಪೆ ಕಾಮಗಾರಿಗೆ ಕಾರಣ: ಸ್ಪೀರಿಟ್‌ನಲ್ಲಿ ನೀರನ್ನು ಹೆಚ್ಚಿಗೆ ಬೆರಸಿ ತಾರು ಹಾಕುವ ವೊದಲು ರಸ್ತೆಗೆ ಹಾಕುಮದರಿಂದ ತಾರ್‌ ಬಳಿಕೆ ಕಡಿಮೆ ಮಾಡಿ ತಾರ್‌ ಉಳಿಸಬಹುದಾಗಿದೆ. ಇದರಿಂದ ರಸ್ತೆ ಅಗತ್ಯಕ್ಕಿಂತ ಕಡಿಮೆ ತಾರ್‌ ಹಾಕಿದರೂ ಹೆಚ್ಚು ಹಾಕಿದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗೆ ಕಳಪೆ ಕಾಮಗಾರಿಕೆ ಮಾಡಿರುವ ಗುತ್ತಿಗೆದಾರನ್ನು ಬದಲಾಯಿಸಿ ಬೇರೊಬ್ಬರನ್ನು ನೇಮಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರ್‌ ಪ್ರಕಾಶ್‌ರವರು ಕ್ರಮತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸದರಿ ರಸ್ತೆಯು ನಗರದ ಪ್ರಮುಖ ರಸ್ತೆ ಮಾರ್ಗವಾಗಿದೆ. ಶ್ರೀನಿವಾಸಪುರ ಚಿಂತಾಮಣಿ,ಚಿಕ್ಕಬಳ್ಳಾಪುರ, ಬಂಗಾರಪೇಟೆ, ಕೆಜಿಎಫ್‌ ನಗರಗಳ ಸಂಪರ್ಕ ರಸ್ತೆ ಇದಾಗಿದೆ. ಕೋಲಾರ ನಗರದಲ್ಲಿ ಈ ರಸ್ತೆ ಹಾದು ಹೋಗುಮದರಿಂದ ನಗರದ ಟ್ರಾಪಿಕ್‌,ಜೊತೆಗೆರೈಲ್ವೆ ಮೇಲ್ಸೇತುವೆ ಕಾಮಗಾರಿ ನಿರ್ಮಾಣ ಟವರ್‌ ಬಳಿ ನಡೆಯುತ್ತಿರುವ ಕಾರಣ ಕೋಲಾರ ನಗರದಿಂದ ಬೆಂಗಳೂರು ಮತ್ತು ಮಾಲೂರು, ನರಸಾಪುರಕ್ಕೆ ಹಾದು ಹೋಗುವ ವಾಹನಗಳು ಈ ಮಾರ್ಗದಲ್ಲಿ ಹಾದುಹೋಗುತ್ತಿವೆಇಷ್ಟಲ್ಲಾ ವಾಹನಗಳ ದಟ್ಟ ಸಂದಣಿಯಿರುವ ರಸ್ತೆ ಇದಾಗಿದೆ..

No Comments to “ಡಾಂಬರ್‌ ರಸ್ತೆ ಡಮಾರ್‌!!”

add a comment.

Leave a Reply

You must be logged in to post a comment.