ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

`ಯೊಜನೆ’ ಕಟ್ಟಕಡೆಯ ವ್ಯಕ್ತಿಗೂ ಸಿಗಲಿ-ಸರೋಜಿನಿ

ಚಿಕ್ಕಬಳ್ಳಾಪುರ: ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ಈ ವರೆಗೆ ೧೬ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಹಾಗೂ ೩೬ ಮಹಿಳಾ ಗ್ರಾಮ ಸಭೆಗಳನ್ನು ನಡೆಸಿ ನಿಗಮದ ಯೊಜನೆಯನ್ನು ಕಟ್ಟಕಡೆಯ ವ್ಯಕ್ತಿಗೆ ಸಹ ತಲುಪುವಂತೆ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್‌ ತಿಳಿಸಿದ್ದಾರೆ. ಮಂಗಳವಾರ ಚಿಕ್ಕಬಳ್ಳಾಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಅವರು ಮಾತನಾಡುತ್ತಿದ್ದರು.ಬೆಂಗಳೂರಿನ ಎಫ್‌.ಕೆ.ಸಿ.ಸಿ. ಸಂಸ್ಥೆಯಿಂದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರುಕಟ್ಟೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಗಾಮೆಂಟ್ಸ್‌ ತಯಾರಿಕೆ, ಬೇಕರಿ ಉತ್ಪನ್ನ ತಯಾರಿಕೆ ಇತ್ಯಾದಿ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡಲಾಗುಮದು. ಲೈಂಗಿಕ ಕಾರ್ಯಕರ್ತೆಯರಿಗೆ, ಲೈಂಗಿಕ ಅಲ್ಪಸಂಖ್ಯಾತರಿಗೆ ವಿವಿಧ ಉದ್ಯೋಗಗಳ ತರಬೇತಿ, ಅವರಿಗೆ ೪೦೦ ರೂಗಳ ಮಾಶಾಸನ, ಸ್ತ್ರೀಶಕ್ತಿ ಸಂಘಗಳ ವತಿಯಿಂದ ಕಿರುಸಾಲವನ್ನು ಸಹ ನೀಡಲಾಗುಮದೆಂದು ಅವರು ತಿಳಿಸಿದರು. ಉದ್ಯೋಗದ ಯೊಜನೆಯಡಿ ಮಹಿಳೆಯರು ಸ್ವಂತ ಉದ್ಯೋಗ ಪ್ರಾರಂ ಭಿಸಲು ತಲಾ ೧ಲಕ್ಷ ಸಾಲ ನೀಡಲಾಗುಮದು. ವಿವಿದ ಕ್ಷೇತ್ರ ಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ೨೪ ನುರಿತ ಸಂಘ ಸಂಸ್ಥೆಗಳು ಈ ಕೆಲಸ ನಿರ್ವಹಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಹ ರಾಜ್ಯ ಸಂಪನ್ಮೂಲ ಕೇಂದ್ರದ ಒಂದು ಘಟಕ ಇದೆ. ನಿಗಮದಿಂದ ಒಬ್ಬ ಕೌನ್ಸಿಲರ್‌ ಸಹ ನೇಮಿಸಲಾಗಿದೆ. ನಿಗಮಕ್ಕೆ ಈ ಬಾರಿ ೪೬ ಕೋಟಿ ಅನುದಾನ ಬಂದಿದ್ದು, ಈ ಹಣವನ್ನು ಸ್ತ್ರೀ ಸಬಲೀಕರಣದ ಯೊಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಬಿ.ಪಿ.ಓ ಹಾಗೂ ಇಂಗ್ಲೀಷ್‌ ಸ್ಪೀಕಿಂಗ್‌ ಕೋರ್ಸ್‌ಗಳಿಗೂ ವಿಸ್ತರಿಸಲಾ ಗುಮದೆಂದರು. ಮುಂದಿನ ವರ್ಷ ರಾಜ್ಯ ಮಟ್ಟದ ಹೋಟೆಲ್‌ ಉದ್ದಿಮೆ ದಾರರ ಸಹಯೊಗದೊಂದಿಗೆ ಮಹಿಳೆಯರು ಮನೆಯಲ್ಲೇ ತಯಾರಿಸಿದ ಆಹಾರ ಉತ್ಪನ್ನವನ್ನು ಮಾರುಕಟ್ಟೆ ಮಾಡುಮ ದರಲ್ಲಿ ಪ್ರೋತ್ಸಾಹಿಸಲಾಗುಮದು. ನಿಗಮದಿಂದ ಅಂಗವಿಕಲರಿಗೆ ೬ಲಕ್ಷದವರೆಗೆ ೬ % ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುಮದು. ಜಿಲ್ಲೆಯಲ್ಲಿ ೬ ಜನ ಸೌಲಭ್ಯ ಪಡೆದುಕೊಂಡಿದ್ದಾರೆ. ಈ ಯೊಜನೆ ಪುರುಷ ಹಾಗೂ ಸ್ತ್ರೀ ಇಬ್ಬರಿಗೂ ಅನ್ವಯಿಸುತ್ತದೆ.ಹೈದರಾಬಾದ್‌ ಕರ್ನಾಟಕದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದರು. ನಿಗಮದ ವಿಶೇಷ ಅಭಿವೃದ್ದಿ ಯೊಜನೆಯಡಿ ಉತ್ತರ ಕರ್ನಾಟಕದ ೧೦ ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರಿಗೆ ಗೃಹ ನಿರ್ಮಾಣಕ್ಕೆ ೪೦,೦೦೦ ಧನ ಸಹಾಯ ಮಾಡಲಾಗಿದೆ ಎಂದರು. ೨೦೧೦-೧೧ನೇಸಾಲಿನಲ್ಲಿ ೨೦೪ ಮಹಿಳೆಯರಲ್ಲಿ ೨೦೨ ಜನರಿಗೆ ಸಾಲ ನೀಡಿ ಪ್ರಗತಿ ಸಾಧಿಸಲಾಗಿದೆ ಎಂದವರು ತಿಳಿಸಿದರು. ಈ ಬಾರಿ ಗ್ರಾಮವಾಸ್ತವ್ಯ ಹಾಗೂ ಗ್ರಾಮಸಭೆಗೆ ನಿಗಮದ ಅಧ್ಯಕ್ಷರು ಗೌರಿಬಿದನೂರನ್ನು ಆಯ್ಕೆುಮಾಡಲಾಗಿದ್ದು, ಮಂಗಳವಾರ ಅಲ್ಲಿಗೆ ತೆರಳಿದರು. ಪತ್ರಿಕಾಗೋಷ್ಠಿಯಲ್ಲಿ ನಿಗಮದ ಮ್ಯಾನೇಜರ್‌ ಮುನಿರೆಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲೋಕೇಶ್‌ಗೌಡ ಉಪಸ್ಥಿತರಿದ್ದರು.

No Comments to “`ಯೊಜನೆ’ ಕಟ್ಟಕಡೆಯ ವ್ಯಕ್ತಿಗೂ ಸಿಗಲಿ-ಸರೋಜಿನಿ”

add a comment.

Leave a Reply

You must be logged in to post a comment.