ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಶಾಶ್ವತ ಕುಡಿಯುವ ನೀರಿಗೆ ರು.೨೫೦ ಕೋಟಿ ಕೊಟ್ಟರೂ ಯೊಜನೆ ನೆನೆಗುದಿಗೆ

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸುಮದಕ್ಕಾಗಿ ಎತ್ತಿನ ಹೊಳೆ ಯೊಜನೆಗೆ ೨೫೦ ಕೋಟಿ. ರು. ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದು, ಇದುವರೆಗೆ ನಯಾ ಪೈಸೆಯೂ ಖರ್ಚಾಗಿಲ್ಲ ಈ ಬಗ್ಗೆ ತಾಮ ತಕ್ಷಣ ಕ್ರಮ ತೆಗೆದುಕೊಂಡು ನೆನೆಗುದಿಗೆ ಬಿದ್ದಿರುವ ಯೊಜನೆಯನ್ನು ಶೀಘ್ರ ಕಾರ್ಯಾರಂಭ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಹೇಳಿದರು. ತಿರುಪತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೇರಿದ ಪದ್ಮಾವತಿ ಕಲ್ಯಾಣ ಮಂಟಪದ ವ್ಯಾಪ್ತಿಗೆ ಬರುವ ೩೦೦।೨೧೦ ಜಾಗವಿದ್ದು,ಇಲ್ಲಿ ೨೦ ಕೊಠಡಿಗಳನ್ನು ನಿರ್ಮಾಣ ಮಾಡಲು ೨.೬೦ ಕೋಟಿ ರು. ಸರ್ಕಾರ ಮಂಜೂರು ಮಾಡಿದ್ದು, ಸದರಿ ಕಾರ್ಯಕ್ರಮಕ್ಕೆ ಭೂಮಿ ಪೂಜೆ ನೆರವೇರಿಸುವ ಸಲುವಾಗಿ ತಿರುಪತಿಗೆ ಬರಲಾಗಿತ್ತು ಎಂದು ತಿಳಿಸಿದ ಸಿ.ಎಂ ರವರು ವಾಪಸ್ಸು ಬರುವಾಗ ಮಾರ್ಗ ಮಧ್ಯೆ ಕೋಲಾರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ಕರೆಸಿ ಜಿಲ್ಲೆಯ ಕುಂದುಕೊರತೆಗಳ ಬಗ್ಗೆ ೩೦ ನಿಮಿಷ ಚರ್ಚೆ ಮಾಡಿದ ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಎತ್ತಿನ ಹೊಳೆ ಯೊಜನೆ: ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಈ ನೀರಿನ ಯೊಜನೆಯನ್ನು ಜಾರಿಗೊಳಿಸಲಾಗುಮದೆಂದು ತಿಳಿಸಿದ ಅವರು, ಕುಡಿಯುವ ನೀರಿಗಾಗಿ ೧.೫೦ ಕೋಟಿ ಬಿಡುಗಡೆ: ಜಿಲ್ಲೆಯ ಮಾಲೂರು ತಾಲ್ಲೂಕು ಹೊರತು ಪಡಿಸಿ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಕುಡಿಯುವ ನೀರಿಗೆ ತೀವ್ರ ನಿಗಾವಹಿಸಲಾಗಿದೆ. ಈಗಾಗಲೇ ಜಿಲ್ಲೆಯ ೧೦೦ ಗ್ರಾಮಗಳನ್ನು ಕುಡಿಯುವ ನೀರಿಗೆ ಭಾರೀ ತೊಂದರೆಯಿರುವ ಗ್ರಾಮಗಳೆಂದು ಗುರ್ತಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ೨.೫೦ ಕೋಟಿ ರು.ಗಳ ಬರಪರಿಹಾರ ಹಣವನ್ನು ಖರ್ಚು ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಈಗ ೧.೫೦ ಕೋಟಿ ರು.ಹಣಲಭ್ಯವಿದ್ದು, ೨ ದಿನಗಳಲ್ಲಿ ಮತ್ತೇ ೧.೫೦ ಕೋಟಿ ರು.ಹಣ ಬಿಡುಗಡೆ ಮಾಡಲಾಗುಮದು. ರಾಜ್ಯದ ಎಲ್ಲಾ ಜಿಲ್ಲೆಗೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಇದೇ ರೀತಿ ಕೋಲಾರ ಜಿಲ್ಲೆಗೂ ನೇಮಕ ಮಾಡಲಾಗಿದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಅಧಿಕಾರಿಗಳ ಸಭೆ ಕರೆಸಿ ಸಮಾಲೋಚಿಸಬೇಕೆಂದು ಆದೇಶ ನೀಡಲಾಗಿದೆ. ಕಡಿತ ವಿಲೇವಾರಿ ಕ್ರಮ : ವಾರದಲ್ಲಿ ಒಂದು ದಿನ ಯಾಮದಾದರೂ ಒಂದು ತಾಲ್ಲೂಕಿನಲ್ಲಿ ಕಡಿತವಿಲೇವಾರಿ ಕಾರ್ಯಕ್ರಮ ತೆಗೆದುಕೊಳ್ಳಬೇಕು. ತಾಹಸೀಲ್ದಾರ್‌ ರವರು ಯಾಮದಾದರೂ ಒಂದು ಹೋಬಳಿಯಲ್ಲಿ ಈ ಕಾರ್ಯಕ್ರಮ ಮಾಡಬೇಕು. ಕಂದಾಯತನಿಖಾಧಿಕಾರಿಗಳು(ಆರ್‌.ಐ) ಯಾಮದಾದರೂ ಒಂದು ಗ್ರಾಮಪಂಚಾಯ್ತಿಯಲ್ಲಿ ಈ ಕಾರ್ಯಕ್ರಮ ಮಾಡ ಬೇಕು. ಮುಂದಿನ ಜನವರಿಯ ಒಳಗೆ ಎಲ್ಲಾ ಕಡಿತ ವಿಲೇವಾರಿ ಸುಸೂತ್ರವಾಗಿ ನಡೆಯಬೇಕು ಎಂದು ಆದೇಶನೀಡಲಾಗಿದೆ ಎಂದು ವಿವರಿಸಿದರು. ಪ್ರತಿ ತಿಂಗಳಿಗೊಮ್ಮೆ ತಾ.ಪಂ., ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ಜಿಲ್ಲಾಧಿಕಾರಿ ಗಳಿಗೆ ಸೂಚಿಸಲಾಗಿದೆ. ರಾಜ್ಯದ ಗಡಿ ರಸ್ತೆ ಅಭಿವೃದಿಗೆ ೮೫೦ ಕೋಟಿ ಮಂಜೂರು :ರಾಜ್ಯದ ಗಡಿಪ್ರದೇಶದ ರಸ್ತೆಗಳ ಅಭಿವೃದಿಗಾಗಿ ೮೫೦ ಕೋಟಿ ರು.ಮಂಜೂರು ಮಾಡಲಾ ಗಿದೆ. ಆಗಾಗ ಮಳೆ ಬೀಳುತ್ತಿರುವ ಕಾರಣ ರಸ್ತೆ ಕಾಮಗಾರಿ ಪ್ರಗತಿ ವಿಳಂಬವಾ ಗಿದೆ. ಜಡಿ ಮಳೆ ನಿಂತ ಮೇಲೆ ರಸ್ತೆ ಕಾಮಗಾರಿ ವೇಗವಾಗಿ ನಡೆಯಲಿದೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಿಗೆಮತ್ತೇ ಒಂದು ಕೋಟಿ ಮಂಜೂರು ಮಾಡ ಲಾಗಿದೆ. ರಾಜ್ಯದಲ್ಲಿ ೩೦:೫೪ ಯೊಜನೆಯಡಿಯಲ್ಲಿ ೩೫೦ ಕೋಟಿ ರು. ಮಂಜೂರು ಮಾಡಲಾಗಿದೆ. ಡಿ.೧ರ ಹೂಡಿಕೆದಾರರ ಸಮಾವೇಶದಿಂದ ಜಿಲ್ಲೆಗೆ ಹೆಚ್ಚು ಲಾಭ : ಸಿ.ಎಂ. ಡಿ.೧ ಮತ್ತು ೨ ರಂದು ಬೆಂಗಳೂರು ನಗರದಲ್ಲಿ ನಡೆಯುವ ವಿಶ್ವ ಕೃಷಿ ಬಂಡವಾಳ ಹೂಡಿಗರ ಸಮಾವೇಶನಡೆಯಲಿದ್ದು, ಇದರಲ್ಲಿ ರಾಜ್ಯದಲ್ಲಿ ಕೋಲಾರ ಜಿಲ್ಲೆಗೆ ಹೆಚ್ಚು ಲಾಭವಾಗಲಿದೆ. ಇಲ್ಲಿನ ತರಕಾರಿ, ಹೂ, ಬೆಳೆಗಳಿಗೆ ಸಂಬಂಧಿಸಿದ ಶೀತಲಿಕರಣ ಘಟಕಗಳನ್ನು ಪ್ರಾರಂಬಿಸುಲು ವಿಶೇಷ ಒತ್ತು ನೀಡಲಾಗುತ್ತಿದೆ ಈ ಬಗ್ಗೆ ಜಿಲ್ಲಾಧಿಖಾರಿಗಳು ಹೆಚ್ಚಿನ ಮಾಹಿತಿಯನ್ನು ಸರ್ಕಾರಕ್ಕೆ ಕಳೀಸಬೇಕೆಂದು ಹೇಳಿದರು. ಭ್ಯಾಗ್ಯಲಕ್ಷಿö್ಮ ಯೊಜನೆ , ಅಂಗವಿಕಲ, ವೃದ್ದಾಪ್ತ ಯೊಜನೆಗೆ ಹಣಮ ಈಗ ಬಿಡುಗಡೆಯಾಗಿದ್ದು, ಕೆಲಮ ತಿಂಗಳುಗಳಿಂದ ಇದ್ದ ಸಮಸ್ಯೆಯನ್ನು ನಿವಾರಿ ಸಲಾಗಿದೆ. ಮತ್ತೆ ಎಂದಿನಂತೆ ಸುಸೂತ್ರವಾಗಿ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್‌ ಮತ್ತಿತರ ಗಣ್ಯರು ಹಾಜರಿದ್ದರು.

No Comments to “ಶಾಶ್ವತ ಕುಡಿಯುವ ನೀರಿಗೆ ರು.೨೫೦ ಕೋಟಿ ಕೊಟ್ಟರೂ ಯೊಜನೆ ನೆನೆಗುದಿಗೆ”

add a comment.

Leave a Reply

You must be logged in to post a comment.