ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಜನಕ್ಕೆ ದ್ರೋಹ ಬಗೆಯಲಾರೆ-ಸಚಿವ ವರ್ತೂರ್‌

ಕೋಲಾರ: ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆುಯಾದ ನಂತರ ನಗರಸಭೆಗೆ ೬೦ ಕೋಟಿ.ರೂಗಳು ಮಂಜೂರಾಗಿದ್ದು, ಈ ಹಣದಲ್ಲಿ ನಗರದ ಒಳ ಚರಂಡಿ, ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಜಡಿ ಮಳೆಯ ಕಾರಣದಿಂದ ನಗರದ ರಸ್ತೆ ಕಾಮಗಾರಿಗಳು ವಿಳಂಭವಾಗುತ್ತಿವೆ ಎಂದು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಹೇಳಿದರು.
ನಗರದ ಹೌಸಿಂಗ್‌ ಬೋರ್ಡ್‌ನ ಉದಯಗಿರಿ ಬಡಾವಣೆ ಯಲ್ಲಿ ನಡೆದ ಕನ್ನೆಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವರು, ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿ ಗಳು ಪೂರ್ಣಗೊಳ್ಳಲಿದ್ದು, ನಗರದ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಳೆದ ೬೦ ವರ್ಷಗಳ ಇತಿಹಾಸದಲ್ಲಿ ಯಾಮದೇ ಜನಪ್ರತಿನಿಧಿ ನಗರಸಭೆಗೆ ಭಾರೀ ವೊತ್ತದ ಅನುದಾನ ಬಿಡುಗಡೆ ಮಾಡಿಸಿರಲಿಲ್ಲ. ನನ್ನ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿ ದ್ದರೂ ನಾನು ಸದಸ್ಯರಾಗಿ ಮಾಡಿದ್ದ ಕೆಲ ಸದಸ್ಯರು ಇದೀಗ ಪಕ್ಷ ಬದಲಿಸಿದ್ದಾರೆ. ಕೆಲ ಸದಸ್ಯರ ದ್ರೋಹದಿಂದ ತಾಮ ಮನನೊಂದಿದ್ದು, ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ಆಶಿಸುಮದಷ್ಟೇ ನನ್ನ ಕೆಲಸ. ಇವರು ಮಾಡಿರುವ ದ್ರೋಹಕ್ಕೆ ಜನರಿಗೆ ನಾನು ದ್ರೋಹ ಬಗೆಯಲಾರೆ. ಅವರು ನನ್ನ ಮೇಲಿ ಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತರಲಾರೆ ಎಂದರು.
ಉದಯಗಿರಿ ಬಡಾವಣೆಯಲ್ಲಿ ಸುಮಾರು ೧೬ ಗುಂಟೆಗಳ ಷ್ಟು ಜಮೀನು ಒತ್ತುವರಿಯಾಗಿದ್ದು, ಇದನ್ನು ತೆರಮಗೊಳಿಸಿ ಇಲ್ಲಿನ ಜನತೆಯ ವಾಯುವಿಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉದಯಗಿರಿ ಉದ್ಯಾನವನ ನಿರ್ಮಿಸುಮದಾಗಿ ಸಚಿವರು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಉದಯಗಿರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾನ್ವಿತರನ್ನು ಸನ್ಮಾನಿಸಲಾ ಯಿತು. ಸಂಘದ ವತಿಯಿಂದ ಸಚಿವ ಆರ್‌. ವರ್ತೂರು ಪ್ರಕಾಶ್‌ರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಿ.ರಘುರಾಂ, ಪ್ರಕಾಶ್‌, ಮಾಜಿ ಸದಸ್ಯ ಮುಕ್ಕಡ್‌ ವೆಂಕಟೇಶ್‌, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ರಾಜಣ್ಣ, ನಗರಸಭೆ ಸದಸ್ಯರಾದ ರೌತ್‌ ಶಂಕರಪ್ಪ, ಸೋಮಶೇಖರ್‌,ಸಂಘದ ಅಧ್ಯಕ್ಷ ಹೆಚ್‌. ವೆಂಕಟೇಶ್‌, ಸುಬ್ರಮಣಿಗೌಡ, ಕೀಲುಕೋಟೆ ಜಯರಾಂ, ಬೆಳ್ಳಾರಪ್ಪ, ನಾರಾಯಣಪ್ಪ ಮತ್ತಿತರರು ಇದ್ದರು.

No Comments to “ಜನಕ್ಕೆ ದ್ರೋಹ ಬಗೆಯಲಾರೆ-ಸಚಿವ ವರ್ತೂರ್‌”

add a comment.

Leave a Reply

You must be logged in to post a comment.