ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ನಂದಿ ಬೆಟ್ಟ, ಟಿಪ್ಪು ಜನ್ಮಸ್ಥಳ ದೇವನಹಳ್ಳಿ ಪ್ರವಾಸೋದ್ಯಮ ವ್ಯಾಪಿಗೆ:…೨೫ ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಅಭಿವೃಧ್ದಿ-ಸಚಿವ ಸುಭೊಧ್‌…..ಠಾಕ್ರೆಗೆ ಬುದ್ದಿ ನೆಟ್ಟಗಿಲ್ಲ-ಮಾಜಿ ಸಚಿವ ಶ್ರೀನಿವಾಸಗೌಡ….

ಗೌರಿಬಿದನೂರು.ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿ ಯಲ್ಲಿನ ವಿದುರಾಶ್ವತ್ಥ, ನಂದಿಬೆಟ್ಟ,ಟಿಪ್ಪುವಿನ ಜನ್ಮಸ್ಥಳವಾದ ದೇವನಹಳ್ಳಿಯನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ದಿ ಪಡಿಸಲು ೨೫ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಸುಭೋಧ್‌ ಕಾಂತ್‌ ಸಹಾಯ್‌ ಪ್ರಕಟಿಸಿದ್ದಾರೆ.
ಅವರು ಇಂದು ವಿದುರಾಶ್ವತ್ಥದಲ್ಲಿ ಸ್ವಾತಂತ್ರ ಉದ್ಯಾನವನ ,೬ ಮಾರ್ಗಗಳಲ್ಲಿ ಆರ್ಟೀಸೀ ಬಸ್ಸುಗಳಿಗೆ ಚಾಲನೆ ಹಾಗು ೯೮ಲಕ್ಷ ರೂಗಳ ಖರ್ಚಿನೊಂದಿಗೆ ನಿರ್ಮಾಣ ವಾಗಲಿರುವ ಕಲಾ ಭವನಕ್ಕೆ ಶಂಖುಸ್ಥಾಪನೆ ಮಾಡಿ ಮಾತನಾಡಿದರು. ಈ ಪುಣ್ಯ ಭೂಮಿ ಚಾರಿತ್ರಾತ್ಮಕವಾಗಿ ಹಾಗು ಪೌರಾಣಿಕವಾಗಿ ಪ್ರಸಿದ್ದಿ ಪಡದಿದೆ ಎಂದರು. ಈಗಾಗಲೇ ಕರ್ನಾಟಕದ ಹಂಪಿ ಪ್ರಸಿದ್ದವಾಗಿದೆ,ವಿಶ್ವದ ಅನೇಕ ದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ೨ಕೋಟಿ ೯೬ಲಕ್ಷ ೫೦ಸಾವಿರ ರೂಗಳೊಂದಿಗೆ ಅಭಿವೃದ್ದಿ ಪಡಿಸಿದ ಸ್ವಾತಂತ್ರ ಉದ್ಯಾನವನವನ್ನು ಉದ್ಘಾಟಿಸಲಾಗಿದೆ ಎಂದರು.ಈ ಕಾರ್ಯಕ್ರಮಮ ಸ್ವಾತಂತ್ರö್ಯ ಯೊಧರಿಗಾಗಿಯೆುಮೀಸಲಿಟ್ಟ ಕಾರ್ಯಕ್ರಮ. ವಿದುರಾಶ್ವತ್ಥದಲ್ಲಿ ಸ್ವಾತಂತ್ರö್ಯ ಚಳುವಳಿಯಲ್ಲಿ ಮಡಿದವರು, ತಮ್ಮ ಜೀವ ತೆತ್ತವರ, ಸ್ಮಾರಕ ವಿರುವ ಪವಿತ್ರ ಭೂಮಿ ಇದು. ಇದನ್ನು ಪ್ರವಾಸಿ ತಾಣ ವನ್ನಾಗಿ ಮಾಡುಮದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದವರು ತಿಳಿಸಿದರು.
ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಸಚಿವರಾದ ವೀರಪ್ಪ ವೊಯಿಲಿ ಮಾತ ನಾಡಿ ಇಲ್ಲಿನ ಅಭಿವೃದ್ದಿ ಕಾರ್ಯಗಳಿಗಾಗಿ ೫ಕೊಟಿ ೨೫ಲಕ್ಷಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ ಎಂದರು.
ಇದು ರಾಷ್ಟ್ರದಲ್ಲಿ ಉತ್ತಮ ಪ್ರವಾಸಿ ಕೇಂದ್ರ ವಾಗಲಿದೆ ಎಂದರು.ಇಲ್ಲಿ ಜನವರಿ ತಿಂಗಳಲ್ಲಿ ಸ್ವಾತಂತ್ರ ಸಮರ ಯೊಧರ ಸಮಾವೇಶ ನಡಿಯಲಿದೆ ಎಂದರು.ನಮ್ಮ ಹಿರಿಯರು ನಮಗೆ ನೀಡಿದ ಸ್ವಾತಂತ್ರವನ್ನು ಉಳಿಸಿಕೊಳ್ಳಲು ನಾಮಗಳು ಸ್ಮರಿಸಬೇಕೆಂದರು. ಇಲ್ಲಿ ಅಡಿಗೆ ಅನಿಲದ ಮೂಲಕ ಸದಾ ಉರಿಯುವ ಹುತಾತ್ಮರ ಜ್ಯೋತಿಯನ್ನು ಏರ್ಪಾಟು ಮಾಡಲಾಗುಮದು ಎಂದರು. ರಾಷ್ಟ್ರಭಕ್ತಿ ಯುವ ಪೀಳಿಗೆ ಯಲ್ಲಿ ರೂಡಿಸಿಕೊಳ್ಳಬೇಕೆಂದರು.
ಪ್ರಧಾನ ಭಾಷಣಕಾರರಾದ ಎಲ್‌.ಹನುಮಂತಯ್ಯ ಮಾತನಾಡಿ ಗಾಂಧಿಜೀ ಯವರ ಸರಳಜೀವನ,ಭ್ರಷ್ಠಾಚಾರರಹಿತ ಜೀವನ,ಅಳವಡಿಸಿ ಕೊಳ್ಳಬೆಕೆಂದರು. ಕನ್ನಡ ಭವನವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಗೌರಿಬಿದನೂರು ನನ್ನ ತವರು ಮನೆ ಇದ್ದ ಹಾಗೆ. ಕೇಂದ್ರ ಸಚಿವರಾದ ವೊಯಿಲಿ ಅವರ ಬಗ್ಗೆ ತಮಗೆ ವಿಶ್ವಾಸವಿದೆ. ಪಕ್ಷಾತೀತವಾಗಿ ಅವರು ಕೆಲಸ ಮಾಡಿದವರು. ಇಲ್ಲಿರುವ ಸಾರ್ವಜನಿಕ ಗ್ರಂಥಾಲ ಯಕ್ಕೆ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಉಚಿತ ಕನ್ನಡ ಪುಸ್ತಕಗಳನ್ನು  ಕೊಡುಮ ದಾಗಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ಥಳೀಯ ಶಾಸಕ ಶಿವಶಂಕರರೆಡ್ಡಿ ರವರು ಮಾತನಾಡಿ ಸ್ವಾತಂತ್ರö್ಯ ಯೊಧರ ಕುರಿತಾದ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಪ್ರಕಟವಾಗಬೇಕೆಂದರಲ್ಲದೇ ಮುಂದಿನ ದಿನಗಳಲ್ಲಿ ವಿದುರಾಶ್ವತ್ಥಮ ರಾಷ್ರದಲ್ಲಿ ಪ್ರಮುಖ ಪ್ರವಾಸಿ ತಾಣವಾಗಲಿದೆ ಎಂದು ತಿಳಿಸಿದರು.
ಅಖಿಲಭಾರತ ಸ್ವಾತಂತ್ರ ಸಮರ ಯೊಧರ ಸಂಘದ ಕಾರ್ಯದರ್ಶಿ ಎನ್‌. ಆರ್‌.ಮಲ್ಕಡ್‌ ಮಾತನಾಡಿ ಸ್ವಾತಂತ್ರ ಯೊದರ ಮಕ್ಕಳಿಗೆ ಉದ್ಯೋಗ ನೀಡ ಬೇಕೆಂದು ಬೇಡಿಕೆ ಮುಂದಿಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕದ ಜಲಿಯನ್‌ ವಾಲಾಬಾಗ್‌ ವಿದುರಾಶ್ವತ್ಥ ಪುಸ್ತಕ ಹಾಗೂ ಪ್ರವಾಸ್ಯೋದ್ಯಮ ಇಲಾಖೆಯ ಮಡಿಕೆ ಪತ್ರವನ್ನು, ಕೇಂದ್ರ ಸಚಿವರಾದ ಸುಭೋದ್‌ಕಾಂತ್‌ ಸಹಾಯ್‌ ಮತ್ತು ಡಾ.ಎಂ.ವೀರಪ್ಪ ವೊಯ್ಲಿ ರವರು ಬಿಡುಗಡೆ ಮಾಡಿದರು. ಜಾನಪದ ತಂಡಗಳು ಕಲಾಪ್ರದರ್ಶನ ನಡೆಸಿದಮ.
ಬಾಗೇಪಲ್ಲಿ ಶಾಸಕರಾದ ಎನ್‌.ಸಂಪಂಗಿ,ಜಿ.ಪಂ.ಅಧ್ಯಕ್ಷ  ಚಿನ್ನಪ್ಪಯ್ಯ, ಗೌರಿಬಿದನೂರಿನ ತಾ.ಪಂ.ಅಧ್ಯಕ್ಷ ಕೆ.ವಿ.ಶ್ರೀನಿವಾಸ್‌,ಜಿ.ಪಂ.ಸದಸ್ಯ ಸಿ.ಆರ್‌. ನರಸಿಂಹಮೂರ್ತಿ, ಗ್ರಾ.ಪಂ.ಅಧ್ಯಕ್ಷ ಆದಿಲಕ್ಷö್ಮಮ್ಮ,ಪ್ರವಾಸ್ಯೋದ್ಯಮ ಅಧಿಕಾರಿಗಳು ಹಾಗೂ ಚಿಕ್ಕ ಬಳ್ಳಾಪುರದ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಎನ್‌.ಸಿ.ಮುನಿಯಪ್ಪ,ಕನ್ನಡಸಂಸ್ಕøತಿ ಇಲಾಖೆಯ ಕಾರ್ಯದರ್ಶಿ  ಬಸವರಾಜು, ತಾ.ಪಂ.ಅಧ್ಯಕ್ಷ ಶ್ರೀನಿವಾಸ್‌,ಉಪಾಧ್ಯಕ್ಷ ಚೇತನ,ಗ್ರಾ.ಪಂ.ಅಧ್ಯಕ್ಷ ಆದಿಲಕ್ಷಮ್ಮ,  ತಾ.ಪಂ.ಸದಸ್ಯ ಅನಿತಾ ಗಂಗಾಧರ್‌,ಪುರಸಭೆ ಅಧ್ಯಕ್ಷ ಪ್ರಮೀಳಾ ಬಾಲಾಜಿ, ಮಾಜಿ ಅಧ್ಯಕ್ಷ ಗೀತಾಜಯಂದರ್‌,ಪುರಪಿತೃಗಳು,ತಾ.ಪಂ.ಸದಸ್ಯರು  ಮುಂತಾದವರು ಹಾಜರಿದ್ದರು.ಇದೇ ಸಂದರ್ಭದಲ್ಲಿ ೩೦ ಮಂದಿ ಸ್ವಾತಂತ್ಯ್ರ ಸೇನಾನಿಗಳಿಗೆ ಸತ್ಕರಿಸಲಾಯಿತು.ಹನೀಫ್‌ ತಂಡ ಪ್ರಾರ್ಥಿಸಿ,ವೆಂಕಟೇಶ ಸ್ವಾಗತಿಸಿ, ತಹಸಿಲ್ದಾರ್‌ ಡಾ.ಬಿ.ಸುಧಾರಿಂದ ವಂದನೆಗಳಾಯಿತು.

One Comment to “ನಂದಿ ಬೆಟ್ಟ, ಟಿಪ್ಪು ಜನ್ಮಸ್ಥಳ ದೇವನಹಳ್ಳಿ ಪ್ರವಾಸೋದ್ಯಮ ವ್ಯಾಪಿಗೆ:…೨೫ ಕೋಟಿ ವೆಚ್ಚದಲ್ಲಿ ಪ್ರವಾಸೊದ್ಯಮ ಅಭಿವೃಧ್ದಿ-ಸಚಿವ ಸುಭೊಧ್‌…..ಠಾಕ್ರೆಗೆ ಬುದ್ದಿ ನೆಟ್ಟಗಿಲ್ಲ-ಮಾಜಿ ಸಚಿವ ಶ್ರೀನಿವಾಸಗೌಡ….”

  1. KAVYA says:

    nandi betta it is a heaven of the earth, realy its fentabulous. i gone with my husband, daughter & my sister. really i enjoyed in this place. Tippu Sultha was born there, and the name of one place Tippu Drop.

Leave a Reply

You must be logged in to post a comment.