ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಕ್ರಮ-ಬಿಇಓ

ಕೋಲಾರ : ೧೦ನೇ ತರಗತಿಯ ಫಲಿತಾಂಶವನ್ನು ಶೇ.೮೨ ರಿಂದ ಕನಿಷ್ಠ ಈ ವರ್ಷ ಶೇ.೮೫ಕ್ಕೆ ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತದ ಸೂಚನೆ ಮೇರಿಗೆ ವಿಶೇಷವಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಗುರಿತಲುಪಲು ಎಲ್ಲಾ ಮುಖ್ಯೋಪ್ಯಾಯರು ಮತ್ತು ಶಿಕ್ಷಕರಿಗೆ ವಿಶೇಷ ಜವಾಬ್ದಾರಿ ಯನ್ನು ಕೊಟ್ಟಿದ್ದು ಎಲ್ಲಾ ಶಿಕ್ಷಣಾಧಿಕಾರಿಗಳು  ಕಾಯೊನ್ಮುಖ ರಾಗಿರುಮದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಶಿವಲಿಂಗಯ್ಯ ಹೇಳಿದರು.
ತಾಲ್ಲೂಕು ಪಂಚಾಯ್ತಿಯಲ್ಲಿಂದು ಅಧಿಕಾರಿಗಳ ಕೆಡಿಪಿ ಸಭೆಯನ್ನುದ್ದೇಶಿಸಿ ಅವರು ತಮ್ಮ ಇಲಾಖೆವಾರು ಪ್ರಗತಿ ಪರಿಶೀಲನಾ ವರದಿಯನ್ನು ತಿಳಿಸುತ್ತಿದ್ದರು.
೧೦ ನೇತರಗತಿಯ ಎಲ್ಲಾ ಮಕ್ಕಳನ್ನು ಒಂದು ದಿನದ ಪ್ರವಾಸವನ್ನು ಇಲಾಖೆಯಿಂದ ಕರೆದುಕೊಂಡು ಹೊಗಲಾಗು ಮದು.೭ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿರುವ ಎಲ್ಲಾ ಪರಿಶಿಷ್ಠ ಜಾತಿ ವರ್ಗದ ವಿದ್ಯಾರ್ಥಿಗಳನ್ನು ೨ ದಿನಗಳ ಕಾಲ ೫೦೦ ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಅವಕಾಶವಿದೆ. ಅಲ್ಪಸಂಖ್ಯಾತ ೩೦೦ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶವಿದೆ. ೩೦೦ ವಿದ್ಯಾರ್ಥಿಗಳು ಈಗಾಗಲೇ ಪ್ರವಾಸ ಮುಗಿಸಿದ್ದು, ಡಿ.೧೦ ರೊಳಗಾಗಿ ಎಲ್ಲಾ ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮ ಮುಗಿ ಯಲಿದೆ ಎಂದರು.ಡಿಸೆಂಬರ್‌ ಅಂತ್ಯಕ್ಕೆ ಕೃಷಿ ಮೇಳ: ಡಿ.ಅಂತ್ಯದ ಒಳಗೆ ತಾಲ್ಲೂಕಿನಲ್ಲಿ ೫ಸಾವಿರ ರೈತರ ಸಮಾವೇಶ ಗೊಳ್ಳುವಂತ ಕೃಷಿಮೇಳವನ್ನು ತಾಲ್ಲೂಕು ಜಲಾಯನ ಅಭಿವೃದ್ದಿ ಇಲಾಖೆ ಯಿಂದ ಅಯೊಜಿಸಲಾಗುಮದು ಎಂದು ಜಲಾಯನ ಅಭಿವೃದ್ದಿ ಇಲಾಖೆ ಅಧಿಕಾರಿ ತಿಳಿಸಿದರು.
ಎಲ್ಲಾ ಗ್ರಾ.ಪಂ. ವ್ಯಾಪ್ತುಇಯಲ್ಲಿ ತಲಾ ೪ ಪಶುಆರೋಗ್ಯ ಶಿಬಿರಗಳನ್ನು ನಡೆಸಲಾಗುದೆಂದು ಹೇಳಿದರು. ಇಲಾಖೆಯ ಕಾರ್ಯವ್ಯಾಪ್ತಿಗೆ ಬರುವ ಗ್ರಾಮಗಳ ಸಣ್ಣ ರೈತರಿಗೆ ೫ ಕುರಿ ಒಂದು ಟಗರು ಕೊಳ್ಳಲು ೨೫ ಸಾವಿರ ಅನುಧಾನವನ್ನು ೧೫ ಮಂದಿಗೆ ವಿಶೇಷ ಅಭಿವೃದ್ದಿ ಯೊಜನೆಯಡಿಯಲ್ಲಿ ನೀಡಲಾ ಗುಮದೆಂದರು.ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖಾ ವಾರು ಅಭಿವೃದಿಯನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರಮಾದೇವಿ, ಉಪಾಧ್ಯಕ್ಷ ಮಂಜುನಾಥ್‌, ಇ.ಓ ಕೆ.ಎಸ್‌.ಭಟ್‌ ಇದ್ದರು.

No Comments to “ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ಕ್ರಮ-ಬಿಇಓ”

add a comment.

Leave a Reply

You must be logged in to post a comment.