ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ರಸ್ತೆ ಅಗಲೀಕರಣ: ತೆರವಿಗೆ ಒಂದು ವಾರದ ಗಡುಮ….

ಕೋಲಾರ: ನಗರದ ಎಂ.ಬಿ ರಸ್ತೆಯಲ್ಲಿರುವ ವಿವಿಧ ಅಂಗಡಿಗಳ ಮಾಲೀಕರು ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು. ಇದಕ್ಕೆ ಒಂದು ವಾರದ ಕಾಲಾವಕಾಶ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿಗಳನ್ನು ತೆರಮಗೊಳಿಸದಿದ್ದರೆ ಇಡೀ ಜಿಲ್ಲಾಡಳಿತ ಜೆಸಿಬಿಗಳ ಮೂಲಕ ತೆರಮ ಕಾರ್ಯಾಚರಣೆಗೆ ಮುಂದಾಗುತ್ತದೆ, ಈ ಕಾರ್ಯಕ್ಕೆ ಅಡ್ಡಿಪಡಿಸಿದವರು ಜೈಲು ಪಾಲಾಗಬೇಕಾಗುತ್ತದೆ ಎಂದು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ವರ್ತೂರು ಪ್ರಕಾಶ್‌ ಅವರು ಎಚ್ಚರಿಸಿದರು. ನಗರದ ಹೊಸ ಬಸ್‌ ನಿಲ್ದಾಣದ ಬಳಿ ೨.೮೦ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿವಿಧ ಜಿಲ್ಲೆಗಳ ಜನತೆ ತಿರುಪತಿಗೆ ಎಂ.ಬಿ.ರಸ್ತೆ ಮೂಲಕವೇ ತೆರಳಬೇಕಾಗಿದ್ದು, ಈ ದಾರಿ ತುಂಬಾ ಕಿರಿದಾಗಿರುಮದರಿಂದ ಸಮಸ್ಯೆಯಾಗಿದೆ. ಈ ಹಿನ್ನಲೆಯಲ್ಲಿ ನಗರದ ಜನತೆಯ ಬಹು ದಿನಗಳ ಬೇಡಿಕೆಯಾದ ಎಂ.ಬಿ.ರಸ್ತೆ ಅಗಲೀಕರಣ ಕಾಮಗಾರಿ ಅನಿವಾರ್ಯ ಎಂದು ಪ್ರತಿಪಾದಿಸಿದರು. ಪಿಡಬ್ಲೂö್ಯಡಿ ಅಧಿಕಾರಿಗಳು ನಾಳೆ ರಸ್ತೆ ಅಗಲೀಕರಣಕ್ಕೆ ಮಾರ್ಕ್‌ ಮಾಡಲಿದ್ದು, ಅಂಗಡಿಗಳ ಮಾಲೀಕರು ಸಹಕರಿಸಬೇಕು. ಒಂದು ವಾರದೊಳಗೆ ತೆರಮಗೊಳಿಸಬೇಕು. ನಂತರ ಯಾಮದೇ ಘಳಿಗೆಯಲ್ಲಾದರೂ ಆಡಳಿತ ಯಂತ್ರ ಕಟ್ಟಡ ಕೆಡಮ ಕಾರ್ಯಾಚರಣೆಗೆ ಮುಂದಾಗಬಹುದು ಎಂದು ತಿಳಿಸಿದರಲ್ಲದೆ, ರಸ್ತೆ ಕಾಮಗಾರಿ ಮುಗಿದ ತಕ್ಷಣ ಸೋಡಿಯಂ ದೀಪಗಳ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದರು. ಈ ಎಂ.ಬಿ.ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು, ಸದಸ್ಯರುಗಳು ಜನರ ಮನವೊಲಿಸುವ ಮೂಲಕ ರಸ್ತೆ ಅಗಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಕರೆ ನೀಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಡಳಿತಾವಧಿಯಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗಾಗಿ ೮ ಕೋಟಿ. ರೂಗಳನ್ನು ಬಿಡುಗಡೆ ಮಾಡಿದ್ದರು ಎಂದು ಸ್ಮರಿಸಿಕೊಂಡ ಸಚಿವರು ನಗರದ ರಸ್ತೆಗಳು ಹಾಳಾಗಿರುಮದಕ್ಕೆ ಜನತೆ ಅಸಮಾಧಾನಗೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಗರದ ಜನತೆ ರಸ್ತೆಗಳ ವಿಚಾರದಲ್ಲಿ ಸಂತಸ ಪಡಲಿದ್ದಾರೆ ಎಂದರು. ಕಳೆದ ವಾರದಲ್ಲಿ ನಗರದ ಹಳೇ ಬಸ್‌ ನಿಲ್ದಾಣದ ಬಳಿ ನಡೆದಿರುವ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದಕ್ಕೆ ಇಂಜಿನಿಯರ್‌ಗಳೇ ನೇರ ಹೊಣೆ. ಗುತ್ತಿಗೆದಾರರಿಗೆ ಹಣ ಉಳಿಸಲು ಹೋಗಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ಮುಂದಿನ ದಿನಗಳಲ್ಲಿ ಇಂತಹ ಕಾಮಗಾರಿಗಳು ಮರುಕಳಿಸಿದರೆ ಪರಿಣಾಮ ನೆಟ್ಟಗಿರುಮದಿಲ್ಲ ಎಂದು ಸಚಿವರು ಎಚ್ಚರಿಸಿದರು. ನಗರದ ಬಹುತೇಕ ರಸ್ತೆಗಳು ಡಾಂಬರೀಕರಣಗೊಳ್ಳುತ್ತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಗುತ್ತಿಗೆದಾರರ ವಿರುದ್ಧವೂ ಕ್ರಮ ಕೈಗೊಳ್ಳುಮದಾಗಿ ಸಚಿವರು ಪ್ರಕಟಿಸಿದರು. ವೇದಿಕೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ರಘುರಾಂ, ನಜೀರ್‌ ಅಹಮದ್‌, ಪ್ರಕಾಶ್‌, ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್‌, ಮಾಜಿ ಸದಸ್ಯರಾದ ಮುಕ್ಕಡ್‌ ವೆಂಕಟೇಶ್‌, ಮಂಜುನಾಥ್‌, ಗೋರಾ, ಹಾಲಿ ಉಪಾಧ್ಯಕ್ಷ ಖಲೀಲ್‌, ಸದಸ್ಯರಾದ ಕೃಷ್ಣಪ್ಪ, ಸೋಮಶೇಖರ್‌, ರೌತ್‌ ಶಂಕರಪ್ಪ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಎನ್‌.ರಾಜಣ್ಣ, ವಕ್ಕಲೇರಿ ರಾಮು,ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಕೃಷ್ಣೇಗೌಡ,ಆಟೋ ಸುರೇಶ್‌ಕುಮಾರ್‌,ಮುನಿಯಪ್ಪ,ಕಠಾರಿಪಾಳ್ಯ ಮುನಿನಾರಾ ಯಣಪ್ಪ, ಗೋವಿಂದಪ್ಪ, ತ್ಯಾಗರಾಜ್‌ ಮುದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

No Comments to “ರಸ್ತೆ ಅಗಲೀಕರಣ: ತೆರವಿಗೆ ಒಂದು ವಾರದ ಗಡುಮ….”

add a comment.

Leave a Reply

You must be logged in to post a comment.