ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ನಾಳೆಯಿಂದ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ

ಕೋಲಾರ: ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ರ ಸಂಘ ಮತ್ತು ಉಪನ್ಯಾಸಕರ ಸಂಘಗಳ ಸಮನ್ವಯ ಸಮಿತಿ ಸಂಯುಕ್ತಾಶ್ರಯದಲ್ಲಿ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಡಿ.೮ ರಿಂದ ಪದವಿ ಪೂರ್ವ ಕಾಲೇಜು ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟ ಕಾಲದ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ.
ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವೇತನ ತಾರತಮ್ಯ ಖಂಡಿಸಿ ಜಂಟಿಯಾಗಿ ಈಹೋರಾಟಕ್ಕೆ ಇಳಿದಿದ್ದು, ರಾಜ್ಯ ಮಟ್ಟದ ಈ ಹೋರಾಟಕ್ಕೆ ಜಿಲ್ಲೆಯ ಈ ಎರಡೂ ಸಂಘಟನೆಗಳು ಸಮ್ಮತಿ ನೀಡಿ ಪ್ರತಿಭಟನೆಗೆ ಧುಮುಕಿವೆ.
ಈ ಹಿಂದೆ ಉಪನ್ಯಾಸಕರ ಹೋರಾಟದ ಫಲವಾಗಿ ಸರ್ಕಾರ ನೇಮಿಸಿದ್ದ ಸಮಿತಿ ೪ಮತ್ತು ೫ನೇ ವೇತನ ಆಯೊಗ ದಲ್ಲಿ ಈ ವರ್ಗಗಳಿಗೆ ಆಗಿರುವ ಅನ್ಯಾಯದ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಆದರೂ ಸರ್ಕಾರ ಸಮಸ್ಯೆ ಇತ್ಯರ್ಥಕ್ಕೆ ಸ್ಪಂದಿಸಿಲ್ಲ ಎಂಬುದು ಉಪನ್ಯಾಸಕರು ಮತ್ತು ಪ್ರಾಂಶುಪಲಾರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ಹಂತದ ಹೋರಾಟ: ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಮೂರು ಹಂತಗಳಲ್ಲಿ ಹೋರಾಟವನ್ನು ನಡೆಸಲು ತೀರ್ಮಾನಿಸಿದ್ದು, ವೊದಲ ಹಂತವಾಗಿ ಡಿ.೮ ರಂದು ಹಾಜರಾತಿಯಲ್ಲಿ ಸಹಿ ಮಾಡಿ ಕಾಲೇಜುಗಳಲ್ಲೇ ಉಳಿದು ತರಗತಿಗಳನ್ನು ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದಾದ ನಂತರ ಡಿ.೯ ರಂದು ಸಾಮೂಹಿಕ ರಜೆ ಹಾಕಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಎದಿರು ಮಧ್ಯಾಹ್ನ೧೨ಗಂಟೆಗೆ ಎಲ್ಲರೂ ಸೇರಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸುವ ನಿರ್ಧಾರ ಮಾಡಿದ್ದಾರೆ.
ಇದಾದ ನಂತರವೂ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸದಿದ್ದರೆ, ಡಿ.೧೦ ರಿಂದ ಹಾಜರಾತಿಯಲ್ಲಿ ಸಹಿ ಹಾಕಿ ಕಾಲೇಜುಗಳಲ್ಲೇ ಸಂಜೆವರೆಗೂ ಉಳಿದು ತರಗತಿಗಳನ್ನು ಅನಿರ್ಧಿಷ್ಟಕಾಲದವರೆಗೂ ಬಹಿಷ್ಕರಿಸಲು  ನಿರ್ಧರಿಸಲಾಗಿದೆ.
ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಪ್ರಮುಖ ಬೇಡಿಕೆಗಳೆಂದರೆ, ೧-೭-೨೦೦೫ ರಿಂದ ಪೂರ್ವಾನ್ವಯವಾಗು ವಂತೆ ಉಪನ್ಯಾಸಕರಿಗೆ ೧೪೦೫೦ ರೂ ಮತ್ತು ಪ್ರಾಂಶುಪಾಲರಿಗೆ ೧೮೧೫೦ ರೂ  ಮೂಲವೇತನ, ವೃಂದ ನೇಮಕಾತಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗಧಿಗೊಳಿಸಬೇಕು.
ಗುತ್ತಿಗೆ ಆಧಾರದ ಶಿಕ್ಷಕರಿಗೆ ಕಾಲ್ಪನಿಕ ವೇತನ ಕಡಿತ ಆದೇಶವನ್ನು ರದ್ದುಗೊಳಿಸಬೇಕು, ಅನುದಾನಿತ ಶಾಲಾ-ಕಾಲೇಜು ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಬಗೆಹರಿಸಬೇಕು, ಪಿಯು ಉಪನ್ಯಾಸಕರ ನೇಮಕಾತಿಯಲ್ಲಿ ಬಿಇಡಿ ಕಡ್ಡಾಯ ಕೈಬಿಡಬೇಕು ಎಂದು ಒತ್ತಾಯಿಸಲಾಗಿದೆ.
ಪದವಿ ಪೂರ್ವ ಕಾಲೇಜು ಅರ್ಹ ಉಪನ್ಯಾಸಕರಿಗೆ ಪದವಿ ಕಾಲೇಜು ಉಪನ್ಯಾಸಕರಾಗಿ ಬಡ್ತಿ ನೀಡಬೇಕು, ಅನುದಾನ ರಹಿತಿ ಕಾಲೇಜುಗಳ ಉಪನ್ಯಾಸಕರಿಗೆ ಸೇವಾ ಭದ್ರತೆ ಮತ್ತು ಕನಿಷ್ಟ ವೇತನ ನಿಗಧಿಗೊಳಿಸಿ ಸರ್ಕಾರ ಆದೇಶ ಹೊರಡಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ.

No Comments to “ನಾಳೆಯಿಂದ ಉಪನ್ಯಾಸಕರ ಅನಿರ್ಧಿಷ್ಟ ಮುಷ್ಕರ”

add a comment.

Leave a Reply

You must be logged in to post a comment.