ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ… ಉಪನ್ಯಾಸಕರ ತರಗತಿ ಬಹಿಷ್ಕಾರ ಆರಂಭ…

ಕೋಲಾರ: ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಣೆಗಾಗಿ ಒತ್ತಾಯಿಸಿ ಡಿ.೮ ಗುರುವಾರ ದಿಂದ  ಕರ್ನಾಟಕರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಬೆಂಗಳೂರು ಮತ್ತು ಸಮನ್ವಯ ಸಮಿತಿ ಸಂಯು ಕ್ತಾಶ್ರಯದಲ್ಲಿ ರಾಜ್ಯಾದ್ಯಂತ ಪದವಿ ಪೂರ್ವ ಕಾಲೇಜುಗಳಲ್ಲಿ ಅನಿರ್ದಿಷ್ಠಕಾಲ ತರಗತಿ ಬಹಿಷ್ಕಾರ ನಡೆಸಲಾಗುಮದೆಂದು  ಸಂಘದ ಮುಖಂಡ ಟಿ.ಕೆ.ನಟರಾಜ್‌ ತಿಳಿಸಿದರು.   ನಗರದಲ್ಲಿಂದು ಪತ್ರಿಕಾಗೊಷ್ಟಿಯಲ್ಲಿ ಅವರು ಮಾತನಾಡು ತ್ತಿದ್ದರು. ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪಿಯುಸಿ ಮೌಲ್ಯಮಾಪನ ಬಹಿಷ್ಕಾರ, ೪ನೇ ಮತ್ತು ೫ ನೇ ವೇತನ ಅಯೊಗದಲ್ಲಿ ಆದ ಅನ್ಯಾಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಮನವಿಗಳನ್ನು ಸಲ್ಲಿಸಲಾಗಿತ್ತು. ಜು.೭ ರಂದು ಒಂದು ದಿನ ಉಪವಾಸ ಸತ್ಯಾಗ್ರಹ,  ಹೀಗೆ ಆನೇಕ ಹೋರಾಟಗಳನ್ನು ಮಾಡುತ್ತಿದ್ದರೂ ಮಾಜಿ ಮುಖ್ಯಮಂತ್ರಿಗಳು ಮತ್ತು ಹಾಲಿ ಮುಖ್ಯಮಂತ್ರಿಗಳು ಪರಿಹಾರಕ್ಕೆ ನೀಡಿದ ಆವದಿಯಲ್ಲಿ ಯಾಮದೇ ಶಾಶ್ವತ ಪರಿಹಾರ ಕೊಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆದು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಈ ಪದವಿ ಪೂರ್ವ ಕಾಲೇಜುಗಳಲ್ಲಿ ಅನಿರ್ಧಿಷ್ಠಕಾಲ ತರಗತಿ ಬಹಿಷ್ಕಾರ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಅವರು ಹೇಳಿದರು. ಪ್ರಮುಖ ಬೇಡಿಕೆಗಳು : ಜು.೧ ೨೦೦೫ ರಿಂದ  ಪೂರ್ವನ್ವಯವಾಗುವಂತೆ ಉಪನ್ಯಾಸಕರಿಗೆ ರೂ. ೧೪,೦೫೦ ಮೂಲವೇತನ ನಿಗಧಿಗೊಳಿಸುಮದು.  ಪ್ರಾಂಶುಪಾಲರಿಗೆ ರೂ. ೧೮,೧೫೦ ಮೂಲವೇತನ ನಿಗಧಿಗೊಳಿಸುಮದು, ವೃಂದ ಮತ್ತು ನೇಮಕಾತಿಯಲ್ಲಿ ಪ್ರತ್ಯೇಕ ಶ್ರೇಣಿ ನಿಗಧಿ ಮಾಡುಮದು ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಂತೆ ಕರ್ನಾಟಕ ರಾಜ್ಯದಲ್ಲೂ ವೇತನ ಶ್ರೇಣಿಯಲ್ಲಿ ನೀಡುಮದು ಮತ್ತಿತರ ಆನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.  ಪತ್ರಿಕಾ ಗೋಷ್ಠಿಯಲ್ಲಿ ಉದಯ್‌ಕುಮಾರ್‌, ಕೆ.ಟಿ.ಮುನಿವೆಂಕಟಪ್ಪ, ಅಂಜುಮಾನ್‌ ಕಾಲೇಜಿನ ಪ್ರಾಂಶುಪಾಲರಾದ ಸೈಯಿದಾಖಾನಂ, ಸರ್ಕಾರಿ ಮಾದರಿ ಪದವಿ ಪೂರ್ವಕಾಲೇಜಿನ ಗಾಯತ್ರಿರೆಡ್ಡಿ, ಸಂಘದ ಮುಖಂಡರಾದ ರತ್ನಪ್ಪ, ಚಂದ್ರಪ್ಪ ಇದ್ದರು.

No Comments to “ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ… ಉಪನ್ಯಾಸಕರ ತರಗತಿ ಬಹಿಷ್ಕಾರ ಆರಂಭ…”

add a comment.

Leave a Reply

You must be logged in to post a comment.