ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಡಿ.೧೧ ರಂದು ನೀರಿನ ಸಮಸ್ಯೆಗೆ ಸಭೆ-ಸಚಿವ ಕೆ.ಹೆಚ್‌.ಮುನಿಯಪ್ಪ…

ಕೋಲಾರ:ಅವಿಭಾಜ್ಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದಾಗಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆಗೆ ಪರಿಹಾರ ಕಂಡುಕೊಳ್ಳಲು ಕೆ.ಹೆಚ್‌. ಮುನಿಯಪ್ಪನವರು ತಿಳಿಸಿದ್ದು,  ಈ ನಿಟ್ಟಿನಲ್ಲಿ ಎರಡೂ ಜಿಲ್ಲೆಗಳ ಎಲ್ಲಾ ಹಾಲಿ ಹಾಗೂ ಮಾಜಿ ಶಾಸಕರು, ಲೋಕಸಭಾ ಸದಸ್ಯರು, ಸಚಿವರು, ವಿಧಾನ ಪರಿಷತ್‌ ಸದಸ್ಯರು, ಪ್ರಗತಿಪರ ರೈತರು, ಸಮಾಜದ ಮುಖಂಡರು, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು, ಮತ್ತು ಕೃಷಿ ತಜ್ಞರು, ವ್ಯಾಪಾರ ಸಂಘ ಸಂಸ್ಥೆಗಳು,ಶಾಶ್ವತ ನೀರಾವರಿ ಹೋರಾಟದ ಸಮಿತಿ ಸದಸ್ಯರು, ಸಂಘಸಂಸ್ಥೆಗಳು ಪ್ರತಿನಿಧಿಗಳು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿ ಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು, ಪತ್ರಕರ್ತರು, ವಿದ್ಯುನ್ಮಾನ ಮಾಧ್ಯಮದವರು ಎಲ್ಲರೂ ಸೇರಿದಂತೆ ಸಲಹಾ ಸಭೆಯನ್ನು ಕರೆಯಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರು ಜಿಲ್ಲಾಧಿಕಾರಿಯವರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯದ ತಜ್ಞರು ಎರಡು ಜಿಲ್ಲೆಗಳಲ್ಲಿ ಒಣ ಭೂಮಿ ಬೇಸಾಯ, ನೀರಿನ ಮಿತ ಬಳಕೆ, ಮಳೆ ನೀರು ಕೊಯ್ಲು,ಬೆಳೆ ಪದ್ಧತಿಗಳ ಬೇಸಾಯದ ಬಗ್ಗೆ ಮಾಹಿತಿ ಯನ್ನು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನೀರಾವರಿ ಸಲಹಾ ಸಮಿತಿ ಸಭೆಯನ್ನು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಡಿ.೧೧ ರಂದು ಬೆಳಿಗ್ಗೆ ೧೦ಗಂಟೆಗೆ ಏರ್ಪಡಿಸ ಲು ತಿಳಿಸಲಾಗಿದೆ.ಈ ಸಭೆಯಲ್ಲಿ ಎರಡು ಜಿಲ್ಲೆಗಳ ನೀರಿನ ಅಭಾವ ನೀಗಿಸಲು ಸಲಹೆಗಳನ್ನು ಪಡೆದು ಕೊಳ್ಳಲಾಗುಮದು ಎಂದು ಅವರು ಹೇಳಿದ್ದಾರೆ.

No Comments to “ಡಿ.೧೧ ರಂದು ನೀರಿನ ಸಮಸ್ಯೆಗೆ ಸಭೆ-ಸಚಿವ ಕೆ.ಹೆಚ್‌.ಮುನಿಯಪ್ಪ…”

add a comment.

Leave a Reply

You must be logged in to post a comment.