ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಭದ್ರಾ ಮೇಲ್ದಡೆ ನೀರಾವರಿ ಯೊಜನೆ ಶೀಘ್ರ ಜಾರಿ-ಸಿಎಂ ಘೋಷಣೆ….

ತುಮಕೂರು: ಕೋಲಾರ,ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಎಲ್ಲಾ ಗ್ರಾಮಗಳಿಗೂ ಭದ್ರಾ ಮೇಲ್ದಂಡೆ ಯೊಜನೆಯಿಂದ ಶಾಶ್ವತ ನೀರೊದಗಿಸುವ ಕರುಡು ಸಿದ್ದ ವಾಗಿದ್ದು ಇದರ ಅನುಷ್ಟಾನಕ್ಕೆ ಪ್ರಥಮ ಆದ್ಯತೆ ನೀಡ ಲಾಗುಮದೆಂದು ಮುಖ್ಯಮಂತ್ರಿ ಸದಾನಂದಗೌಡರು ಘೋಷಿಸಿದ್ದಾರೆ. ಶನಿವಾರ ತುಮಕೂರು ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯಲ್ಲಿ ೧೧೩ ಕೋಟಿ ರೂಗಳ ಅಂದಾಜು ವೆಚ್ಚದ ಹಲಮ ಕಾಮಗಾರಿಗಳಿಗೆ ಹಸಿರು ನಿಷಾನೆ ತೋರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೋಲಾರ ಮತ್ತಿತರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುಮದನ್ನು ಸರ್ಕಾರ ಗಮನಿಸುತ್ತಿದೆ ಎಂದು ಅವರು ತಿಳಿಸಿದರು. ೨೦೧೧-೨೦೧೨ರಲ್ಲಿ  ಗ್ರಾಮ ಪಂಚಾಯಿತಿ ಎಂಪವರ್‌ಮೆಂಟ್‌ ಯೊಜನೆ ರಾಜ್ಯದಲ್ಲಿ  ಅನುಷ್ಟಾನಕ್ಕೆ ಬರುತ್ತಿರುಮದಕ್ಕೆ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದೆ. ಆದ್ದರಿಂದ ಕಳೆದ ಮೂರುವರೆ ವರ್ಷಗಳಲ್ಲಿ  ರಾಜ್ಯದ ಬಿಜೆಪಿ ಸರ್ಕಾರ ಗ್ರಾಮೀಣಾ ಭಿವೃದ್ದಿಗೆ ೧೬ ಸಾವಿರ ಕೋಟಿ ರೂ.ಗಳನ್ನು ವ್ಯಯಿಸಿದೆ ಎಂದರು. ತಿಪಟೂರಿನಲ್ಲಿ ೪ ಕೋಟಿ ರೂ.ಗಳ ವೆಚ್ಚದಲ್ಲಿ ಆದಷ್ಟು ಶೀಘ್ರ ಕೊಬ್ಬರಿ ಸಂಸ್ಕರಣಾಕೇಂದ್ರ ಆರಂಭಿಸಲಾಗುಮದು ಎಂದು ಅವರು ತಿಳಿಸಿದರು. ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಎತ್ತಿನ ಹೊಳೆಯಿಂದ ನೀರು ಸರಬರಾಜು ಮಾಡುವ ಯೊಜನೆಗೆ ೨೦೦ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದ ಗೌಡರು, ಗ್ರಾಮೀಣ ಕ್ಷೇತ್ರದ ಅಭಿವೃದ್ದಿಯಲ್ಲಿ ಇದುವರೆಗೆ ಆಡಳಿತ ನಡೆಸಿದ ಯಾಮದೇ ಸರ್ಕಾರಗಳು ಮಾಡದಷ್ಟು ಕೆಲಸಗಳನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು. ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸದ ಜಿ.ಎಸ್‌.ಬಸವರಾಜು, ಜಿ.ಪಂ. ಅಧ್ಯಕ್ಷ ಡಾ.ರವಿ, ಲೋಕಸಭಾ ಮಾಜಿ ಉಪಾಧ್ಯಕ್ಷ ಎಸ್‌. ಮಲ್ಲಿಕಾರ್ಜುನಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

No Comments to “ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಿಗೆ ಭದ್ರಾ ಮೇಲ್ದಡೆ ನೀರಾವರಿ ಯೊಜನೆ ಶೀಘ್ರ ಜಾರಿ-ಸಿಎಂ ಘೋಷಣೆ….”

add a comment.

Leave a Reply

You must be logged in to post a comment.