ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಎರಡೂ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ:…

ಕೋಲಾರ: ಜನರನ್ನು ದಿಕ್ಕುತಪ್ಪಿಸುವ ತಂತ್ರವಾದ ಎತ್ತಿನಹೊಳೆ ಯೊಜನೆಯನ್ನು ಕೈಬಿಟ್ಟು, ರಾಜ್ಯದ ೫೨ ತಾಲ್ಲೂಕುಗಳ ಬರಡು ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಡಾ: ಪರಮಶಿವಯ್ಯ ವರದಿ ವೈಜ್ಞಾನಿಕವಾಗಿದ್ದು, ಈ ಭಾಗದ ಜನರ ನೀರಿನ ದಾಹವನ್ನು ನೀಗಿಸುವಂತಹ ಈ ಯೊಜನೆಯನ್ನು ಜಾರಿಗೊಳಿಸಲು ಜ.೩೦ ರಂದು ನಡೆಯುವ ಕ್ಯಾಬಿನೆಟ್‌ ಸಭೆಯು ಒಮ್ಮತದ ನಿರ್ಣಯ  ಪ್ರಕಟಿಸಬೇಕು. ಇಲ್ಲವಾದರೆ ಕಾನೂನು ಉಲ್ಲಂಘನೆಯಂತಹ ಉಗ್ರಚಳುವಳಿ ಎದುರಿಸಬೇಕಾಗುತ್ತದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್.ರಮೇಶ್‌ಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೋಲಾರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಬುಧವಾರ ಏರ್ಪಡಿಸಿದ್ದ ಎತ್ತಿನಹೊಳೆ ಯೊಜನೆ ಜಾರಿ ವಿರೋಧಿಸಿ, ಡಾ: ಪರಮಶಿವಯ್ಯ ವರದಿ ಯೊಜನೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮಾಜಿ ಸಚಿವರು, ಮುಖಂಡರು, ಸಂಘ ಸಂಸ್ಥೆ ಮುಖಂಡರು ಗಾಂಧಿಚೌಕದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಮುನ್ನ ಪ್ರತಿಭಟನಾಕಾರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ವಿಧಾನ ಪರಿಷತ್‌ ಸದಸ್ಯ ಮತ್ತು ಮಾಜಿ ಅಧ್ಯಕ್ಷ ವಿ.ಆರ್ . ಸುದರ್ಶನ್‌ ಮಾತನಾಡಿ, ಜ.೩೦ ರಂದು ವಿಧಾನ ಸಭೆ ಅಧಿವೇಶನ  ನಡೆಯುತ್ತಿದ್ದು, ಬಿಜೆಪಿ ಸರ್ಕಾರ ಡಾ: ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವ  ಬರಡು ಜಿಲ್ಲೆಯಗಳಿಗೆ ಶಾಶ್ವತ ನೀರಾವರಿ ಯೊಜನೆ ಬಗ್ಗೆ ಅವರ ನಿಲುವೇನೆಂದು ಪ್ರಕಟಿಸಬೇಕು. ಆ ಅಧಿವೇಶವನ ಸಂದರ್ಭಕ್ಕೆ ಕೋಲಾರ,ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಜನತೆ  ಗ್ರಾಮೀಣ ಜನರ ಬೃಹತ್‌ ಬೆಂಬಲ ಮತ್ತು ಭಾಗವಹಿಸುವಿಕೆ ಯೊಂದಿಗೆ ಕೋಲಾರದಿಂದ ಪ್ರಾರಂಭಿಸಿ ನಾಲ್ಕು ಜಿಲ್ಲೆಗಳ ಮೂಲಕ ವಿಧಾನಸಭೆಗೆ  ಕಾಲು ನಡುಗೆ ಜಾಥಾ ಕಾರ್ಯಕ್ರಮವನ್ನು ಆಯೊಜಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು…

No Comments to “ಎರಡೂ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ:…”

add a comment.

Leave a Reply

You must be logged in to post a comment.