ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ನೋವಿನಿಂದ ನಿರ್ಗಮಿಸುತ್ತಿದ್ದೇನೆ-ಸಿಇಒ ಶಾಂತಪ್ಪ…. ಶ್ರೀನಿವಾಸಗೌಡರ ಬೃಹತ್‌ ಪಾದಯಾತ್ರೆ…

ಕೋಲಾರ : ಪ್ರಾಮಾಣಿಕವಾಗಿ ಸರ್ಕಾರಿ ಸೇವೆ ಸಲ್ಲಿಸಲು ಬಂದ ತಾಮ ಅದನ್ನು ಪೂರ್ಣಗೊಳಿಸದೆ ನೋವಿನಿಂದಲೇ ಜಿಲ್ಲೆಯಿಂದ ನಿರ್ಗಮಿಸುತ್ತಿದ್ದೇನೆಂದು ತಟಸ್ಥವಾಗಿ ಕೈ ಮುಗಿದರು… ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಒಡಂಬಡಿಕೆ ಕೊರತೆ ಯಿಂದ ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಾಗಿದ್ದ  ಅಗತ್ಯ ಅಭಿವೃದ್ದಿ ಕಾರ್ಯಗಳು ಆಗಲಿಲ್ಲ. ಎಂಬ ನೋವಿನ ಜೋತೆಗೆ, ತಮ್ಮ ಆಡಳಿತಾ ವಧಿಯ  ಕಹಿ ಅನುಭವಗಳ ನಡುವೆಯೂ ತಮ್ಮ ಇತಿಮಿತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ತೃಪ್ತಿ  ತಮಗಿದೆ ಎಂದು  ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್‌. ಶಾಂತಪ್ಪ  ತಮ್ಮನ್ನು ಭೇಟಿ ಮಾಡಿದ `ಕನ್ನಡ ತಿಲಕ’ ಪತ್ರಿಕೆಯೊಂದಿಗೆ ತಮ್ಮ ಭಾವನೆಗಳು ಮತ್ತು ಕಹಿ  ಅನುಭವಗಳನ್ನು ಹಂಚಿಕೊಂಡರು. ಜಿಲ್ಲೆಗೆ ರೂ. ೩೫೦ ಕೋಟಿ ಕುಡಿಯುವ ನೀರಿಗಾಗಿ ಅತಿ ಹೆಚ್ಚು ಅನುಧಾನ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಹಣ ಮಂಜೂರಾದ ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆ ೨ನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರಮ ಗಡಿ ಮತ್ತು ಹಿಂದುಳಿದ ಜಿಲ್ಲೆ ಎಂಬ ಯಾಮದೇ ರೀತಿಯಲ್ಲಿ ಜಿಲ್ಲೆಯನ್ನು ಕಡೆಗಣಿಸಿಲ್ಲ. ಜಿಲ್ಲೆಯಲ್ಲಿ ಕೊರೆಸಿರುವ  ೧೧೧ ಕೊಳವೆ ಬಾವಿಗಳಿಗೆ ಪಂಪ್‌ ಮತ್ತು ವೋಟಾರ್ ಅಳವಡಿಸಿಲ್ಲ. ಜನಪ್ರತಿ ನಿಧಿಗಳು ಬೋರು ಕೊರೆಸಲು ಉತ್ಸುಕರಾಗಿರುತ್ತಾರೆ. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳ ಬಗ್ಗೆ ನಿರ್ಲಕ್ಷ ತೊರುತ್ತಾ ರೆಂದರು.   ಜಿಲ್ಲೆಯಲ್ಲಿ ನೀರಿಲ್ಲದ ಕಡೆ ಕೊಳವೆ ಬಾವಿ ಕೊರೆಸಿಲ್ಲ, ಕೊಳವೆ ಬಾವಿ ಕೊರೆಸಿರುವ ಕಡೆ ಇನ್ನೂ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಇದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಮನ್ವಯತೆಯ ಕೊರತೆಯಿಂದ ಸಾವಿರಾರು ಮುಗ್ದ ಜನರು ಸಂಕಟ ಪಡುವಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಶಾಂತಪ್ಪ ವಿಷಾಧ ವ್ಯಕ್ತಪಡಿಸಿದರು…

No Comments to “ಕೋಲಾರ : ನೋವಿನಿಂದ ನಿರ್ಗಮಿಸುತ್ತಿದ್ದೇನೆ-ಸಿಇಒ ಶಾಂತಪ್ಪ…. ಶ್ರೀನಿವಾಸಗೌಡರ ಬೃಹತ್‌ ಪಾದಯಾತ್ರೆ…”

add a comment.

Leave a Reply

You must be logged in to post a comment.