ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಶೀಘ್ರ ಬಿಜೆಪಿ ಸರ್ಕಾರ ಪತನ….ದೇವೇಗೌಡರ ಕುಟುಂಬದವರನ್ನು `ಜೈಲಿಗೆ’ ಕಳುಹಿಸುಮದು ಅಷ್ಟು ಸುಲಭವಲ್ಲ…ಕುಮಾರಸ್ವಾಮಿ…

ಕೋಲಾರ : ರಾಜ್ಯ ಬಿಜೆಪಿ ಸರ್ಕಾರಕ್ಕೆ ಇನ್ನಾರು ತಿಂಗಳು ಮಾತ್ರ ಆಯಸ್ಸು ಇದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರೇ ಈ ಸರ್ಕಾರವನ್ನು ಪತನ ಮಾಡಲಿದ್ದಾರೆಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅವರು ಶನಿವಾರ ಕೋಲಾರ ತಾಲ್ಲೂಕಿನ ವೇಮಗಲ್‌ ಜಿಲ್ಲಾ ಪಂಚಾಯ್ತಿ ಉಪ ಚುನಾವಣೆಯ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಪರ ಕ್ಯಾಲನೂರು  ಗ್ರಾಮದಲ್ಲಿ ನಡೆದ ಭಾರಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ತಾಮ ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ೨೦ ತಿಂಗಳು ಅಧಿಕಾರ ನಡೆಸಿದರೂ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇನೆ. ರೈತರು ಕೇಳದಿದ್ದರೂ, ಅವರ ಕೃಷಿ ಸಾಲವನ್ನು ಮನ್ನ ಮಾಡಿಸಿದ್ದೇನೆ. ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್‌, ವೃದ್ದಾಪ್ಯ ವೇತನ ಮುಂತಾದಮಗಳನ್ನು ರಾಜ್ಯದ ಜನತೆಗೆ ನೀಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಕುತಂತ್ರದಿಂದ ಲೋಕಾಯುಕ್ತ ಕೋರ್ಟಿನಲ್ಲಿ ತಮ್ಮ ವಿರುದ್ದ ಡಿನೋಟಿಪಿಕೇಶನ್‌ ದೂರು ಸಲ್ಲಿಸಿ ತಮ್ಮನ್ನು ಜೈಲಿಗೆ ಕಳಿಸುವ ಸಂಚು ರೂಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ತಂತ್ರ ಪಲಿಸುಮದಿಲ್ಲ. ದೇವೇಗೌಡ ಮತ್ತು ಅವರ ಕುಟುಂಬ ಇಂತಹವರಿಗೆ ತಲೆ ಬಾಗುಮದಿಲ್ಲ. ನಾವೇನಿದ್ದರೂ ಈ ರಾಜ್ಯದ ಜನತೆಯ ಮೇಲೆ ವಿಶ್ವಾಸವಿಟ್ಟು ತಲೆ ಬಾಗುತ್ತೇವೆಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಈಚೆಗಷ್ಟೇ ದಿ.ಆಲಂಗೂರು ಶ್ರೀನಿವಾಸ್‌ರವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭರವಸೆ ನೀಡಿದಂತೆ ಕೋಲಾರ ಜಿಲ್ಲೆಗೆ ಶಾಶ್ವತ ನೀರು ಒದಗಿಸುತ್ತೇನೆಂದು ಮತ್ತೊಮ್ಮೆ ಪುನರ್ ರುಚ್ಚರಿಸಿದರು. ಪ್ರತಿಷ್ಠಿತ ಕ್ಷೇತ್ರವಾದ  ವೇಮಗಲ್‌ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ತಮ್ಮ ಅಭ್ಯರ್ಥಿ ಆಶಾ ಲೋಕೇಶ್‌ರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ರಾಜ್ಯದಲ್ಲಿ ಜೆಡಿಎಸ್‌ ಅಲೆ ಎದ್ದಿದೆ ಎಂಬ ಸಂದೇಶವನ್ನು ರವಾನಿಸಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು…

No Comments to “ಕೋಲಾರ : ಶೀಘ್ರ ಬಿಜೆಪಿ ಸರ್ಕಾರ ಪತನ….ದೇವೇಗೌಡರ ಕುಟುಂಬದವರನ್ನು `ಜೈಲಿಗೆ’ ಕಳುಹಿಸುಮದು ಅಷ್ಟು ಸುಲಭವಲ್ಲ…ಕುಮಾರಸ್ವಾಮಿ…”

add a comment.

Leave a Reply

You must be logged in to post a comment.