ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರದ ವೇಮಗಲ್‌ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ: ಇಂದು ಮತದಾನ…

ಕೋಲಾರ; ವೇಮಗಲ್‌ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾನಕ್ಕೆ ಇನ್ನೊಂದು ದಿನ ಗಡುವಿದ್ದಂತೆಯೆ ಇಲ್ಲಿನ ರಾಜಕೀಯ ಚಟುವಟಿಕೆಗಳು ಸೋಮವಾರ ನಡು ರಾತ್ರಿ ಸಮೀಪಿಸಿದರೂ ಬಿಡುವಿಲ್ಲದೇ ನಡೆದಮ..`ಕೋಟ್ಟೋನು ಕೋಡಂಗಿ..ಈಸ್ಕೊಂಡೋನು ಈರಭದ್ರ..’ ಇಲ್ಲಿ ಮಾತು ಪ್ರಸ್ತುತವಲ್ಲವೇ.. ವೊದಲಿಗೆ ಜಿಲ್ಲಾ ಪಂಚಾಯಿತಿ ಸ್ಪರ್ಧೆಯಲ್ಲಿ ನೀರಸವಾಗಿ ಕಂಡು ಬಂದಿದ್ದ ಜೆಡಿಎಸ್‌ ಕಾರ್ಯಕರ್ತರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ ನಂತರ ಹೊಸ ಹುರುಪಿನಿಂದ ಮತದಾರರ ಮನ ಓಲೈಸುಮದರಲ್ಲಿ ನಿರತರಾಗಿದ್ದಾರೆ. ವೊದಲಿನಿಂದಲೂ ಕಾಂಗ್ರೆಸ್‌ ಭದ್ರ ಕೋಟೆಯೆ ಆಗಿರುವ ವೇಮಗಲ್‌ ಕ್ಷೇತ್ರದಲ್ಲಿ ಬಹುತೇಕ ಮನೆ ಮನೆಗೂ ಕಾಂಗ್ರೆಸ್‌ ಕಾರ್ಯಕರ್ತರಿ ರುಮದರಿಂದ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚಿಸುವವರು ಹೆಚ್ಚಾಗಿಯೆ ಇದ್ದಾರೆ. ವಿಧಾನ ಪರಿಷತ್‌ ಸದಸ್ಯ ಹಾಗೂ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉದಯಶಂಕರ್‌ ಇಬ್ಬರೂ ಸ್ಥಳೀಯರೇ ಆಗಿರುಮದು ಸ್ಪರ್ಧೆಗೊಂದು ಪ್ರತಿಷ್ಠೆಯನ್ನು ಕಲ್ಪಿಸಿದೆ.  ಇಲ್ಲಿ ಸ್ಟುಡಿಯೊ ಮಂಜು, ಓಹಿಲೇಶ್ವರ, ಆರ್ಟಿಸ್ಟ್‌ ಜಯದೇವ ವೊದಲಾದ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿದ್ದರೂ, ಇಲ್ಲಿ ಯಾಮದೇ ಬಿಜೆಪಿ ನಾಯಕನ ಬೆಳವಣಿಗೆ ಇಲ್ಲದ ಕಾರಣ ಸಧ್ಯಕ್ಕೆ ಬಿಜೆಪಿ ಕಾರ್ಯಕರ್ತರು ಸರ್ಕಾರದ ಸಾಧನೆಗಳ ಜಪ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸಡ್ಡುಹೊಡೆದು ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸಿರುವ ಶಿವಕುಮಾರಗೌಡ ಅವರಿಗೇ ಇಲ್ಲಿ ನೆಲೆಯಿಲ್ಲದಾಗಿದೆ. ಇದುವರೆಗೂ ಶಿವಕುಮಾರಗೌಡರಿಗೆ ಜೈ ಎನ್ನುತ್ತಿದ್ದವರು ಕಳೆದ ರಾತ್ರಿಯಿಂದ ಜೆಡಿಎಸ್‌ ತೆಕ್ಕೆ ಸೇರಿರುಮದು ಸಧ್ಯಕ್ಕೆ ಶಿವಕುಮಾರಗೌಡರನ್ನು ಅನಾಥರನ್ನಾಗಿ ಮಾಡಿದೆ.  ಕಾಂಗ್ರೆಸ್‌ಗೆ ಸಡ್ಡು ಹೊಡೆದಿರುವ ಶಿವಕುಮಾರಗೌಡರೇ ಜೆಡಿಎಸ್‌ನೊಂದಿಗೆ ಕೈಜೋಡಿಸಿದ್ದಾರೆ ಎಂಬ ವದಂತಿಯೂ ಇಲ್ಲಿ ಹರಡಿದೆ…

No Comments to “ಕೋಲಾರದ ವೇಮಗಲ್‌ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ: ಇಂದು ಮತದಾನ…”

add a comment.

Leave a Reply

You must be logged in to post a comment.