ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ದಲಿತ ಸಂಯುಕ್ತ ರಂಗದ ಮುಖಂಡರಿಗೆ ಕಾಂಗೈ `ಟಿಕೇಟ್‌’ ಕೇಂದ್ರ ಸಚಿವ ಕೆ.ಹೆಚ್‌. ಮುನಿಯಪ್ಪಗೆ ಗಡಮ..ಡಾ. ಚಂದ್ರಶೇಖರ್…ವೇಮಗಲ್‌ ಚುನಾವಣೆಯಲ್ಲಿ ಶೇ.೭೭ ಮತದಾನ…

ಕೋಲಾರ: ಕಾಂಗ್ರೆಸ್‌ ಪಕ್ಷದಿಂದ ಮುಂಬರುವ ತಾಪಂ, ಜಿಪಂ,ಎಂಎಲ್‌ಎ ಸ್ಥಾನಗಳಿಗೆ ದಲಿತ ಸಂಯುಕ್ತ ರಂಗದ ಮುಖಂಡರಿಗೆ ಅವಕಾಶ ನೀಡುವ ಸ್ಪಷ್ಟ ಭರವಸೆಯನ್ನು ಸಂಸದ ಕೆ.ಎಚ್‌.ಮುನಿಯಪ್ಪ ಒಂದು ವಾರದೊಳಗೆ ಘೋಷಣೆ ಮಾಡಬೇಕು. ಇಲ್ಲವಾದರೆ ಮುಂದಿನ ೧೫ ದಿನಗಳಲ್ಲಿ ಕೆಜಿಎಫ್‌ ಮುಖ್ಯರಸ್ತೆಯಲ್ಲಿರುವ ಹಂಚಾಳ ಗೇಟಿನಲ್ಲಿ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಕಾರ್ಯಕರ್ತರ ಬೃಹತ್‌ ಸಭೆಯನ್ನು ಕರೆದು ಕಾಂಗ್ರೆಸ್‌ಗೆ ಸಂಯುಕ್ತ ರಂಗದ ಯಾವೊಬ್ಬರು ಬೆಂಬಲಿಸದಂತೆ ತೀರ್ಮಾನಿಸಲಾಗುಮದು ಎಂದು ಡಾ.ಚಂದ್ರಶೇಖರ್‌ ಹೇಳಿದರು.  ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕೇಂದ್ರ ರೈಲ್ವೇ ರಾಜ್ಯ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಬೆಂಬಲಿಸಿ ಸಂಯುಕ್ತ ರಂಗದ ಕಾರ್ಯಕರ್ತರೆಲ್ಲರೂ ಒಟ್ಟಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರುವಂತೆ ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಸಂಯುಕ್ತ ರಂಗದ ಬಹುತೇಕ ಜಿಲ್ಲೆ, ತಾಲ್ಲೂಕು ಪದಾಧಿಕಾರಿಗಳು ವಿರೋಧವನ್ನು ವ್ಯಕ್ತಪಡಿಸಿದ್ದರು. ಮುನಿಯಪ್ಪ ಅವರಿಂದ ಜಿಲ್ಲೆಯ ಬಹುಜನಕ್ಕೆ ಒಳಿತಾಗುವ ಬದಲು ಕೆಡುಕೇ ಹೆಚ್ಚಾಗಿ ಆಗಿದೆ. ಕಳೆದ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಸಂಯುಕ್ತ ರಂಗದ ಹಾರೋಹಳ್ಳಿ ನಾರಾಯಣಸ್ವಾಮಿ ಅಥವಾ ಎಂ.ಮುನಿರಾಜು ಇಬ್ಬರಲ್ಲಿ ಒಬ್ಬರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡುಮದಾಗಿ ಭರವಸೆ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಇವರನ್ನು ಕೈಬಿಟ್ಟು ತಮ್ಮ ಸಂಬಂಧಿ ಅಂಬರೀಶ್‌ಗೆ ಟಿಕೆಟ್‌ ನೀಡಿದ್ದಲ್ಲದೆ ಗೆಲ್ಲಿಸಿಕೊಂಡು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಆದ್ದರಿಂದ ಈ ಬಾರಿ ಅವರು ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡುಮದಾಗಿ ಘೋಷಿಸಿದಲ್ಲಿ ನಮ್ಮ ಬೆಂಬಲವನ್ನು ಕೊಡುತ್ತೇವೆ. ಇಲ್ಲವೇ ಕಾಂಗ್ರೆಸ್‌ ಪಕ್ಷ ಬಿಡುತ್ತೇವೆ ಎಂದರು….

No Comments to “ದಲಿತ ಸಂಯುಕ್ತ ರಂಗದ ಮುಖಂಡರಿಗೆ ಕಾಂಗೈ `ಟಿಕೇಟ್‌’ ಕೇಂದ್ರ ಸಚಿವ ಕೆ.ಹೆಚ್‌. ಮುನಿಯಪ್ಪಗೆ ಗಡಮ..ಡಾ. ಚಂದ್ರಶೇಖರ್…ವೇಮಗಲ್‌ ಚುನಾವಣೆಯಲ್ಲಿ ಶೇ.೭೭ ಮತದಾನ…”

add a comment.

Leave a Reply

You must be logged in to post a comment.