ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ: ಭ್ರಷ್ಟತೆಯಿಂದ `ಅಬಕಾರಿ’ ಇಲಾಖೆ ಮುಕ್ತ-ರೇಣುಕಾಚಾರ್ಯ…ರಾಜ್ಯಕ್ಕೆ ವೀರಶೈವರ ಕೊಡುಗೆ ಅಪಾರ-ಸಚಿವ ರೇಣುಕಾ..ಮುಳಬಾಗಿಲಿನಲ್ಲಿ ನುಡಿ…

ಕೋಲಾರ: ಆದಾಯವೊಂದೇ ಇಲಾಖೆಯ ಗುರಿಯಾಗಿಲ್ಲ. ಜನಸಾಮಾನ್ಯರ ಆರೋಗ್ಯ, ಏಳಿಗೆಯೂ ನಮ್ಮ ಆಧ್ಯತೆಯಾಗಿದೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದರು. ನಗರದ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಪತ್ರಕರ್ತರೊಡನೆ ಗುರುವಾರ ದಂದು ಮಾತನಾಡಿದ ಅವರು ಅಕ್ರಮಗಳೊಡನೆ ಕೈಜೋಡಿಸಿ ಭ್ರಷ್ಟವಾಗಿದ್ದ ಅಬಕಾರಿ ಇಲಾಖೆಗೆ ನಾನು ಸಚಿವನಾಗಿ ಕಾಲಿಟ್ಟ ದಿನದಿಂದಲೂ ಹೊಸ ರೂಪ ಕೊಡುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಕಳೆದ ಮೂರು ವರ್ಷಗಳಿಂದ ಇಲಾಖೆಯಿಂದ ಸಂಗ್ರಹಣೆಯಾಗಿರುವ ರಾಜಸ್ವ ಪ್ರಮಾಣಮ ೨೦೦೯ನೇ ಸಾಲಿನಲ್ಲಿ ರೂ.೭೧೦೦ ಕೋಟಿ, ೨೦೧೦ ನೇ ಸಾಲಿನಲ್ಲಿ ರೂ.೮೩೦೧ ಕೋಟಿ, ಈ ಸಾಲಿನಲ್ಲಿ ರೂ.೯೫೦೦ ಕೋಟಿ ನಿರೀಕ್ಷೆಯಿದೆ. ಈಗಾಗಲೇ ರೂ.೬೮೩೮ ಕೋಟಿ ಸಂಗ್ರಹಣೆಯಾಗಿದೆ. ಅತ್ಯಲ್ಪ ಅವಧಿಯಲ್ಲಿಯೆ ಸಾಕಷ್ಟು ಸುಧಾರಣೆಯನ್ನು ನಾನು ಇಲಾಖೆಯಲ್ಲಿ ಮಾಡಿದ್ದೇನೆ. ಬೆಳಗಾಂ, ಮಂಗಳೂರು, ಹಾಸನ್‌,ಬಿಜಾಪುರ, ಬಾಗಲಕೋಟೆ, ಶಿವವೊಗ್ಗ, ಗುಲ್ಭರ್ಗಾ,ರಾಯಚೂರು ಜಿಲ್ಲೆಗಳಲ್ಲಿ ಕಳ್ಳಬಟ್ಟಿ ತಯಾರಿಕೆ ವ್ಯಾಪಕವಾಗಿತ್ತು. ರಾಜ್ಯವಿಡೀ ೧೯೦೦ ಕಡೆ ಕಳ್ಳಬಟ್ಟೆ ದಂಧೆಯನ್ನು ರಾಜಾರೋಷವಾಗಿ ನಡೆಸಲಾಗುತ್ತಿತ್ತು. ಆದರೆ ಕಳ್ಳಬಟ್ಟಿ ನಿಷೇಧಕ್ಕೆ ನಾನು ಅಧಿಕಾರಿಗಳಿಗೆ ೪ ಗೋಡೆಗಳ ನಡುವೆ ಕುಳಿತು ಕೇವಲ ಆದೇಶ ಹೊರಡಿಸಲಿಲ್ಲ.ನಾನೂ ಖುದ್ದಾಗಿ ರೈಡುಗಳಲ್ಲಿ ಭಾಗಿಯಾಗಿದ್ದೇನೆ. ಈಗಾಗಲೇ ರಾಜ್ಯದ ಬಹುತೇಕ ಕಳ್ಳಬಟ್ಟಿ ಅಡ್ಡಾಗಳನ್ನು ಮುಚ್ಚಿಸಿದ್ದೇನೆ. ಹಾಸನ್‌, ಬಾಗಲಕೋಟೆ, ಬಿಜಾಪುರ ಕಡೆ ಇನ್ನೂ ಕೆಲವೆಡೆ ಕಳ್ಳಬಟ್ಟಿ ದಂಧೆ ಮುಂದುವರೆದಿರುವ ಮಾಹಿತಿಯಿದೆ. ಈ ಕುರಿತು ಗುಪ್ತದಳದ ನಿಗಾ ಇಡಲಾಗಿದೆ. ಆದಷ್ಟೂ ಬೇಗ ನಾನು ಮಾತು ಕೊಟ್ಟಂತೆ ರಾಜ್ಯವನ್ನು ಕಳ್ಳಬಟ್ಟಿ ಮುಕ್ತಗೊಳಿಸುತ್ತೇನೆ ಎಂದರು….

No Comments to “ಕೋಲಾರ: ಭ್ರಷ್ಟತೆಯಿಂದ `ಅಬಕಾರಿ’ ಇಲಾಖೆ ಮುಕ್ತ-ರೇಣುಕಾಚಾರ್ಯ…ರಾಜ್ಯಕ್ಕೆ ವೀರಶೈವರ ಕೊಡುಗೆ ಅಪಾರ-ಸಚಿವ ರೇಣುಕಾ..ಮುಳಬಾಗಿಲಿನಲ್ಲಿ ನುಡಿ…”

add a comment.

Leave a Reply

You must be logged in to post a comment.