ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ ಜಿಲ್ಲೆಯ 3 ಕ್ಷೇತ್ರದ…ಚುನಾವಣೆ ಫಲಿತಾಂಶದ `ಕ್ಲೈಮ್ಯಾಕ್ಸ್‌’ನಲ್ಲಿ ಜೆಡಿಎಸ್‌ ಜಯಭೇರಿ…ಕೋಲಾರ ಜಿಲ್ಲೆಯಲ್ಲಿ ಏರುತ್ತಿರುವ ಅಪರಾಧ ಪ್ರಕರಣಗಳಿಗೆ ತಡೆ ಎಂದು?…

ಕೋಲಾರ: ಗೊಂದಲ, ಗಲಾಟೆಗಳ ನಡುವೆ ಶುಕ್ರವಾರದಂದು ನಗರದ ಸರ್ಕಾರಿ ಕಿರಿಯ ಕಾಲೇಜಿನ ಕಟ್ಟಡದಲ್ಲಿ ಮತಎಣಿಕೆ ನಡೆದು ಅಂತಿಮ ಹಂತದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಶಾಲೋಕೇಶ್‌ ಗೆಲುಮ ಸಾಧಿಸಿದರು. ಒಟ್ಟು ೧೧ ಸುತ್ತುವಳಿ ಎಣಿಕೆಯಲ್ಲಿ ವೊದಲ ೪ ಸುತ್ತುವಳಿಗಳಲ್ಲಿ ವರ್ತೂರು ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ ಮುನ್ನಡೆ ಸಾಧಿಸಿದ್ದು, ನಂತರದ ಸುತ್ತುವಳಿಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಆಶಾಲೋಕೇಶ್‌ ಮುಂದಾಗಿದ್ದರು. ಕೊನೆಯ ಹಂತಕ್ಕೆ ಅವರೇ ಹೆಚ್ಚು ಮತಗಳಿಸಿದ್ದರು. ಇದನ್ನು ಘೋಷಿಸಿಯೂ ಆಗಿತ್ತು. ಆದರೆ ಈ ಹಂತದಲ್ಲಿ ಮತದಾನವಾದ ಮತಗಳಲ್ಲಿ ೭೧೮೦ ಮತಗಳ ವ್ಯತ್ಯಾಸ ಕಂಡು ಬಂದಿದ್ದು, ವರ್ತೂರು ಬಣದ ಗಮನಕ್ಕೆ ಬಂದು ಅವರು ನೂರಾರು ಸಂಖ್ಯೆಯಲ್ಲಿ ಮತಎಣಿಕೆ ಕೇಂದ್ರದ ಮುಂದೆ ಸೇರಿ ಮರು ಮತ ಎಣಿಕೆಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ಮೂಡಿದ್ದು, ಮತ ಎಣಿಕೆ ಕೇಂದ್ರದ ಬಾಗಿಲನ್ನು ಪೊಲೀಸರು ಬಂದು ಮಾಡಿದರು. ಮತ ಎಣಿಕೆ ಕೇಂದ್ರದ ಸುತ್ತಲೂ ನಿರ್ಮಿಸಿದ ಬ್ಯಾರಕ್‌ನ್ನು ದಾಟಿ ಆವರಣದ ಒಳ ಪ್ರವೇಶಿಸಿದ ವರ್ತೂರು ಬಣದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಕಟ್ಟಡವನ್ನು ಪ್ರವೇಶಿಸಲು ಪ್ರವೇಶಿಸಲು ಪ್ರಯತ್ನಿಸಿದರು. ಕೆಲಮ ಸಮಯ ಪೊಲೀಸರು, ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆಯಿತು. ಕೊನೆಗೆ ವರ್ತೂರು ಬಣದ ಬೆಗ್ಲಿ ಸೂರ್ಯಪ್ರಕಾಶ್‌ ಸ್ಥಳಕ್ಕೆ ಬಂದು ಚುನಾವಣಾಧಿಕಾರಿ ಪೆದ್ದಪ್ಪಯ್ಯ ಅವರೊಡನೆ ಸಮಾಲೋಚಿಸಿದರು. ಮತ ಎಣಿಕೆಯ ಸಂದರ್ಭದಲ್ಲಿ ವ್ಯತ್ಯಾಸ ಕಂಡು ಬಂದ ೭೧೮೦ ಮತಗಳು ಎಣಿಕೆಯಾಗಿದ್ದರೂ, ಅವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿದ ಪರಿಣಾಮ ಗಲಭೆಗೆ ಕಾರಣವಾಗಿದೆ ಎಂದು ಚುನಾವಣಾಧಿಕಾರಿ ಪೆದ್ದಪ್ಪಯ್ಯ ಈ ಸಂದರ್ಭದಲ್ಲಿ ಪ್ರಿಂಟ್‌ ಔಟ್‌ ಸಮೇತ ಸೂರ್ಯಪ್ರಕಾಶ್‌ ಅವರ ಮನವೊಲಿಸಲು ಪ್ರಯತ್ನಿಸಿದರು. ಅದರಂತೆ ಹೊಸ ಮತಸಂಖ್ಯೆಯನ್ನು ಘೋಷಿಸಲು ಅವರು ಮುಂದಾದಾಗ ಅವರನ್ನು ತಡೆದ ಸೂರ್ಯಪ್ರಕಾಶ್‌, ಸಹಕಾರ ಸಂಘದ ಅಧ್ಯಕ್ಷ ರಾಜಣ್ಣ ಹಾಗೂ ಇತರರು ಅವರಿಗೂ, ಪೆದ್ದಪ್ಪಯ್ಯ ಅವರಿಗೂ ಕೆಲ ಕ್ಷಣ ತಳ್ಳಾಟ ನಡೆಯಿತು. ಅವ್ಯಾಚ್ಯ ಶಬ್ಧ ಬಳಕೆಯೂ ಆಯಿತು. ಮತ ಎಣಿಕೆ ಕೇಂದ್ರದ ಹೊರಗೆ ಕಾರ್ಯಕರ್ತರ ಕಿರಿಚಾಟ, ಇಲ್ಲಿ ಅವರ ಮುಖಂಡರ ಕೂಗಾಟಗಳು ಸುಮಾರು ಹೊತ್ತು ಮುಂದುವರೆಯಿತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಪೆದ್ದಪ್ಪಯ್ಯ ಅವರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಸ್ಥಳೀಯ ತಹಶೀಲ್ದಾರ್ ಡಾ.ದಯಾನಂದ್‌ ನಾಪತ್ತೆಯಾಗಿದ್ದರು. ವಿಜೇತರೆಂದು ಘೋಷಿಸಲಾದ ಅಭ್ಯರ್ಥಿ ಆಶಾ ಮುಜುಗರ ದಿಂದ ಕೊಠಡಿ ಒಳ ಸೇರಿದ್ದರು. ಅವರೊಡನೆ ಸಾಕಷ್ಟು ಕಾರ್ಯಕರ್ತರಿಲ್ಲದ ಕಾರಣ ಕೊಠಡಿ ಸೇರಿದ್ದ ಅವರೊಡನಿದ್ದ ಮಹಿಳೆಯೊಬ್ಬರು ಕಿಟಕಿಯಿಂದ ಹೊರಗಡೆ ನಡೆಯುತ್ತಿದ್ದ ವಿಧ್ಯಮಾನಗಳನ್ನು ವೀಕ್ಷಿಸುತ್ತಿದ್ದರು. ಇದನ್ನು ಕೆಲವರು ಗಮನಿಸಿದ್ದನ್ನು ಕಂಡು ಬೆಚ್ಚಿದ ಆಕೆ ಕಿಟಕಿಯನ್ನು ಬಂದು ಮಾಡಿದರು. ಹೀಗೆ ಸುಮಾರು ಹೊತ್ತು ಇಲ್ಲಿ ಕೇವಲ ಕಿರಿಚಾಟ, ಗದ್ದಲವೇ ಮೂಡಿತ್ತು. ಈ ಸಂದರ್ಭದಲ್ಲಿ ವರ್ತೂರು ಬಣದ ಕಾರ್ಯಕರ್ತರೊಬ್ಬರು ಚುನಾವಣಾ ಧಿಕಾರಿ ಫಲಿತಾಂಶ ಘೋಷಿಸಲು ಸ್ಥಳದಲ್ಲಿದ್ದ ಮೈಕನ್ನು ಎತ್ತಿ ಕೆಳಗೆಸೆದರು. ಸ್ಥಳದಲ್ಲಿದ್ದ ಗ್ಯಾಸ್‌ ಸಿಲಿಂಡರ್ ಸಮೇತವಿರುವ ಲೈಟನ್ನೂ ಎಸೆಯಲು ಅವರು ಮುಂದಾದಾಗ ಸ್ಥಳದಲ್ಲಿದ್ದವರು ಅವರನ್ನು ತಡೆದು ಅವನ್ನು ಪಕ್ಕಕ್ಕೆ ತೆಗೆದಿಟ್ಟರು. ಇಲ್ಲವಾದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಂಭವವಿತ್ತು…

No Comments to “ಕೋಲಾರ ಜಿಲ್ಲೆಯ 3 ಕ್ಷೇತ್ರದ…ಚುನಾವಣೆ ಫಲಿತಾಂಶದ `ಕ್ಲೈಮ್ಯಾಕ್ಸ್‌’ನಲ್ಲಿ ಜೆಡಿಎಸ್‌ ಜಯಭೇರಿ…ಕೋಲಾರ ಜಿಲ್ಲೆಯಲ್ಲಿ ಏರುತ್ತಿರುವ ಅಪರಾಧ ಪ್ರಕರಣಗಳಿಗೆ ತಡೆ ಎಂದು?…”

add a comment.

Leave a Reply

You must be logged in to post a comment.