ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಿಕ್ಕಬಳ್ಳಾಪುರ : ಎತ್ತಿನಹೊಳೆ `ನೀರಾವರಿ’ ಯೊಜನೆ ಸಾಧ್ಯವಿಲ : ಪರಮಶಿವಯ್ಯ…ಶೈಕ್ಷಣಿಕ ಸಂಸ್ಥೆಗಳು ಸಮಾಜಕ್ಕೆ ಅಗತ್ಯವಾದ ಶಿಕ್ಷಣ ನೀಡಲಿ-ಗಣೇಶ್‌…

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ೬೨ ಟಿಎಂಸಿ ನೀರು ಬೇಕು. ಆದರೆ ಸರ್ಕಾರದ ಉದ್ದೇಶಿತ ಎತ್ತಿನ ಹೊಳೆ ಯೊಜನೆಯಿಂದ ಇಷ್ಟು ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ನೀರಾವರಿ ತಜ್ಞ ಡಾ.ಪರಮಶಿವಯ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೊಜನೆಯಿಂದ ೨೫ ಟಿಎಂಸಿ ನೀರು ಸಿಗಲಿದೆ. ೪೦ ಟಿಎಂಸಿ ನೀರು ಹರಿಸಲಾಗುಮದು ಎಂಬುದೆಲ್ಲಾ ಸುಳ್ಳು. ಕೇವಲ ೮ ಟಿಎಂಸಿ ನೀರು ಮಾತ್ರ ಲಭ್ಯವಾಗಲಿದೆ. ಇದರಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಕೂಡ ಸಾಧ್ಯವಿಲ್ಲ. ಈ ಯೊಜನೆ ಅನುಷ್ಠಾನಗೊಳಿಸಿದಲ್ಲಿ ನೀರನ್ನು ಮೇಲೆತ್ತಲು ವಿದ್ಯುತ್‌ ಬಳಕೆ ಮಾಡಬೇಕಾಗುತ್ತದೆ. ಇದಕ್ಕೆ ಮಾಸಿಕ ಕನಿಷ್ಠ ೨೫ ಕೋಟಿ ರೂ. ವೊತ್ತದ ವಿದ್ಯುತ್‌ ಅಗತ್ಯ ಬೀಳಲಿದೆ. ಆದರೆ ನನ್ನ ಯೊಜನೆ ಪ್ರಪಂಚದಲ್ಲೇ ವಿಶಿಷ್ಠ ಮಾದರಿಯಲ್ಲಿ ಕೇವಲ ಗುರುತ್ವಾಕರ್ಷಣೆ ಶಕ್ತಿಯನ್ನಾಧರಿಸಿದ ಯೊಜನೆ. ಕೇವಲ ಗುರುತ್ವಾಕರ್ಷಣೆ ಶಕ್ತಿಯಿಂದ ಪೋಷಕ ಕಾಲುವೆಗಳ ಮೂಲಕ ನೀರು ಹರಿಸಲಾಗುಮದು. ನನ್ನ ಯೊಜನೆಗೆ ಕೇವಲ ೯೪೦ ಹೆಕ್ಟೇರ್‌ ಭೂಮಿಯನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ ೨೦೦ ಎಕರೆಯಷ್ಟು ಮಾತ್ರ ಅರಣ್ಯ ಪ್ರದೇಶ. ಉಳಿದದ್ದು ಗುಡ್ಡಗಾಡು ಭೂಮಿ. ಇದರಿಂದ ಪರಿಸರಕ್ಕೆ ಯಾಮದೇ ರೀತಿಯ ಧಕ್ಕೆಯಾಗುಮದಿಲ್ಲ. ಆದ್ದರಿಂದ ತಮ್ಮ ಯೊಜನೆ ಬಗ್ಗೆ ಸಮಗ್ರವಾಗಿ ಚಿಂತನೆ ನಡೆಸಬೇಕು. ಆದರೆ ಯೊಜನೆ ಬಗ್ಗೆ ಗೊಂದಲ ಮೂಡಿಸಿ ಮುಚ್ಚಿಹಾಕುವ ಹುನ್ನಾರ ನಡೆಸಲಾಗುತ್ತಿದೆ. ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿ ನೀಡುತ್ತಿದ್ದಾರೆ ಎಂದು ಆಪಾದಿಸಿದ ಅವರು, ಕೇಂದ್ರ ಸಚಿವ ವೀರಪ್ಪ ವೊಯಲಿ ಮಾಜಿ ಮುಖ್ಯ ಮಂತ್ರಿಯಾಗಿದ್ದವರು. ವಿದ್ಯಾವಂತರು ಹಾಗೂ ಅನುಭವಮಳ್ಳವರು. ಆದ್ದರಿಂದ ಯೊಜನೆ ಬಗ್ಗೆ ಪರಾಮರ್ಶೆ ನಡೆಸಬೇಕು ಎಂದರು…

No Comments to “ಚಿಕ್ಕಬಳ್ಳಾಪುರ : ಎತ್ತಿನಹೊಳೆ `ನೀರಾವರಿ’ ಯೊಜನೆ ಸಾಧ್ಯವಿಲ : ಪರಮಶಿವಯ್ಯ…ಶೈಕ್ಷಣಿಕ ಸಂಸ್ಥೆಗಳು ಸಮಾಜಕ್ಕೆ ಅಗತ್ಯವಾದ ಶಿಕ್ಷಣ ನೀಡಲಿ-ಗಣೇಶ್‌…”

add a comment.

Leave a Reply

You must be logged in to post a comment.