ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಪರಮಶಿವಯ್ಯ ವರದಿಗೆ ಧ್ವಂಧ್ವ ಹೇಳಿಕೆ ವಿರುದ್ದ ಗುಡುಗಿದ ನಾಯಕರು: `ಸಿಎಂ’ ಸ್ಪಷ್ಟಪಡಿಸಲಿ: ಅನಂತರ ಹೋರಾಟ… ಜ. ೨೦ ರಂದು ಕೋಲಾರದ ದೇವರಾಜು ಅರಸು ಕಾಲೇಜಿಗೆ `ಸಿಎಂ’ ಆಗಮನ-ಡಾ. ಸಾಣಿಕೊಪ್ಪ..

ಕೋಲಾರ: ಜಿಲ್ಲಾ ಜನತೆ ಪ್ರತಿ ತೊಟ್ಟು ಕುಡಿಯುವ ನೀರಿಗೂ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಸದಾನಂದಗೌಡರು ಜನತೆಯ ಸಮಸ್ಯೆ ಬದಲಾಗಿ ಜನರ ಮತಗಳಿಗೆ ದುಂಬಾಲು ಬಿದ್ದು ಜಿಲ್ಲಾ ಸಮಸ್ಯೆಯನ್ನು ಕಡೆಗಣಿಸುತ್ತಿದ್ದಾರೆ. ಇವರ ಮುಂದಿನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಕಪ್ಪು ಭಾಮಟ ಪ್ರದರ್ಶಿಸಿ ಪ್ರತಿಭಟಿಸುವ ತೀರ್ಮಾನವನ್ನು ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆ, ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಳ್ಳಲಾಯಿತು. ಜಿಲ್ಲೆಯ ಜನತೆ ಕುಡಿಯುವ ನೀರಿಗಾಗಿ ಪರಮಶಿವಯ್ಯ ವರದಿ ಜಾರಿಗೆ ತರುವಂತೆ ಮನವಿ ಮಾಡಿದಾಗ, ತ್ವರಿತ ಕ್ರಮ ಕೈಗೊಂಡು ಸಮಸ್ಯೆ ನಿವಾರಣೆ ಮಾಡುಮದಾಗಿ ತುಮಕೂರಿನಲ್ಲಿ ಜನತೆಗೆ ಭರವಸೆಯನ್ನು ನೀಡಿ, ಶಿವವೊಗ್ಗದಲ್ಲಿ ಪರಮಶಿವಯ್ಯ ವರದಿಯನ್ನು ತಾಮ ವೊದಲಿ ನಿಂದಲೂ ವಿರೋಧಿಸುತ್ತಿರುಮದಾಗಿ, ಇದನ್ನು ಜಾರಿಗೆ ತರುಮದಿಲ್ಲ ಎಂದು ಹೇಳಿರುಮದು ಜಿಲ್ಲಾ ಜನತೆಗೆ ಎಸಗಿರುವ ದ್ರೋಹವಾಗಿದೆ. ಚಿಕ್ಕಮಗಳೂರಿನಲ್ಲಿ ಸಧ್ಯದಲ್ಲಿಯೆ ನಡೆಯಲಿರುವ ಉಪ ಚುನಾವಣೆಯಲ್ಲಿ ಮತಗಳನ್ನು ಸೆಳೆಯುಮದಕ್ಕಾಗಿ ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆಯನ್ನು ಕಡೆ ಗಣಿಸುತ್ತಿರುಮದು ಜಿಲ್ಲಾ ಜನತೆಗೆ ನೋಮಂಟು ಮಾಡಿದೆ. ಒಂದು ರಾಜ್ಯದ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಒಂದೊಂದು ಕಡೆ, ಒಬ್ಬೊಬ್ಬರಿಗೆ ಒಂದೊಂದು ರೀತಿ ಹೇಳುತ್ತಿರುಮದು ತಮ್ಮ ಪದವಿಯ ಗೌರವಕ್ಕೆ ಚ್ಯುತಿ ತರುವ ಕೃತ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿಯ ಮಾತನ್ನು ಸುಳ್ಳು ಎಂದು ಜನ ಅವರನ್ನು, ಅವರ ಮಾತನ್ನು ನಂಬದ ಪರಿಸ್ಥಿತಿಯನ್ನು ಅವರೇ ಸೃಷ್ಟಿಸಿಕೊಳ್ಳು ತ್ತಿದ್ದಾರೆ. ರಾಜ್ಯದ ಒಂದು ಜಿಲ್ಲೆಯ ಜನತೆ ಕುಡಿ ಯುವ ನೀರಿಗಾಗಿ ಇನ್ನಿಲ್ಲದ ತೊಂದರೆ ಅನುಭವಿ ಸುತ್ತಿದ್ದರೆ, ಅವರ ನೋವನ್ನು ಅರಿತುಕೊಂಡು ನಿವಾರಣೆಗಾಗಿ ಕ್ರಮ ಕೈಗೊಳ್ಳುವ ಬದಲಾಗಿ ರಾಜಕೀಯ ಚದುರಂಗದಾಟ ಆಡುತ್ತಿರುಮದನ್ನು ಜಿಲ್ಲಾ ಜನತೆ ಎಂದಿಗೂ ಕ್ಷಮಿಸುಮದಿಲ್ಲ ಎಂಬ ತೀರ್ಮಾನಕ್ಕೆ ಸಭೆಯು ಬಂದಿತು…

No Comments to “ಕೋಲಾರ : ಪರಮಶಿವಯ್ಯ ವರದಿಗೆ ಧ್ವಂಧ್ವ ಹೇಳಿಕೆ ವಿರುದ್ದ ಗುಡುಗಿದ ನಾಯಕರು: `ಸಿಎಂ’ ಸ್ಪಷ್ಟಪಡಿಸಲಿ: ಅನಂತರ ಹೋರಾಟ… ಜ. ೨೦ ರಂದು ಕೋಲಾರದ ದೇವರಾಜು ಅರಸು ಕಾಲೇಜಿಗೆ `ಸಿಎಂ’ ಆಗಮನ-ಡಾ. ಸಾಣಿಕೊಪ್ಪ..”

add a comment.

Leave a Reply

You must be logged in to post a comment.