ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ವಿವೇಕಾನಂದರ ದೇಶ ಪ್ರೇಮ ಉಳಿಸಿ-ವಾಸುದೇವಹೊಳ್ಳ…..ಚಿಂತಾಮಣಿ ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ…

ಕೋಲಾರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕೆಂದು ಪತ್ರಕರ್ತ ಎಂ.ವಾಸುದೇವ ಹೊಳ್ಳರವರು ತಿಳಿಸಿದರು. ಅವರು ಗುರುವಾರ ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ರೇಜಿ ಕ್ರಿಯೆಟರ್ಸ್‌ ಸಾಂಸ್ಕøತಿಕ ಕ್ರೀಡಾ ಯುವಕರ ಸಂಘ ಹಾಗೂ ನೆಹರು ಯುವಕ ಕೇಂದ್ರದ ವತಿಯಿಂದ ನಡೆದ ಸ್ವಾಮಿವಿವೇಕಾನಂದರ ೧೫೦ನೇ ಜನ್ಮ ದಿನಾಚರಣೆಯನ್ನು ಹಾಗೂ ಸಾಮಾಜಿಕ ಸೇವಾದಿನ ಕುರಿತು ಮಾತಾನಾಡುತ್ತಿದ್ದರು. ಸ್ವಾಮಿವಿವೇಕಾನಂದರ ಮಾನವೀ ಯತೆಯನ್ನು ಉಳಿಸಿಕೊಂಡು ಈ ದೇಶದಲ್ಲಿರುವ ಬಡತನ ವನ್ನು ಹೋಗಲಾಡಿಬೇಕು. ಹಿಂದೂ ಧರ್ಮದ ತತ್ವಗಳನ್ನು ಪಸರಿಸಬೇಕು ವಿವಿಧತೆಯಲ್ಲಿ ವೈವಿಧ್ಯತೆ ಹಾಗೂ ಐಕ್ಯತೆಯನ್ನು ಸಾರುವ ನಮ್ಮ ಜನಾಂಗದ ದೇಶಪ್ರೇಮವನ್ನು ಇಡೀ ಜಗತ್ತಿಗೆ ಸಾರಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್‌ಎನ್‌ಆರ್ ಆಸ್ಪತ್ರೆಯ ವೈದ್ಯ ಕೆ.ಶಿವಣ್ಣ ಮಾತಾನಾಡಿ ಯುವಕ,ಯುವತಿಯರು ಧೈರ್ಯದಿಂದ ಜೀವನದ ಗುರಿಯನ್ನು ಮುಟ್ಟಬೇಕು ಆಲಸ್ಯದಿಂದ ಬದುಕಬಾರದು ಛಲದಿಂದ ಮುನ್ನುಗ್ಗಬೇಕೆಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಮಹಮದ್‌ ಇಕ್ಬಾಲ್‌,ಅಹಮದ್‌ ಷರೀಪ್‌, ಭಾಸ್ಕರ್‌ ಹೆಚ್‌.ಕೆ. ಪತ್ರಕರ್ತ ಜೆ.ಸತ್ಯರಾಜ್‌, ಕವಿ ಗಾಯಕ ಶರಣಪ್ಪ ಗಬ್ಬೂರು, ಉಪಸ್ಥಿತರಿದ್ದರು.ಲವಕುಮಾರ್‌ ಸಂಗಡಿ ಗರಿಂದ ಪ್ರಾರ್ಥನೆ, ಸ್ವಾಗತ ಮಹೇಶ್‌ರಾವ್‌ ಕದಂ, ನಿರೂಪಣೆ ಶ್ರೀನಿವಾಸ ಡಿ ರಾಷ್ಟ್ರೀಯ ಯುವದಳದ ಕಾರ್ಯಕರ್ತ, ವಂದನಾರ್ಪಣೆ ಕೆ.ಟಿ.ಶಿವ ಕುಮಾರ ನೆರವೇರಿಸಿದರು…

No Comments to “ವಿವೇಕಾನಂದರ ದೇಶ ಪ್ರೇಮ ಉಳಿಸಿ-ವಾಸುದೇವಹೊಳ್ಳ…..ಚಿಂತಾಮಣಿ ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಸ್ವಸ್ಥ…”

add a comment.

Leave a Reply

You must be logged in to post a comment.