ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ: ನೇತ್ರಾವತಿ ತಿರುವಿಗೆ ಈಗಲೂ ವಿರೋಧ-ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ…

ಕೋಲಾರ; ನೇತ್ರಾವತಿ ನದಿ ತಿರುವಿಗೆ ಒತ್ತಾಯಿಸುವ ಯಾವೊಂದು ಯೊಜನೆಯನ್ನೂ ನಾನು ಖಂಡಿತಾ ಬೆಂಬಲಿಸುಮದಿಲ್ಲ. ಆದರೆ ಬರಪೀಡಿತ ಈ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಯಾಮದಾದರೊಂದು ಯೊಜನೆಯನ್ನು ನಾಲ್ಕೂ ಜಿಲ್ಲೆಗಳ ಪ್ರತಿನಿಧಿಗಳ ಜತೆ ಮುಂದಿನ ೧೫ ದಿನಗಳಲ್ಲಿ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ನಗರದ ಹೊರವಲಯದಲ್ಲಿರುವ ದೇವರಾಜ ಅರಸ್‌ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪತ್ರಕರ್ತರೊಡನೆ ಮಾತನಾಡಿ ನಾನು ವೊದಲಿ ನಿಂದಲೂ ಪಶ್ಚಿಮ ಘಟ್ಟಗಳ ಮೂಲಕ ಸಮುದ್ರ ಸೇರುವ ಪೂರ್ವಭಿಮುಖ, ಪಶ್ಚಿಮಾಭಿಮುಖ ನದಿಗಳ ನೀರನ್ನು ಬೇರೆಡೆಗೆ ಹರಿಸುವ ಪರಮಶಿವಯ್ಯ ವರದಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಇದರಲ್ಲಿ ಎರಡು ಮಾತಿಲ್ಲ ಎಂದರು. ಜಿಲ್ಲೆಯಲ್ಲಿ ಕೆರೆ-ಬಾವಿಗಳು ಒಣಗಿ ನಿಂತಿವೆ. ಕೊಳವೆ ಬಾವಿಗಳಲ್ಲಿ ನೇರವಾಗಿ ಫ್ಲೋರೈಡ್‌ ಸುರಿ ಯುತ್ತಿದೆ. ಜನಕ್ಕೆ, ಜಾನುವಾರುಗಳಿಗೆ ನೀರಿಲ್ಲದಾಗಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯೆ ಬೆಂಗಾಡಾಗುತ್ತದೆ. ಆದ್ದರಿಂದ ಜಿಲ್ಲೆಗೆ ಪರಮಶಿವಯ್ಯ ವರದಿಯಂತೆ ನೇತ್ರಾವತಿ ನೀರನ್ನು ಹರಿಸಿ ಎಂದು ಇಲ್ಲಿನ ಮಾಜಿ ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು ಬರಪೀಡಿತ ಈ ನಾಲ್ಕೂ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಕುಡಿಯುವ ನೀರು ಕೊರತೆಯನ್ನು ನಿವಾರಿಸಲು ನಾನು ಬದ್ಧನಾಗಿದ್ದೇನೆ. ಇದಕ್ಕಾಗಿ ಅಗತ್ಯ ಯೊಜನೆಯನ್ನು ತಯಾರಿಸಲು ನಾನು ಸಿದ್ಧ. ಇದಕ್ಕಾಗಿಯೆ ಮುಂದಿನ ೧೫ ದಿನಗಳಲ್ಲಿ ಈ ನಾಲ್ಕೂ ಜಿಲ್ಲೆಯ ಆಯ್ದ ಪ್ರತಿನಿಧಿಗಳನ್ನು ಚರ್ಚೆಗೆ ಕರೆಯುತ್ತೇನೆ.ಈ ಸಂದರ್ಭದಲ್ಲಿ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತ, ಸಾಧು ಎನ್ನುವ ಯೊಜನೆಯನ್ನು ಜಿಲ್ಲೆಗೆ ಖಂಡಿತಾ ಕೊಡುತ್ತೇನೆ ಎಂದು ಭರವಸೆ ನೀಡಿದರು…

No Comments to “ಕೋಲಾರ: ನೇತ್ರಾವತಿ ತಿರುವಿಗೆ ಈಗಲೂ ವಿರೋಧ-ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ…”

add a comment.

Leave a Reply

You must be logged in to post a comment.