ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಶಾಶ್ವತ ನೀರಾವರಿ ಯೊಜನೆಗೆ ಸರಕಾರ ಬದ್ಧ-ಸಚಿವ ವರ್ತೂರು ಪ್ರಕಾಶ್‌…ಕೋಲಾರದ ಹೋಟೆಲ್‌ ಆಹಾರ ಶುಚಿ,ರುಚಿ, ದರ `ಯತ್ತ’ ಸಾಗಿದೆ..ಕಣ್ಮುಚ್ಚಿದ ಅಧಿಕಾರಿಗಳು…

ಕೋಲಾರ: ಕೋಲಾರ ಸೇರಿದಂತೆ ನಾಲ್ಕು ಜಿಲ್ಲೆ ಗಳಿಗೆ ಶಾಶ್ವತ ಕುಡಿಯುವ ನೀರುಒದಗಿಸುವ ಯೊಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಬಿಜೆಪಿ ಸರಕಾರ ಬದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಸರಕಾರ, ಜನಪ್ರತಿನಿಧಿ,ನೀರಾವರಿ ಹೋರಾಟ ಸಮಿತಿ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆದು ಯಾವ ಯೊಜನೆಯಿಂದ ನೀರು ಹರಿಸಬೇಕೆಂಬುದನ್ನು ತೀರ್ಮಾನಿಸಲಾಗುಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್‌ ಪ್ರಕಟಿಸಿದರು. ನಗರದ ಸಾರಿಗೆ ಸಂಸ್ಥೆ ಡಿಪೋ ಮುಂಭಾಗದ ಜೋಡಿ ರಸ್ತೆಗೆ ೧ ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರು ಹಾಕುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಕಳೆದ ಆರು ದಶಕಗಳ ಅವಧಿಯಲ್ಲಿ ಜಿಲ್ಲೆಯಿಂದ ಘಟಾನುಘಟಿ ರಾಜಕಾರಣಿಗಳು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಆದರೆ,ಬಿಜೆಪಿ ಸರಕಾರ ಮಾತ್ರವೇ ಕೋಲಾರ ಸೇರಿ ದಂತೆ ನಾಲ್ಕು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಯೊಜನೆಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನ ಗೊಳಿಸಲು ಸಿದ್ಧತೆ ನಡೆಸಿದೆ. ಈ ವಿಚಾರದಲ್ಲಿ ಪ್ರಚಾರ ಬಯಸುವವರ ತಪ್ಪಭಿಪ್ರಾಯದ ಹೇಳಿಕೆಗಳಿಗೆ ಜನತೆ ಕಿವಿಗೊಡಬಾರದು ಎಂದರು. ಕೋಲಾರ ನಗರಸಭೆಗೆ ಹಿಂದೆಂದೂ ಬಾರದಷ್ಟು ಹಣ ಸರಕಾರದಿಂದ ಬಿಡುಗಡೆಯಾಗಿದ್ದು, ನಗರದ ವ್ಯಾಪ್ತಿಯಲ್ಲಿ ಸುಮಾರು ೭೫ ಕೋಟಿ ರೂಪಾಯಿಗಳ ಕಾಮಗಾರಿಗಳು ನಡೆಯುತ್ತಿದ್ದು, ಫೆಬ್ರವರಿ ಅಂತ್ಯದೊಳ ಗಾಗಿ ಕೋಲಾರದ ಚಿತ್ರಣವೇ ಬದಲಾಗಲಿದೆ, ಬಹುತೇಕ ರಸ್ತೆಗಳು ಡಾಂಬರೀಕರಣವಾಗಲಿದೆಯೆಂದು ಪ್ರಕಟಿಸಿದರು…

No Comments to “ಕೋಲಾರ : ಶಾಶ್ವತ ನೀರಾವರಿ ಯೊಜನೆಗೆ ಸರಕಾರ ಬದ್ಧ-ಸಚಿವ ವರ್ತೂರು ಪ್ರಕಾಶ್‌…ಕೋಲಾರದ ಹೋಟೆಲ್‌ ಆಹಾರ ಶುಚಿ,ರುಚಿ, ದರ `ಯತ್ತ’ ಸಾಗಿದೆ..ಕಣ್ಮುಚ್ಚಿದ ಅಧಿಕಾರಿಗಳು…”

add a comment.

Leave a Reply

You must be logged in to post a comment.