ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೆಜಿಎಫ್‌ನಲ್ಲಿ ನುಡಿ ತೇರುವಿಗೆ ಚಾಲನೆ:..ರಾಜ್ಯದಲ್ಲಿ `ಕನ್ನಡ’ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ…ನನ್ನದೇ ಸರ್ಕಾರದ ವಿರುದ್ಧ ಗಂಟಾಘೋಷವಾಗಿ ಧ್ವನಿ ಎತ್ತಿ ಹೇಳುತ್ತೇನೆ-ಮುಖ್ಯಮಂತ್ರಿ ಚಂದ್ರು….

ಕೋಲಾರ: ಶಿಕ್ಷಣ ಸಂಪೂರ್ಣವಾಗಿ ಕನ್ನಡೀಕರಣವಾಗಿಲ್ಲ, ಶಿಕ್ಷಣ ವ್ಯಾಪಾರದಲ್ಲಿ ಒಂದು ಪಂಗಡದವರು ಭಾಷೆಯ ಕೊಲೆ ಮಾಡುತ್ತಿದ್ದಾರೆ. ಒಂದು ಭಾಷೆ ಸತ್ತರೆ, ಅಲ್ಲಿನ  ಬದುಕು ಸಾಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದರು. ಕೆಜಿಎಫ್‌ ನಗರಸಭೆ ಮೈಧಾನದಲ್ಲಿ ಮಂಗಳವಾರದಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೊಗದಲ್ಲಿ ಏರ್ಪಡಿಸಿದ್ದ ಕನ್ನಡ ನುಡಿ ತೇರು ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದ ೩೦ ಜಿಲ್ಲೆಗಳ ಪೈಕಿ ೧೯ ಜಿಲ್ಲೆಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ೫೨ ಜಿಲ್ಲೆಗಳಲ್ಲಿ ಕನ್ನಡ ಬಳಕೆ ಕ್ರಮೇಣ ಕಡಿಮೆಯಾಗುತ್ತಿದೆ. ನಮ್ಮ ಔಧಾರ್ಯವೋ ಅಥವಾ ಇಲ್ಲಿನ ಸೋದರ ಭಾಷೆಗಳ ಪ್ರಾಬಲ್ಯವೋ ಕನ್ನಡ ಭಾಷೆಯು ತನ್ನ ಹುಟ್ಟು ರಾಜ್ಯದಲ್ಲಿಯೆ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಇದೊಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಗಂಭೀರ ವಿಷಯವಾಗಿದೆ ಎಂದರು. ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರವೇ ಮುಂದಾಗಿ ರುಮದು ಇನ್ನೊಂದು ಶೋಚನೀಯ ಕೃತ್ಯವಾಗಿದೆ. ನನ್ನದೇ ಸರ್ಕಾರದ ವಿರುದ್ಧ ನಾನು ಈ ವಿಷಯವನ್ನು ಗಂಟಾಘೋಷವಾಗಿ ಧ್ವನಿ ಎತ್ತಿ ಹೇಳುತ್ತೇನೆ. ಇಂತಹ ಸಂದರ್ಭದಲ್ಲಿ ಕನ್ನಡದ ಅಸ್ಥಿತ್ವವಾದರೂ ಉಳಿಯುಮದು ಹೇಗೆ? ಎಂದು ಅವರು ಪ್ರಶ್ನಿಸಿದರು. ಒಂದೆಡೆ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ಇನ್ನೊಂದು ಕಡೆ ಪೋಷಕರನ್ನು ಆಕರ್ಷಿಸಲು ವ್ಯಾಪಾರಕ್ಕಾಗಿ ಇಂಗ್ಲೀಷ್‌ ಮಾದ್ಯಮದ ಶಾಲೆಗಳನ್ನು ತೆರೆಯಲಾಗುತ್ತಿದೆ. ಇದೊಂದು ಕನ್ನಡ ಸಂಕ್ರಮಣ ಕಾಲಘಟ್ಟವಾಗಿದೆ. ಕನ್ನಡ ಶಾಲೆಗಳನ್ನು ಮುಚ್ಚುಮದೊಂದೇ ಸಮಸ್ಯೆಗೆ ಪರಿಹಾರ ಎನಿಸುಮದಿಲ್ಲ. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಬದಲಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಏರಿಸುಮದಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳುಮದು,ಇಲ್ಲಿನ ಮೂಲಭೂತ ಕೊರತೆಗಳನ್ನು ನಿವಾರಿಸುಮದು, ಸ್ಥಳೀಯರನ್ನು ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಕಳುಹಿ ಸುವಂತೆ ಮಾಡುಮದು, ಬೋಧನಾ ಶೈಲಿಯನ್ನು ಇನ್ನಷ್ಟು ಆಕರ್ಷಕ ಹಾಗೂ ಸರಳಗೊಳಿಸುಮದು ಅಗತ್ಯ. ಇದನ್ನು ಸರ್ಕಾರಮ ಮನಗಾಣುಮದು ಒಳಿತು. ರಾಜ್ಯದ ೫೨ ಗಡಿ ತಾಲ್ಲೂಕು ಭಾಗಗಳಲ್ಲಿ ೩೨ ಕಡೆ ಕನ್ನಡ ಭವನಗಳನ್ನು ನಿರ್ಮಿಸಲಾಗುಮದು. ಇಲ್ಲಿ ಕನ್ನಡ ಬಳಕೆಯನ್ನು ಪ್ರೋತ್ಸಾಹಿಸುವ ಹತ್ತಾರು ಕಾರ್ಯ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುಮದು. ಇದಕ್ಕಾಗಿ ಕೆಲವೊಂದು ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ ಎಂದರು…

No Comments to “ಕೆಜಿಎಫ್‌ನಲ್ಲಿ ನುಡಿ ತೇರುವಿಗೆ ಚಾಲನೆ:..ರಾಜ್ಯದಲ್ಲಿ `ಕನ್ನಡ’ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ…ನನ್ನದೇ ಸರ್ಕಾರದ ವಿರುದ್ಧ ಗಂಟಾಘೋಷವಾಗಿ ಧ್ವನಿ ಎತ್ತಿ ಹೇಳುತ್ತೇನೆ-ಮುಖ್ಯಮಂತ್ರಿ ಚಂದ್ರು….”

add a comment.

Leave a Reply

You must be logged in to post a comment.