ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಮತದಾರರ ನೋಂದಣಿ ತೃಪ್ತಿಕರವಾಗಿಲ್ಲ-ಡಿಸಿ ಮನೋಜ್‌ಕುಮಾರ್ ಮೀನಾ…ಚಿಕ್ಕಬಳ್ಳಾಪುರ : ಬಾಲ ಕಾರ್ಮಿಕ ನಿರ್ಮೂಲನೆ ಅಗತ್ಯ-ಡಿಸಿ ಡಾ. ಎನ್‌. ಮಂಜುಳ….

ಕೋಲಾರ: ಜಿಲ್ಲೆಯಲ್ಲಿ ನೂತನ ಮತದಾರರ ನೋಂದಣಿಯು ತೃಪ್ತಿಕರವಾಗಿ ನಡೆಯುತ್ತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಇನ್ನಷ್ಟು ಹೆಚ್ಚಿನ ಒತ್ತು ಕೊಟ್ಟು ನೋಂದಣಿ ಸಂಖ್ಯೆಯನ್ನು ಏರಿಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್‌ ಕುಮಾರ್ ಮೀನಾ ಕರೆ ನೀಡಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೊಗದಿಂದ ಬುಧವಾರದಂದು ಏರ್ಪಡಿಸಿದ್ದ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರದ ಪ್ರತಿಯೊಬ್ಬರೂ ಯಾಮದೇ ಧರ್ಮ, ಲಿಂಗ ತಾರತಮ್ಯವಿಲ್ಲದೇ ಮತದಾನದಲ್ಲಿ ಪಾಲ್ಗೊಳ್ಳುಮದಕ್ಕೆ ಮತ ದಾನ ಹಕ್ಕು ಸಿಗಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರು ತಮ್ಮ ಪ್ರಸ್ತಾವನೆಯಲ್ಲಿ ಸಂವಿಧಾನದ ಪ್ರಮುಖ ಆಶಯವನ್ನು ಕುರಿತು ಹೇಳುವಾಗ ತಿಳಿಸಿದ್ದಾರೆ. ಅದರಂತೆಯೆ ೧೮ ವರ್ಷ ವಯೊಮಿತಿಯ ಪ್ರತಿಯೊಬ್ಬರಿಗೂ ಮತದಾನ ಹಕ್ಕು ದಕ್ಕುತ್ತಿದೆ. ಆದರೆ ಇದಕ್ಕಾಗಿ ಪ್ರತಿ ಡಿಸೆಂಬರ್‌ ತಿಂಗಳಿನಲ್ಲಿ ಮತದಾರರ ಪಟ್ಟಿ ಪರಿಷ್ಕರಿಸುವ ಸಂದರ್ಭದಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದು ಎಂದು ಅವರು ಹೇಳಿದರು.ನಮೂನೆ ೬ ರ ಮೂಲಕ ತಮ್ಮ ಹೆಸರುಗಳನ್ನು ನೋಂದಾ ಯಿಸಬಹುದು.ನಮೂನೆ೭ರ ಮೂಲಕ ಹೆಚ್ಚುವರಿ ಯಾಗಿರುವ ಹೆಸರನ್ನು, ಎರಡು ಕಡೆ ನೋಂದಣಿಯಾದ ಹೆಸರನ್ನು ರದ್ದು ಪಡಿಸಬಹುದು, ನಮೂನೆ ೮ ರ ಅರ್ಜಿಯನ್ನು ಸಲ್ಲಿಸುವ ಮೂಲಕ ಒಂದೆಡೆಯಿಂದ ಇನ್ನೊಂದು ಕ್ಷೇತ್ರಕ್ಕೆ ತಮ್ಮ ಹೆಸರನ್ನು ವರ್ಗಾಯಿಸಬಹುದಾಗಿದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಸುಮದು ಕಾನೂನು ಪ್ರಕಾರ ಅಪರಾಧ ಎಂದು ಅವರು ತಿಳಿಸಿದರು…

No Comments to “ಕೋಲಾರ : ಮತದಾರರ ನೋಂದಣಿ ತೃಪ್ತಿಕರವಾಗಿಲ್ಲ-ಡಿಸಿ ಮನೋಜ್‌ಕುಮಾರ್ ಮೀನಾ…ಚಿಕ್ಕಬಳ್ಳಾಪುರ : ಬಾಲ ಕಾರ್ಮಿಕ ನಿರ್ಮೂಲನೆ ಅಗತ್ಯ-ಡಿಸಿ ಡಾ. ಎನ್‌. ಮಂಜುಳ….”

add a comment.

Leave a Reply

You must be logged in to post a comment.