ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಹೇಗಾದರೂ ಮಾಡಿ ಕೋಲಾರ ಜಿಲ್ಲೆಗೆ ನೀರು ತಂದು…ಚರಿತ್ರೆಯಲ್ಲಿ ಉಳಿವೆ-ಸಚಿವ ವರ್ತೂರು ಪ್ರಕಾಶ್‌…ಸದಾನಂದಗೌಡರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ನಿಶ್ಚಿಂತೆಯಿಂದ ಆಡಳಿತ ನಡೆಸುತ್ತಾರೆ-ವರ್ತೂರ್…

ಕೋಲಾರ: ಸರ್.ಎಂ.ವಿಶ್ವೇಶ್ವರಯ್ಯ ಅಣೆಕಟ್ಟು ನಿರ್ಮಿಸಿ ಹೆಸರಾದರು, ಟಿ.ಚನ್ನಯ್ಯ ಜಿಲ್ಲೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಅಮರರಾದರು, ಇದೇ ರೀತಿ ನಾನೂ ಜಿಲ್ಲೆಗೆ ಪರಮಶಿವಯ್ಯ ವರದಿ ಅನುಸಾರ ಜಿಲ್ಲೆಗೆ ತಂದು ಜಿಲ್ಲೆಯ ಚರಿತ್ರೆಯಲ್ಲಿ ಉಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜವಳಿ ಖಾತೆ ಸಚಿವರಾಸ ವರ್ರೂರು ಆರ್.ಪ್ರಕಾಶ್‌ ಹೇಳಿದರು. ನಗರದ ವಿಶ್ವೇಶ್ವರಾಯ ಕ್ರೀಡಾಂಗಣ ದಲ್ಲಿ ಗುರುವಾರದಂದು ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಪತ್ರಕರ್ತರೊಡನೆ ಮಾತನಾಡುತ್ತಾ ಅವರು ಹೀಗೆ ಹೇಳಿದರು. ನನಗೆ ಸ್ವಲ್ಪ ಜ್ಞಾನ ಕಡಿಮೆ. ವೊದಲ ಬಾರಿ ಶಾಸಕನಾದವನು. ಹೀಗಾಗಿ ಏನೇನೋ ಮಾತನಾಡಿ ಬಿಡುತ್ತಿದ್ದೆನು. ಕಾವೇರಿ ನೀರು ಜಿಲ್ಲೆಗೆ ತರುತ್ತೇನೆ ಎಂದೂ ಶಾಸಕನಾದ ವೊದಲಿಗೆ ಹೇಳಿಕೆ ನೀಡಿಬಿಟ್ಟಿ ದ್ದೆನು. ಆದರೆ ಈಗ ನನಗೂ ಮೂರು ವರ್ಷದ ಅನುಭವವಿದೆ. ಹೀಗಾಗಿ ಈಗ ಹೇಳುತ್ತಿದ್ದೇನೆ. ಜಿಲ್ಲೆಗೆ ಪರಮಶಿವಯ್ಯ ವರದಿ ಅನುಸಾರ ನೀರುಣಿಸಲು ನನ್ನಿಂದಷ್ಟೇ ಸಾಧ್ಯ. ಯರಗೋಳ್‌ ಯೊಜನೆಗೆ ಅರಣ್ಯ ಭೂಮಿ ಸಕ್ರಮಕ್ಕೆ ದೆಹಲಿಗೆ ಹೋಗಿ, ಅಲ್ಲೇ ಇದ್ದು, ಅನುವೋಧನೆ ಪಡೆದುಕೊಂಡೇ ಬರುತ್ತೇನೆ ಎಂದು ಅವರು ಘೋಷಿಸಿದರು. ಎರಡು ಕಡೆ ಎರಡು ಥರಾ ಹೇಳಿಕೆ ನೀಡಿರುಮ ದಕ್ಕೆ ನಾನು ಮುಖ್ಯಮಂತ್ರಿ ಸದಾನಂದಗೌಡರನ್ನು ಕೇಳಿದ್ದೇನೆ. ಅವರು ಜಿಲ್ಲೆಯ ಪ್ರಮುಖರನ್ನು ಸಧ್ಯದಲ್ಲಿಯೆ ಸಭೆ ಕರೆದು ಸಮಸ್ಯೆಗೆ ಪರಿಹಾರಕ್ಕಾಗಿ ತೀರ್ಮಾ ನಿಸೋಣ ಎಂದು ಭರವಸೆ ನೀಡಿದ್ದಾರೆ. ಸರ್ಕಾರಮ ಪೂರ್ಣಾವಧಿ ಆಡಳಿತ ನಡೆಸುತ್ತದೆ. ಸದಾನಂದ ಗೌಡರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ನಿಶ್ಚಿಂತೆಯಿಂದ ಆಡಳಿತ ನಡೆಸುತ್ತಾರೆ. ಹೀಗಾಗಿ ನೀಡಿದ ಎಲ್ಲಾ ಭರವಸೆಗಳನ್ನು ಇದೇ ಬಜೆಟ್‌ನಲ್ಲಿ ಪೂರೈಸಲು ನಾನು ಬದ್ಧ ಎಂದು ಅವರು ಹೇಳಿದರು…

No Comments to “ಹೇಗಾದರೂ ಮಾಡಿ ಕೋಲಾರ ಜಿಲ್ಲೆಗೆ ನೀರು ತಂದು…ಚರಿತ್ರೆಯಲ್ಲಿ ಉಳಿವೆ-ಸಚಿವ ವರ್ತೂರು ಪ್ರಕಾಶ್‌…ಸದಾನಂದಗೌಡರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ನಿಶ್ಚಿಂತೆಯಿಂದ ಆಡಳಿತ ನಡೆಸುತ್ತಾರೆ-ವರ್ತೂರ್…”

add a comment.

Leave a Reply

You must be logged in to post a comment.