ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಿಕ್ಕಬಳ್ಳಾಪುರ ಜಿಲ್ಲಾಭಿವೃದ್ಧಿಗೆ ಯೊಜನೆಗಳ ಭರಪೂರ:..ಸರ್ಕಾರದಲ್ಲಿ `ಪಾರದರ್ಶಕತೆ’ ಇದೆ-ಸಿಎಂ ಸದಾನಂದಗೌಡ…ಬಿಜೆಪಿ ದಿಗ್ಗಜರಾದ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರ ಒಗ್ಗಟ್ಟಿನ ಪ್ರದರ್ಶನ….

ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಯ ಮೂವರು ದಿಗ್ಗಜರಾದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಲಿ ಸಿಎಂ ಸದಾನಂದಗೌಡ್ರು, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಇಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಒಗ್ಗಟ್ಟು ತೋರಿಸುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಅಚ್ಚರಿ ಸಾರಿದ್ದಾರೆ. ಇಲ್ಲಿನ `ನಂದಿ ರಂಗ’ ಮಂದಿರದಲ್ಲಿ ನಡೆದ ಸಮಾವೇಶದಲ್ಲಿ ಈ ಸಮ್ಮಿಲನದಿಂದ ಹಗಲು ಕನಸು ಕಾಣದಿರುವಂತೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಸಹಜವಾಗೇ ನಗುಮುಗದ ಮುಖ್ಯ ಮಂತ್ರಿ ಸದಾನಂದಗೌಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾಮ ಮೂವರು ಒಗ್ಗಟ್ಟಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ೧೫೦ ಸ್ಥಾನಗಳನ್ನು ಗೆಲ್ಲುವ ಗುರಿ ನಮ್ಮದಾಗಿದೆ. ಮೂವರು ಸೇರಿ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿದ್ದೇವೆ. ಅಧಿಕಾರ ಶಾಶ್ವತವಲ್ಲ. ವಿಚಾರ ಶಾಶ್ವತ. ಆದ್ದರಿಂದ ರಾಜನೀತಿಯ ಪ್ರಕಾರ ಕೆಲಸ ಮಾಡುತ್ತೇವೆ. ಬಿಜೆಪಿ ಕಾರ್ಯಕರ್ತರಿಗೆ ನೋವಾಗದಂತೆ, ಅವರ ಮನಸ್ಸಿಗೆ ನೆಮ್ಮದಿ ಗೌರವ ತರುವಂತಹ ಕೆಲಸ ಮಾಡುತ್ತೇನೆ ಎಂದ ಅವರು,ಬಿಜೆಪಿಯಲ್ಲಿ ಒಗ್ಗಟ್ಟಿದೆ. ಸಣ್ಣ ಪುಟ್ಟ ವಿಷಯಗಳನ್ನು ಸಾರ್ವಜನಿಕರು ಗೊಂದಲ ಎಂದು ಭಾವಿಸಬಾರದು. ಅದೇ ರೀತಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಹಗಲು ಕನಸು ಕಾಣುಮದನ್ನು ಬಿಡಬೇಕು ಎಂದು ಸಲಹೆ ನೀಡಿದರು. ನೀರಿನ ಅಭಾವ ಎದುರಿಸುತ್ತಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಹಿಂದಿನ ಯಾಮದೇ ಸರ್ಕಾರಗಳು ಮನಸ್ಸು ಮಾಡಲಿಲ್ಲ. ಆದರೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವಧಿಯಲ್ಲಿ ಎತ್ತಿನ ಹೊಳೆ ಯೊಜನೆ ಜಾರಿಗೊಳಿಸಲು ೨೦೦ ಕೋಟಿ ರೂ. ಮೀಸಲಿರಿಸಲಾಗಿದೆ. ನಮ್ಮ ಪಕ್ಷ ಶಾಶ್ವತ ನೀರಾವರಿ ಕಲ್ಪಿಸಿಯೆಸಿದ್ಧ ಎಂದು ವಾಗ್ದಾನ ನೀಡಿದರು…

No Comments to “ಚಿಕ್ಕಬಳ್ಳಾಪುರ ಜಿಲ್ಲಾಭಿವೃದ್ಧಿಗೆ ಯೊಜನೆಗಳ ಭರಪೂರ:..ಸರ್ಕಾರದಲ್ಲಿ `ಪಾರದರ್ಶಕತೆ’ ಇದೆ-ಸಿಎಂ ಸದಾನಂದಗೌಡ…ಬಿಜೆಪಿ ದಿಗ್ಗಜರಾದ ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರ ಒಗ್ಗಟ್ಟಿನ ಪ್ರದರ್ಶನ….”

add a comment.

Leave a Reply

You must be logged in to post a comment.