ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರದಲ್ಲಿ ಅಕ್ರಮ ಕಟ್ಟಡಗಳ `ತೆರಮ’ ಭೂಕಂಪ…ಶಹಬಾಷ್‌..ಪೊಲೀಸ್‌ ಇಲಾಖೆ….ಜಿಲ್ಲಾಡಳಿತ ದಿಟ್ಟ ನಿರ್ಧಾರ… ನಗರ ಅಭಿವೃದ್ಧಿಗೆ ಸಾರ್ವಜನಿಕರ ಮೆಚ್ಚುಗೆ….

ಕೋಲಾರ: ನಗರದ ಪ್ರಮುಖ ರಸ್ತೆಗಳನ್ನು ಅಗಲೀಕರಿಸುವ ಐತಿಹಾಸಿಕ ಕ್ರಮಕ್ಕೆ ಜಿಲ್ಲಾಡಳಿತಮ ರಸ್ತೆಯ ಇಕ್ಕೆಡೆಗಳಲ್ಲಿನ ಅಂಗಡಿ-ಮಳಿಗೆಗಳನ್ನು ತೆರಮಗೊಳಿಸಲು ಮುಂದಾದ ಪರಿಣಾಮ ನಗರದಲ್ಲಿ ಶನಿವಾರದಂದು ಇಡೀ ದಿನ ಉದ್ರಿಕ್ತ ವಾತಾವರಣ ಮೂಡಿತ್ತು. ಒಂದು ಕೋಮಿನ ತೀವ್ರ ವಿರೋಧದ ನಡುವೆಯೂ ನಗರದ ಹೊಸ ಬಸ್‌ ನಿಲ್ದಾಣದಿಂದ ಮೆಕ್ಕೆ ವೃತ್ತದವರೆಗೂ ಸುಮಾರು ಒಂದೂವರೆ ಕಿ.ಮೀ. ದೂರದ ರಸ್ತೆಯ ಎರೆಡೂ ಕಡೆಯ ಅಂಗಡಿ, ಮನೆಗಳನ್ನು ಜಿಲ್ಲಾಡಳಿತಮ ತೆರಮಗೊಳಿಸಿತು. ಶನಿವಾರದಂದು ಬೆಳ್ಳಂಬೆಳಗ್ಗೆಯೆ ಸುಮಾರು ೧೦ ಜೆಸಿಬಿಗಳ ಸಮೇತ ಹಾಜರಾದ ಸುಮಾರು ೩೦೦ ಕ್ಕೂ ಪೊಲೀಸರು ಹೊಸ ಬಸ್‌ ನಿಲ್ದಾಣದಿಂದ ಮೆಕ್ಕೆವೃತ್ತದ ವರೆಗೂ ಸುಮಾರು ೧೦೦ಕ್ಕೂ ಹೆಚ್ಚು ಅಂಗಡಿ, ಮನೆ ಕಟ್ಟಡಗಳನ್ನು ಜೆಸಿಬಿ ನೆರವಿನಿಂದ ತೆರಮಗೊಳಿಸಿದರು. ಅಮ್ಮವಾರಿಪೇಟೆ ವೃತ್ತದ ಬಳಿ ಇರುವ ಒಂದು ಕೋಮಿನ ಪ್ರಾರ್ಥನಾ ಮಂದಿರಕ್ಕೆ ಸೇರಿದ ೧೦ಕ್ಕೂ ಹೆಚ್ಚು ಅಂಗಡಿ ಮಳಿಗೆಗಳ ಕಟ್ಟಡಗಳನ್ನು ತೆರಮಗೊಳಿಸುತ್ತಿದ್ದ ಸಂದರ್ಭದಲ್ಲಿ ಒಂದು ಕೋಮಿಗೆ ಸೇರಿದ ಗುಂಪೊಂದು ಪೊಲೀಸರು, ಪತ್ರಕರ್ತರ ಮೇಲೆ ಮಹಡಿ ಕಟ್ಟಡಗಳ ಮೇಲೆ ನಿಂತು ಸೈಜುಗಲ್ಲುಗಳಿಂದ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ೧೪೪ ವಿಧಿ ಜಾರಿಗೆ ತರಲಾಗಿದೆ, ೪ ಜನಕ್ಕೂ ಹೆಚ್ಚು ಜನ ಒಂದು ಕಡೆ ಇರಬಾರದು ಎಂದು ಅಶ್ರುವಾಯು ವಾಹನದ ಮೂಲಕ ಜನಕ್ಕೆ ತಿಳುವಳಿಕೆ ನೀಡಲಾಗಿದೆ. ಆದರೂ ಉದ್ರಿಕ್ತ ವಾತಾವರಣ ಮೂಡಿದ್ದರಿಂದಾಗಿ ಬಂಡುಕೋರರನ್ನು ಹಿಮ್ಮೆಟ್ಟಿಸಲು ಲಘು ಲಾಠಿ ಚಾರ್ಜ್‌ ಮಾಡಲಾಯಿತು. ಈ ಸಂದರ್ಭಧಲ್ಲಿ ಸುಮಾರು ೫-೬ ಜನ ಪೊಲೀಸರಿಗೆ ತೀವ್ರಗಾಯಗಳಾಗಿವೆ. ಇಲ್ಲಿ ನಡೆದುಹೋಗುತ್ತಿದ್ದ ಗಲ್‌ಪೇಟೆಯ ನಿವಾಸಿ ಸುಬ್ರಮಣ್ಯಾಚಾರಿ ಎಂಬುವವರಿಗೆ ಕಲ್ಲೇಟು ಬಿದ್ದು, ತೀವ್ರ ಗಾಯ ಉಂಟಾಗಿದೆ. ಮುಳಬಾಗಿಲು ದಫೇದಾರ್ ಶ್ರೀನಿವಾಸಮೂರ್ತಿ, ನಂಗ್ಲಿ ಪೊಲೀಸ್‌ ಠಾಣೆಯ ಎ.ಎಸ್‌.ಐ.ಆರ್‌.ಗೋವಿಂದಪ್ಪ ಅವರಿಗೆ ತೀವ್ರ ಗಾಯಗಳಾಗಿವೆ. ಗುಂಪೊಂದು ಘರ್ಷಣೆಗೆ ಮುಂದಾಗಿ ಕಟ್ಟಡಗಳಲ್ಲಿ ಅವಿತಿದ್ದ ೧೦೦ಕ್ಕೂ ಹೆಚ್ಚು ಜನರನ್ನು ಪೊಲೀಸರು ಹಿಮ್ಮೆಟ್ಟಿಸಿದರು…

No Comments to “ಕೋಲಾರದಲ್ಲಿ ಅಕ್ರಮ ಕಟ್ಟಡಗಳ `ತೆರಮ’ ಭೂಕಂಪ…ಶಹಬಾಷ್‌..ಪೊಲೀಸ್‌ ಇಲಾಖೆ….ಜಿಲ್ಲಾಡಳಿತ ದಿಟ್ಟ ನಿರ್ಧಾರ… ನಗರ ಅಭಿವೃದ್ಧಿಗೆ ಸಾರ್ವಜನಿಕರ ಮೆಚ್ಚುಗೆ….”

add a comment.

Leave a Reply

You must be logged in to post a comment.