ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ: ಜಲಾನಯನ ಯೊಜನೆಗೆ ೩೦ ಕೋಟಿ ರೂ.ವೆಚ್ಚ-ಸಚಿವ ವರ್ತೂರು ಪ್ರಕಾಶ್‌….

ಕೋಲಾರ : ಜಿಲ್ಲೆಯಲ್ಲಿ ಸಮಗ್ರ ಜಲಾನಯನ ನಿರ್ವಹಣಾ ಯೊಜನೆಯಲ್ಲಿ ಒಟ್ಟು ಮೂವತ್ತು ಕೋಟಿ ರೂಪಾಯಿಗಳನ್ನು ಅಂತರ್ಜಲಮಟ್ಟ ಹೆಚ್ಚಿಸಲು ಹಾಗೂ ನೀರು ಸಂಗ್ರಹಣೆ ಕಾರ್ಯಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ ಖಾತೆ ಸಚಿವ ಆರ್. ವರ್ತೂರ್ ಪ್ರಕಾಶ್‌ ತಿಳಿಸಿದರು. ಅವರು ಜಿಲ್ಲಾ ಪಂಚಾಯತ್‌ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಬೆಳಮಾರನಹಳ್ಳಿಯಲ್ಲಿ ಜಲಾನಯನ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದೇ ವೊದಲ ಬಾರಿಗೆ ಬೆಳಮಾರನಹಳ್ಳಿ ವ್ಯಾಪ್ತಿಗೆ ಬರುವ ೨೨ ಗ್ರಾಮಗಳ ೫೦ ಸ್ವಸಹಾಯ ಸಂಘಗಳಿಗೆ ಒಟ್ಟು ಮೂರು ಕೋಟಿ ರೂ.ಗಳನ್ನು ವಿತರಿಸುತ್ತಿದ್ದು ಪ್ರತಿಯೊಬ್ಬ ಮಹಿಳೆಗೆ ಐದು ಸಾವಿರ ರೂ.ಗಳನ್ನು ನೀಡುತ್ತಿದ್ದು, ಇದನ್ನು ನೇರವಾಗಿ ತಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಿಕೊಳ್ಳ ಬೇಕೆಂದು ತಿಳಿಸಿದರು. ತಾಮ ಪಡೆದಂತಹ ಹಣವನ್ನು ಮರುಪಾವತಿ ಮಾಡದೆ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಅಂದರೆ ಕುರಿ, ಕೋಳಿ, ಹಸುಗಳನ್ನು ಖರೀದಿಸಿ ತಮ್ಮ ಕುಟುಂಬಗಳ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದರು. ಇನ್ನು ಕೆಲವೇ ದಿನಗಳಲ್ಲಿ ೨೨ ಗ್ರಾಮಗಳ ದುರ್ಬಲ ವರ್ಗದ ಕುಟುಂಬಗಳಿಗೆ ಹಸುಗಳನ್ನು ನೀಡುಮದಾಗಿ ಭರವಸೆ ನೀಡಿದರು. ಬೇಸಿಗೆ ಸಮೀಸುತ್ತಿದ್ದು ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿರುಮದನ್ನು ಮನಗಂಡು ಮುಖ್ಯಮಂತ್ರಿಯವರು ಏಳು ಕೋಟಿ ಐವತ್ತು ಲಕ್ಷ ರೂ.ಗಳನ್ನು ನೀಡಿದ್ದಾರೆ.  ಇದರಿಂದ ಎಲ್ಲಾ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆದು ಪಂಪ್‌ ವೋಟರ್ ಅಳವಡಿಸಲಾಗು ಮದು.  ಕುಡಿಯುವ ನೀರಿಗಾಗಿ ಮುಖ್ಯಮಂತ್ರಿಯವರು ಎಷ್ಟು ಹಣ ಬೇಕಾದರೂ ಕೊಡಲಿದ್ದಾರೆಂದು ಹೇಳಿದರು…

No Comments to “ಕೋಲಾರ: ಜಲಾನಯನ ಯೊಜನೆಗೆ ೩೦ ಕೋಟಿ ರೂ.ವೆಚ್ಚ-ಸಚಿವ ವರ್ತೂರು ಪ್ರಕಾಶ್‌….”

add a comment.

Leave a Reply

You must be logged in to post a comment.