ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ನಾಲ್ಕು ಜಿಲ್ಲೆಗಳಿಗಳಿಗೆ ನೀರುಣಿಸುವ `ನೇತ್ರಾವತಿ’ ಶಾಶ್ವತ ಯೊಜನೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು `ಅರ್ಧ ಚಂದ್ರ’ ತೋರಿಸಿದ್ದಾರೆ….

ಬೆಂಗಳೂರು: ನೇತ್ರಾವತಿ ತಿರುಮ  ಯೊಜನೆಗೆ ಮುಖ್ಯಮಂತ್ರಿ ಸದಾನಂದಗೌಡರ ನಕಾರಾತ್ಮಕ ನಿಲುಮ.. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಗುರುವಾರ ಮುಖ್ಯಮಂತ್ರಿ ಸದಾನಂದಗೌಡ ನಾಲ್ಕು ಜಿಲ್ಲೆಗಳ ಸಂಸದರು,ಶಾಸಕರುಗಳ ಸಭೆಯಲ್ಲಿ ಯಾಮದೇ ಕಾರಣಕ್ಕೂ ಪಶ್ಚಿಮ ಘಟ್ಟಗಳ ನದಿ ತೀರಮ ಯೊಜನೆಯನ್ನು ಕಲ್ಪಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದರಿಂದಾಗಿ ಕೋಲಾರ ಚಿಕ್ಕಬಳ್ಳಾಪುರ ಜನತೆಯ ಶಾಶ್ವತ ನೀರಾವರಿ ಯೊಜನೆಯ ಕನಸಿಗೆ ಸಿ.ಎಂ.ಗೌಡರು ಅರ್ಧ ಚಂದ್ರ ತೋರಿಸಿದ್ದಾರೆ. ಇಂದಿನ ಸಭೆಯಲ್ಲಿ  ಎರಡು ಜಿಲ್ಲೆಗಳ ಜನ ಪ್ರತಿನಿಧಿಗಳು ಒತ್ತಾಯಕ್ಕೂ ಜಗ್ಗದ ಮುಖ್ಯ ಮಂತ್ರಿಗಳು ಯಾಮದೇ ಕಾರಣಕ್ಕೂ ಪಶ್ಚಿಮ ಘಟ್ಟಗಳು ಮತ್ತು ಪರಿಸರಕ್ಕೆ ಹಾನಿಯಾಗುವ ಯೊಜನೆಗಳನ್ನು ನಾನು ಬಲವಾಗಿ ವಿರೋಧಿ ಸುತ್ತೇನೆ ಎಂದು ತಿಳಿಸಿದರು. ಈಗಾಗಲೇ ಎತ್ತಿನ ಹೊಳೆ ಯೊಜನೆಗೆ ಸರ್ಕಾರ ಮುಂದಾಗಿದ್ದು, ಇದರಿಂದ ಲಭ್ಯವಾಗುವ ನೀರನ್ನು ಬಳಸಿಕೊಳ್ಳಿ ಎಂದು ಅವರು ತಿಳಿಸಿದರು. ಒಂದು ಹಂತದಲ್ಲಿ ನಾಲ್ಕು ಜಿಲ್ಲೆಗಳ ಶಾಸಕರು ಮತ್ತು ಸಂಸದರು ತೀವ್ರ ಒತ್ತಡ ಹೇರಿದಾಗ, ಕೊಂಚ ಬಿಗಿಪಟ್ಟು ಸಡಿಲಿಸಿದ ಗೌಡರು ಒಂದೇ ಹಂತದಲ್ಲಿ ನೇತ್ರಾವತಿ ತಿರುಮ ಯೊಜನೆಗೆ ಕೈಹಾಕುಮದು ಅಷ್ಟು ಸುಲಭವಲ್ಲ. ಇದಕ್ಕೆ ಆ ಭಾಗದ ಜನಪ್ರತಿನಿಧಿಗಳು, ಪರಿಸರವಾದಿಗಳೊಂದಿಗೆ ಚರ್ಚೆ ನಡೆಸಿ ಸಾಧ್ಯವಾದಷ್ಟು ಮಟ್ಟಿಗೆ ಪರಮಶಿವಯ್ಯ ವರದಿಯ ಅನುಷ್ಟಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುಮದಾಗಿ ತಿಳಿಸಿದರು. ಸಭೆಯ ನಂತರ `ಕನ್ನಡ ತಿಲಕ’ಪತ್ರಿಕೆಯೊಂದಿಗೆ  ಮಾತನಾಡಿದ ಕೇಂದ್ರ ರೈಲ್ವೇ ಸಚಿವ ಕೆ.ಹೆಚ್‌. ಮುನಿಯಪ್ಪ ರವರು  ಇಂದಿನ ಸಭೆ ಶಾಶ್ವತ ನೀರಾವರಿ ಯೊಜನೆಗೆ ಪೂರಕವಾಗಿದ್ದು, ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪರಮಶಿವಯ್ಯ ವರದಿ ಅನುಷ್ಟಾನಗೊಳ್ಳುವ ಸ್ಪಷ್ಟ ಭರವಸೆಯನ್ನು ಹೊಂದಿರುಮದಾಗಿ ಅವರು ತಿಳಿಸಿದರು. ಸಭೆಯಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಮತ್ತು ಜವಳಿ ಖಾತೆ ಸಚಿವ ವರ್ತೂರ್ ಪ್ರಕಾಶ್‌, ಚಿಕ್ಕಬಳ್ಳಾಪುರ ಸಂಸದರು ಕೇಂದ್ರ ಸಚಿವರು ಆದ ವೀರಪ್ಪವೊಯ್ಲಿ ಸೇರಿದಂತೆ  ಎರಡೂ ಜಿಲ್ಲೆಗಳ ಬಹುತೇಕ ಶಾಸಕರುಗಳು ಭಾಗವಹಿಸಿದ್ದರು…

No Comments to “ನಾಲ್ಕು ಜಿಲ್ಲೆಗಳಿಗಳಿಗೆ ನೀರುಣಿಸುವ `ನೇತ್ರಾವತಿ’ ಶಾಶ್ವತ ಯೊಜನೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು `ಅರ್ಧ ಚಂದ್ರ’ ತೋರಿಸಿದ್ದಾರೆ….”

add a comment.

Leave a Reply

You must be logged in to post a comment.