ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರದಲ್ಲಿ ಘಟ್ಟಗಂಗಮ್ಮ ಕರುಣಿಸದ `ವರ’ವಿಲ್ಲ…ಕಷ್ಟ ತೀರದ ಮನುಷ್ಯನಿಲ್ಲ.. ಬನ್ನಿ ದೇವಿಯ ದರ್ಶನ ಪಡೆದು ಪುನೀತರಾಗಿ…

ನೂರಾರು ವರ್ಷಗಳಿಂದ ಮೂಲೆ ಗುಂಪಾಗಿದ್ದ ಶಕ್ತಿದೇವತೆಯೊಂದನ್ನು ಮುಖ್ಯವಾಹಿನಿಗೆ ಪರಿಚಯಿಸಿ ಇದೇ ಘಟ್ಟಗಂಗಮ್ಮ ಎಂದು ಜಗತ್ತಿಗೇ ಸಾರಿದ ಅಪರೂಪದ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ. ಅವರೇ-ಕೋಲಾರ ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ.ರಂಗಾರೆಡ್ಡಿ. ಇವರು ಹೀಗೆ ಸಾರಿ ಹೇಳಿ ಜಗತ್ತಿಗೆ ಪರಿಚಯಿಸಿದ ಘಟ್ಟಗಂಗಮ್ಮ ತಾಯಿ ಪವಾಡಗಳು ಎಲ್ಲೆಡೆ ಹಬ್ಬಿ ಕೊನೆಗೆ ಈಕೆಯ ದರ್ಶನಕ್ಕಾಗಿ ಆಂಧ್ರ, ತಮಿಳುನಾಡು, ಕೇರಳದಿಂದೆಲ್ಲಾ ದಿನನಿತ್ಯ ನೂರಾರು ಜನ ಬರುತ್ತಿದ್ದಾರೆ. ವಿಶೇಷ ದಿನಗಳಲ್ಲಿ ಸಾವಿರಾರು ಜನ ಭಕ್ತರು  ದರ್ಶನಕ್ಕೆ ಬಂದು ಗಿಜಿಗುಟ್ಟುತ್ತಿರುತ್ತಾರೆ. ಈ ಇಡೀ ಪ್ರಾಂತ್ಯಕ್ಕೇ ಘಟ್ಟಗಂಗಮ್ಮ ತಾಯಿ ಅತ್ಯಂತ ಪ್ರಭಾವಶಾಲಿ ದೇವತೆ ಯಾಗಿದ್ದಾಳೆ. ಘಟ್ಟಗಂಗಮ್ಮ ಸುಮಾರು ವರ್ಷಗಳಿಂದ ಇಲ್ಲಿಯೆ ಇದ್ದು ಕಾಡು-ನಾಡನ್ನು ಕಾಪಾಡಿಕೊಂಡು ಬಂದ ಶಕ್ತಿದೇವತೆ. ಸುಮಾರು ೩೦ ಕಿ.ಮೀ ವ್ಯಾಪ್ತಿಯ ದಟ್ಟಡವಿಯೆಈಕೆಯ ಆವಾಸಸ್ಥಾನ. ಕಾಡು ಪ್ರಾಣಿಗಳೇ ಈಕೆಗೆ ಬೆಂಗಾವಲು. ಕಾಡಿನ ನಡುವೆ ಇದ್ದೂ ನಾಡನ್ನು ಕಾಯುತ್ತಿರುವ ಈಕೆಯ ಮಹಿಮೆ ಅಪಾರ. ಈಕೆ ಯಾಮದೇ ರೂಪವಿಲ್ಲದ ಒಂದು ಕಲ್ಲಿನ ರೂಪದಲ್ಲಿ ಇಲ್ಲಿ ನೆಲೆಸಿದ್ದಾಳೆ. …

No Comments to “ಕೋಲಾರದಲ್ಲಿ ಘಟ್ಟಗಂಗಮ್ಮ ಕರುಣಿಸದ `ವರ’ವಿಲ್ಲ…ಕಷ್ಟ ತೀರದ ಮನುಷ್ಯನಿಲ್ಲ.. ಬನ್ನಿ ದೇವಿಯ ದರ್ಶನ ಪಡೆದು ಪುನೀತರಾಗಿ…”

add a comment.

Leave a Reply

You must be logged in to post a comment.