ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗಳ ಪುನಃಶ್ಚೇತನಕ್ಕೆ ೫ ಕೋಟಿ ರೂ.ಬಿಡುಗಡೆಗೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸರ್ಕಾರಕ್ಕೆ ಒತ್ತಾಯ…

ಕೋಲಾರ : ಅಲ್ಪಾವಧಿ ಕೃಷಿ ಪತ್ತಿನ ಪುನಃಶ್ಚೇತನ ಪ್ಯಾಜಕೇಜಿನಡಿಯಲ್ಲಿ ಮುಂಗಡವಾಗಿ ರಾಜ್ಯ ಸರ್ಕಾರಮ ೫ ಕೋಟಿ ಬಿಡುಗಡೆ ಮಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರ ಪ್ರಗತಿಗಾಗಿ  ಇಲ್ಲಿನ ಡಿ.ಸಿಸಿ ಬ್ಯಾಂಕ್‌ ಪುನಃಶ್ಚೇತನಗೊಳಿ ಸಬೇಕೆಂದು ಒತ್ತಾಯಿಸಿ ಬಂಗಾರಪೇಟೆ ಶಾಸಕ ಮತ್ತು ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಸಂಪುಟದರ್ಜೆ ಅಧ್ಯಕ್ಷ ಎಂ. ನಾರಾಯಣಸ್ವಾಮಿ,ಕೆಜಿಎಫ್‌ ಶಾಸಕ ಸಂಪಂಗಿ ಸೇರಿ ದಂತೆ ಒಂದು ನಿಯೊಗದೊಂದಿಗೆ ರಾಜ್ಯದ ಕೃಷಿ ಮಾರುಕಟ್ಟೆ ಸಚಿವರಾದ ಲಕ್ಷಮಣ ಸವದಿರನ್ನು ಭೇಟಿ ಮಾಡಿ ಮನವಿ ಪತ್ರನೀಡಿ ಒತ್ತಾಯಿಸಿರುಮದಾಗಿ ತಿಳಿಸಿದರು. ನಗರದಲ್ಲಿಂದು ಅವರು ಸುದ್ದಿಗೊಷ್ಠಿಯನ್ನುದ್ದೇಶಿಸಿ ಬಂಗಾರಪೇಟೆ ಶಾಸಕ ಎಂ. ನಾರಾಯಣಸ್ವಾಮಿ  ಮಾತನಾ ಡುತ್ತಿದ್ದರು. ರಾಜ್ಯದಲ್ಲಿ ೨೧ ಡಿ.ಸಿ.ಸಿ ಬ್ಯಾಂಕ್‌ಗಳಿದ್ದು,  ಕೋಲಾರ ಮತ್ತು ಚಿಕ್ಕಬಳ್ಳಾಪುರ ಬ್ಯಾಂಕ್‌ ಹೊರತುಪಡಿಸಿ ಉಳಿದ ಎಲ್ಲಾ ಬ್ಯಾಂಕ್‌ಗಳು ಭಾರತೀಯ ರಿಸರ್ವ್‌ ಬ್ಯಾಂಕಿನ ಲೈಸನ್ಸ್‌ ಪಡೆದುಕೊಂಡಿವೆ. ಈ ಬ್ಯಾಂಕಿನ ಮಟ್ಟದಲ್ಲಿ ಆನೇಕ ಸುಧಾರ ಣೆಗಳನ್ನು ಕೈಕೊಂಡಿರುವ ಆರ್‌ ಬಿ.ಐ ಬ್ಯಾಂಕ್‌  ಮಾ.೩೧ ೨೦೧೨ ರೊಳಗೆ ಪಡೆಯಬೇಕೆಂದು ನಿರ್ದೇಶನ ನೀಡಿದ್ದು, ಕೆಲಮ ಪ್ರಮುಖ ಮೂರು ಷರತ್ತುಗಳನ್ನು ನೀಡಿದೆ.   ಅಲ್ಪಾವಧಿ ಕೃಷಿಪತ್ತಿನ ಪುನಃಶ್ಚೇತನ ಕಾರ್ಯಕ್ರಮದನ್ವಯ ಪಾವತಿಯಾದ ಷೇರು ಬಂಡವಾಳದಲ್ಲಿ ಶೇ.೨೫ ರಷ್ಟು ರಾಜ್ಯ ಸರ್ಕಾರದ ಷೇರು ಬಂಡವಾಳ ಪಡೆಯಲು ಅವಕಾಶವಿದ್ದು, ಇದರಂತೆ ರೂ.೯೦.೭೨ ಲಕ್ಷ ಷೇರು ಬಂಡವಾಳ ಮಂಜೂರು ಮಾಡಬೇಕಾಗಿದೆ. ರಾಜ್ಯ ಸರ್ಕಾರ ಬಡ್ಡಿ ಹಾಗೂ ದಂಡ ಬಡ್ಡಿ ಮನ್ನಾ ಯೊಜನೆಯಲ್ಲಿ ರಾಜ್ಯ ಸರ್ಕಾರದಿಂದ ರೂ.೩೧೦ ಲಕ್ಷ ಬಿಡುಗಡೆ ಮಾಡಲು ಬಾಕಿ ಇದ್ದು, ಈ ಹಣ ಬಿಡುಗಡೆ ಮಾಡ ಬೇಕಾಗಿದೆ. ಅಲ್ಪಾವಧಿ ಕೃಷಿ ಪತ್ತಿನ ಪುನಃಶ್ಚೇತನ ಪ್ಯಾಕೇಜಿನಡಿ ಯಲ್ಲಿ ಜಿಲ್ಲೆಯ ಅನರ್ಹ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೂ.೩೩೯೯ ಲಕ್ಷ ಬಿಡುಗಡೆ ಯಾಗಲು ಬಾಕಿ ಇದ್ದು, ಈ ಹಣಬಿಡುಗಡೆ ವಿಳಂಬವಾಗಿರುಮದರಿಂದ ಈ ಹಣ ಬಿಡುಗಡೆಯಾದಾಗ ಇದಕ್ಕೆ ಹೊಂದಾಣಿಕೆ ಮಾಡಿಕೊ ಳ್ಳವ ಷರತ್ತಿಗೆ ಒಳಪಟ್ಟು ರೂ. ೫೦೦ ಲಕ್ಷಗಳನ್ನು ಸಹಾಯ ಧನದ ರೂಪದಲ್ಲಿ ಬಿಡುಗಡೆ ಮಾಡಬೇಕಾಗಿದೆ…

No Comments to “ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ಗಳ ಪುನಃಶ್ಚೇತನಕ್ಕೆ ೫ ಕೋಟಿ ರೂ.ಬಿಡುಗಡೆಗೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸರ್ಕಾರಕ್ಕೆ ಒತ್ತಾಯ…”

add a comment.

Leave a Reply

You must be logged in to post a comment.