ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರದಲ್ಲಿ ಕೆಲಸ..ಬೆಂಗಳೂರಿನಲ್ಲಿ ವಾಸ..ಕಿಡಿಕಾರಿದ ಸಚಿವರು..ಶಿಸ್ತು ಕ್ರಮ ಕೈಗೊಳ್ಳಿ-ಸಚಿವ ವರ್ತೂರು ಪ್ರಕಾಶ್‌…

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಡಿಸಿ,ಎಸ್‌ಪಿ, ಸಿಇಓ ವಾಸವಿರುವಾಗ ಇವರ ಅಧೀನ ಅಧಿಕಾರಿಗಳು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಅಲ್ಲಿಂದ ಬಂದು-ಹೋಗುತ್ತಿದ್ದಾರೆ. ಶುಕ್ರವಾರ ಮನೆಗೋದರೆ ಮತ್ತೆ ಇವರು ಕಚೇರಿಗೆ ಬರುಮದು ಸೋಮವಾರ ದಂದೇ. ಇಂತಹ ಅಧಿಕಾರಿಗಳಿಂದ ಜಿಲ್ಲಾ ಅಭಿವೃದ್ಧಿ ಸಾಧ್ಯವಿಲ್ಲ. ಇಂತಹ ಅಧಿಕಾರಿಗಳ ಪಟ್ಟಿ ತಯಾರಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜವಳಿ ಖಾತೆ ಸಚಿವ ಆರ್.ವರ್ತೂರು ಪ್ರಕಾಶ್‌ ಆರೋಪಿಸಿದರು. ನಗರದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಸೋಮವಾರದಂದು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತ ನಾಡಿದರು. ಸಭೆಗೆ ಗೈರುಹಾಜರಿಯಾಗಿರುವ ಕೋಲಾರ, ಕೆಜಿಎಫ್‌ ಎಸ್‌ಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಿರಿ. ಕೋಲಾರ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೋಟ್ಯಾಂತರ ರೂಗಳ ಹಗರಣ ನಡೆದಿದೆ. ಈ ಕುರಿತು ತನಿಖೆಗೆ ಅದೇಶಿಸಿರಿ. ಅನೇಕ ಬಾರಿ ಕೆಲವೊಂದು ಮಾಹಿತಿಯನ್ನು ಪಡೆ ಯಲು ಸಾಕಷ್ಟು ಅಧಿಕಾರಿಗಳಿಗೆ ಫೋನ್‌ ಮಾಡಿದಾಗ ಸ್ವಿಚ್‌ ಆಫ್‌ ಆಗಿರುತ್ತದೆ. ಈ ರೀತಿ ಫೋನ್‌ ಸ್ವಿಚ್‌ ಆಫ್‌ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ. ಕೊಳವೆ ಬಾವಿಗಳ ಕೆಟ್ಟಿರುವ ಪಂಪು-ವೋಟಾರನ್ನು ಬದಲಾಯಿಸಿದ ನಂತರ ಅವನ್ನು ಸಂಬಂಧಪಟ್ಟವರು ಕೂಡಲೇ ಜಿಲ್ಲಾ ಪಂಚಾಯಿತಿ ಕಚೇರಿಗೆ ತಂದು ಒಪ್ಪಿಸಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಅವರು ಪಕ್ಕದಲ್ಲಿಯೆ ಇದ್ದ ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ ಮೀನಾ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಜೇಂದ್ರ ಚೋಳನ್‌ ಅವರಿಗೆ ತಾಕೀತು ಮಾಡಿದರು…

No Comments to “ಕೋಲಾರದಲ್ಲಿ ಕೆಲಸ..ಬೆಂಗಳೂರಿನಲ್ಲಿ ವಾಸ..ಕಿಡಿಕಾರಿದ ಸಚಿವರು..ಶಿಸ್ತು ಕ್ರಮ ಕೈಗೊಳ್ಳಿ-ಸಚಿವ ವರ್ತೂರು ಪ್ರಕಾಶ್‌…”

add a comment.

Leave a Reply

You must be logged in to post a comment.