ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಜಿಲ್ಲಾಧಿಕಾರಿಗಳನ್ನು ಬರೀ ಮನವಿಗೆ ಸೀಮಿತ ಮಾಡಿದರೇ..ಜಿಲ್ಲೆ ಅಭಿವೃದ್ಧಿ ಸಾಧ್ಯವೇ..?

ಕೋಲಾರ: ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಬುಧವಾರದಂದು ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಆದರೆ ಏಕಕಾಲಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೆರವಣೆಗೆಯಲ್ಲಿ ಆಗಮಿಸಿದ್ದು, ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಹತ್ವದ ಸಭೆಯೊಂದನ್ನು ಕಚೇರಿಯ ಸಭಾಂಗಣದಲ್ಲಿ ನಡೆಸುತ್ತಿದ್ದು, ಸಭೆಯನ್ನು ಅರ್ಧಕ್ಕೆ ಬಿಟ್ಟು ಬರಲೂ ಆಗದೇ, ಬಾರದೇ ಇರಲೂ ಆಗದೇ ತಮ್ಮ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಬಾಬಣ್ಣ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರೂ ಕೆಲಮ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳೇ ಬಂದು ನಮ್ಮ ಮನವಿಯನ್ನು ಸ್ವೀಕರಿಸಬೇಕು ಎಂದು ವೊಂಡು ಹಿಡಿದ ಪರಿಣಾಮ ಸ್ವಲ್ಪ ಹೊತ್ತು ಇಲ್ಲಿ ಘೋಷಣೆಗಳ, ದಿಕ್ಕಾರಗಳ ಕಲರವ ಕೇಳಿಸಿತು. ಯಾರು ಏನು ಕಿರಿಚುತ್ತಿದ್ದಾರೆ ಎಂಬುದೇ ಅರ್ಥವಾಗದ ಪರಿಸ್ಥಿತಿ ಇಲ್ಲಿ ಎದುರಾಗಿತ್ತು.  ವೊದಲಿಗೆ ಕರವೇ ಕಾರ್ಯಕರ್ತರು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿಗೆ ಬಂದರು. ತಾಲ್ಲೂಕಿನ ಗರುಡಪಾಳ್ಯದ ಕರವೇ ಕಾರ್ಯಕರ್ತನನ್ನು ಕೊಲೆ ಪ್ರಯತ್ನದಲ್ಲಿ ಚಾಕುವಿನಿಂದ ಇರಿದು ೧೫ ದಿನಗಳಾದರೂ ಪೊಲೀಸ್‌ ಇಲಾಖೆ ಯಾಮದೇ ಕ್ರಮ ಜರುಗಿಸಿಲ್ಲ. ಮರಳು ಅಕ್ರಮ ದಂಧೆಕೋರರ ವಿರುದ್ಧ ಯಾಮದೇ ಕ್ರಮ ಜರುಗಿಸಿಲ್ಲ. ತಾಲೂಕು ಕಚೇರಿಯಲ್ಲಿ ಅಕ್ರಮವಾಗಿ ಖಾತೆಗಳನ್ನು ತೆರೆಯುಮದು, ವಜಾ ಮಾಡುತ್ತಿರುವವರ ವಿರುದ್ಧ ಯಾಮದೇ ಕ್ರಮ ಜರುಗಿಸುತ್ತಿಲ್ಲ. ನರೇಗಾ ಅಡಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದರೂ ಕೂಲಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.  ಇವರಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಎಸ್‌.ಎನ್‌.ರಾಜಗೋಪಾಲಗೌಡ, ಎಲ್‌.ಇ.ಕೃಷ್ಣೇಗೌಡ, ರಾಜ್ಯ ಕಾರ್ಯದರ್ಶಿ ಎಸ್‌.ಪ್ರಕಾಶ್‌, ಮಧು, ಮುನೇಗೌಡ, ದಲೀಪ್‌, ಪ್ರಭಾಕರ್, ಕೃಷ್ಣಮೂರ್ತಿ, ವೆಂಕಟೇಶ್‌, ಆನಂದಪ್ಪ, ರಮೇಶ್‌, ಉಮೇಶ್‌, ನವೀನ್‌, ಸತೀಶ ವೊದಲಾದವರಿದ್ದರು.  ಕಚೇರಿ ನಿರ್ವಹಣೆಗೆ ಅಡಚಣೆಯಾಗುಮದು ಎಂಬ ಉದ್ದೇಶದಿಂದ ಪ್ರವೇಶ ಮಾರ್ಗದಲ್ಲಿಯೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಜಿಲ್ಲಾಧಿಕಾರಿಗಳು ಮಹತ್ವದ ಸಭೆಯೊಂದನ್ನು ನಡೆಸುತ್ತಿರುಮದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಬಾಬಣ್ಣ ಅವರು ಮನವಿಯನ್ನು ಸ್ವೀಕರಿಸುವರು ಎಂದು ಸಂಬಂಧಿಸಿದ ಸಿಬ್ಬಂಧಿಯು ಪ್ರತಿಭಟನಾಕಾರರಿಗೆ ತಿಳಿಸಿದರು. ಇದರ ಬೆನ್ನಲ್ಲೇ ಮನವಿಯನ್ನು ಸ್ವೀಕರಿಸಲು ಬಾಬಣ್ಣ ಸ್ಥಳಕ್ಕೆ ಬಂದರು. ಜಿಲ್ಲಾಧಿಕಾರಿಗಳು ಸಭೆಯಲ್ಲಿ ಇರುವ ಕಾರಣ ಮನವಿ ಪಡೆಯುವಂತೆ ನನಗೆ ತಿಳಿಸಿದ್ದಾರೆ. ನಂತರ ತಮ್ಮ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವರು ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ನಾಮ ಜಿಲ್ಲಾಧಿಕಾರಿ ಅವರಿಗೆ ಮಾತ್ರ ಮನವಿ ನೀಡುತ್ತೇವೆ ಎಂದು ಪಟ್ಟು ಹಿಡಿದ ಪರಿಣಾಮ ಸ್ವಲ್ಪಹೊತ್ತು ಮನವಿಗಾಗಿ ಕಾದು ಮೌನವಾಗಿ ನಿಂತಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಬಾಬಣ್ಣ ಗತ್ಯಂತರವಿಲ್ಲದೇ ವಾಪಸ್ಸಾದರು….

No Comments to “ಕೋಲಾರ : ಜಿಲ್ಲಾಧಿಕಾರಿಗಳನ್ನು ಬರೀ ಮನವಿಗೆ ಸೀಮಿತ ಮಾಡಿದರೇ..ಜಿಲ್ಲೆ ಅಭಿವೃದ್ಧಿ ಸಾಧ್ಯವೇ..?”

add a comment.

Leave a Reply

You must be logged in to post a comment.