ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಿಕ್ಕಬಳ್ಳಾಪುರ: ಕೈಗಾರಿಕಾ ಅಭಿವೃದ್ಧಿಗೆ ಮಹಿಳೆಯರ ಪಾತ್ರ ವಿರಲಿ-ಡಿಸಿ ಡಾ.ಮಂಜುಳಾ…

ಚಿಕ್ಕಬಳ್ಳಾಪುರ: ಮಹಿಳೆಯರು ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಡಾ.ಎನ್‌.ಮಂಜುಳ ರವರು ತಿಳಿಸಿದರು. ಚಿಕ್ಕಬಳ್ಳಾಪುರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾಕೇಂದ್ರ, ಹಾಗೂ ಜಿಲ್ಲಾ ಪಂಚಾಯತ್‌ ಅವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕೈಗಾರಿಕಾ ವಿಚಾರ ಸಂಕಿರಣ ಮತ್ತು ಎರಡುದಿನಗಳ ಗೃಹಪಯೊಗಿ ರಾಸಾಯಿನಿಕ ಉತ್ಪನ್ನಗಳ ತರಬೇತಿ ಶಿಬಿರವನ್ನು ಉದ್ಘಾಟನೆ ಮಾಡುತ್ತಾ ಅವರು ಮಾತನಾಡುತ್ತಿ ದ್ದರು. ಮಹಿಳೆಯರು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮಹತ್ವದ ಪಾತ್ರ ವಹಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯು ಅವರು ಮುನ್ನುಗ್ಗುತ್ತಿದ್ದುಸಮಾಜದ, ಕುಟುಂಬ ದ ಮತ್ತು ದೇಶದ ಪ್ರಗತಿಗೆ ಕಾರಣಕರ್ತರಾಗಿದ್ದಾರೆಂದರು. ಜಿಲ್ಲೆಯಲ್ಲಿ ಸುಮಾರು ೩೦೦ ಸಣ್ಣ,ಅತಿಸಣ್ಣ, ಗೃಹಪ ಯೊಗಿ ವಸ್ತುಗಳ ಉತ್ಪನ್ನಕ್ಕಾಗಿ ಮಹಿಳೆಯರು ಮುಂದೆ ಬರಬೇಕಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಲಿದೆ. ಗೌರಿಬಿದನೂರಿನಲ್ಲಿ ಮತ್ತು ಚಿಂತಾಮಣಿ ಯಲ್ಲಿ ಈಗಾಗಲೇ ಸ್ಥಳವನ್ನು ಗುರ್ತಿಸಿದ್ದು, ಇಲ್ಲಿ ಸಣ್ಣ ಉದ್ಯಮ ವನ್ನು ಸ್ಥಾಪನೆ ಮಾಡಲು ಮಹಿಳೆಯರು ಮುಂದೆ ಬರಬೇಕಾಗಿದೆ. ಉತ್ಪಾದನೆ ಮಾಡುವ ವಸ್ತುಗಳು ಒಳ್ಳೆಯ ಗುಣಮಟ್ಟದ್ದಾಗಿ ದ್ದರೆ ಮಾರುಕಟ್ಟೆಗೂ ಕೂಡ ಸಹಾಯ ಆಗಲಿದೆ ಎಂದರು…

No Comments to “ಚಿಕ್ಕಬಳ್ಳಾಪುರ: ಕೈಗಾರಿಕಾ ಅಭಿವೃದ್ಧಿಗೆ ಮಹಿಳೆಯರ ಪಾತ್ರ ವಿರಲಿ-ಡಿಸಿ ಡಾ.ಮಂಜುಳಾ…”

add a comment.

Leave a Reply

You must be logged in to post a comment.