ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಇನ್ನಾರು ತಿಂಗಳಲ್ಲಿ `ಕೋಲಾರ ರೈಲು’ ಸಂಚಾರಕ್ಕೆ-ಕೇಂದ್ರ ಸಚಿವ ಕೆ.ಹೆಚ್‌. ಮುನಿಯಪ್ಪ…

ಕೋಲಾರ : ನಂತರ ತಮ್ಮ ನಿವಾಸದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ನವೀಕೃತ ಬ್ರಾಡ್‌ಗೇಜ್‌ ರೈಲು ಮಾರ್ಗ ಕಾಮಗಾರಿಯು ತೃಪ್ತಿಕರವಾಗಿ ನಡೆದಿದೆ. ಈಗಾಗಲೇ ಕೋಲಾರ-ಬಂಗಾರಪೇಟೆ ರೈಲು ಮಾರ್ಗ ಪೂರ್ಣಗೊಂಡಿದೆ. ಇನ್ನೇನು ಸೆಪ್ಟೆಂಬರ್‌,ಅಕ್ಟೋಬರ್‌ ಒಳಗೇ ಬ್ರಾಡ್‌ಗೇಜ್‌ ರೈಲು ಸಂಚಾರ ಸೇವೆ ಲಭ್ಯವಾಗುಮದು.ಕೋಲಾರ-ಶ್ರೀನಿವಾಸಪುರ-ಚಿಂತಾಮಣಿ ಮಾರ್ಗ ವಾಗಿಚಿಕ್ಕಬಳ್ಳಾಪುರವನ್ನು ಸಂಪರ್ಕಿಸುವ ರೈಲು ಮಾರ್ಗದ ಕಾಮಗಾರಿಯೂ ನಿರೀಕ್ಷೆ ಗೂ ಮೀರಿದ ವೇಗದಲ್ಲಿ ಸಾಗಿದೆ.ಈ ಮಾರ್ಗದಲ್ಲಿ ಬರುವ ಚಿಕ್ಕ,ದೊಡ್ಡ ಸೇತುವೆಗಳ ನಿರ್ಮಾಣ ಕಾಮಗಾರಿ ಸರಿ ಸುಮಾರು ಮುಕ್ತಾಯ ಹಂತದಲ್ಲಿದೆ ಎಂದರು. ಕೋಲಾರ-ಶ್ರೀನಿವಾಸಪುರ-ಮದನಪಲ್ಲಿ-ಕಡಪವನ್ನು ಸಂಪರ್ಕಿಸುವ ರೈಲು ಮಾರ್ಗ, ಕೋಲಾರ-ಮುಳಬಾಗಿಲು-ನಂಗಲಿ-ಚಿತ್ತೂರು ಸಂಪರ್ಕಿಸುವ ರೈಲು ಮಾರ್ಗಗಳ ಸರ್ವೇ ಕಾರ್ಯ ಮುಗಿದಿದೆ. ಮುಂದಿನ ಬಜೆಟ್‌ನಲ್ಲಿ ಅನುವೋದನೆ ಯನ್ನು ಪಡೆದು ಕಾಮಗಾರಿಯನ್ನು ಶುರು ಮಾಡಲಾಗುಮದು. ಈ ಕುರಿತು ಆಂಧ್ರದ ಮುಖ್ಯಮಂತ್ರಿಗಳು ಉತ್ಸುಕತೆ ತೋರಿದ್ದಾರೆ. ಇದೇ ವಿಷಯವಾಗಿ ಚರ್ಚಿಸಲು ಇದೇ ೨೨ರಂದು ಆಹ್ವಾನಿಸಿದ್ದಾರೆ. ಸ್ಯಾನಿಟೋರಿಯಂ ಬಳಿಯ ೧೫೦ ನೇ ರೈಲ್ವೇ ಲೆವೆಲ್‌ ಕ್ರಾಸ್‌ನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರಕ್ಕೆ ಪರಿವರ್ತಿಸಲಾಗುಮದು ಎಂದು ಹೇಳಿದರು….

No Comments to “ಇನ್ನಾರು ತಿಂಗಳಲ್ಲಿ `ಕೋಲಾರ ರೈಲು’ ಸಂಚಾರಕ್ಕೆ-ಕೇಂದ್ರ ಸಚಿವ ಕೆ.ಹೆಚ್‌. ಮುನಿಯಪ್ಪ…”

add a comment.

Leave a Reply

You must be logged in to post a comment.