ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಮಾಲೂರು : ಯುವಕರೇ ಭ್ರಷ್ಟಾಚಾರ ತಡೆಗಟ್ಟಿ-ಸಂತೋಷ್‌ ಹೆಗ್ಡೆ….

ಮಾಲೂರು : ದೇಶದಲ್ಲಿ  ಹೆಚ್ಚಾಗಿರುವ  ಭ್ರಷ್ಟಾಚಾರವನ್ನು ತಡೆಗಟ್ಟಲು  ಯುವಕರು ಹಾಗೂ ವಿದ್ಯಾರ್ಥಿಗಳು ಮುಂದಾಗು ವಂತೆ  ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗ್ಗಡೆಯವರು ಹೇಳಿದರು. ಪಟ್ಟಣದ ಮಾಲೂರು-ಕೋಲಾರ ಮುಖ್ಯರಸ್ತೆಯಲ್ಲಿರುವ  ಶ್ರೀ ಬಾಪೂಜಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ರಾಜಕಾರಣ ಕಲುಷಿತ ಗೊಂಡಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಬಂಡವಾಳ ಹಾಕಿ ಬಡ್ಡಿ ಸಮೇತ ತೆಗೆಯುವ ಜನಪ್ರತಿನಿಧಿಗಳು ಹೆಚ್ಚಾಗುತ್ತಿರುಮದರಿಂದ ದೇಶದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ಬೇರು ಸಮೇತ ಕಿತ್ತು ಹಾಕಲು  ಸಾಧ್ಯ ವಿಲ್ಲದೆ ಇರುಮದರಿಂದ ಯುವ ಸಮೂಹ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ತಡೆಯುವ ಮೂಲಕ ಸಮಾಜ ಬದಲಾವಣೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗ್ರಾಮೀಣ ಪ್ರದೇಶಗಳು ಉದ್ದಾರವಾಗದ ಹೊರತು ದೇಶ ಉದ್ದಾರವಾಗಲು ಸಾದ್ಯವಿಲ್ಲ ಎಂದ ಅವರು ರಾಷ್ಟ್ರ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದರೂ ಸಹ ಗ್ರಾಮಾಂತರ ಪ್ರದೇಶಗಳ ಜನತೆಗೆ ಮೂಲಭೂತ ಸವಲತ್ತುಗಳು ಇಂದಿಗೂ ದೊರಕಿಲ್ಲ. ಇದಕ್ಕೆ ಜನಪ್ರತಿನಿಧಿಗಳ ತಾತ್ಸಾರ ಮನೋಭಾವ ಮತ್ತು ಅವರಲ್ಲಿರುವ ಅಧಿಕಾರ ಎಂದು ಕಿಡಿ ಕಾರಿದರು….

No Comments to “ಮಾಲೂರು : ಯುವಕರೇ ಭ್ರಷ್ಟಾಚಾರ ತಡೆಗಟ್ಟಿ-ಸಂತೋಷ್‌ ಹೆಗ್ಡೆ….”

add a comment.

Leave a Reply

You must be logged in to post a comment.