ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : `ಶಿಕ್ಷಣ’ ಗುಣಮಟ್ಟಕ್ಕೆ ತನ್ನಿ-ಡಿಸಿ ಮನೋಜ್‌ ಕುಮಾರ್ ಮೀನಾ…

ಕೋಲಾರ: ನಮ್ಮ ಶಾಲೆ ಎಂಬ ಕಾಳಜಿ ಪೋಷಕ, ಶಿಕ್ಷಕ ಇಬ್ಬರಿಗೂ ಬರದ ಹೊರೆತು ಇಲ್ಲಿನ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಅಸಾಧ್ಯ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅಭಿಪ್ರಾಯಪಟ್ಟರು.  ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ದಂದು ಹೊನ್ನಶೆಟ್ಟಿಹಳ್ಳಿಯ ಗ್ರಾಮ ವಿಕಾಸ ಸಂಸ್ಥೆ, ಮಗು ಮತ್ತು ಕಾನೂನು ಕೇಂದ್ರ, ಬೆಂಗಳೂರಿನ ಭಾರತ ವಿಶ್ವ ವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಅವರ ಮಾತನಾಡಿದರು.  ನಮ್ಮೂರಿನ ಶಾಲೆಯಲ್ಲಿ ಮಕ್ಕಳಿಗೆ ಪ್ರತಿಯೊಂದು ಪೂರಕವಾಗಿದೆಯೆ, ಇಲ್ಲಿ ಕುಡಿಯುವ ನೀರು ಇದೆಯಾ? ಶೌಚಾಲಯವಿದೆಯಾ? ಶಿಕ್ಷಕರು, ಸಿಬ್ಬಂದಿಯು ನಿಯಮಿತ ವಾಗಿ ಶಾಲೆಗೆ ಬರುತ್ತಿದ್ದಾರಾ? ಮಕ್ಕಳ ಕಲಿಕೆಗೆ ಇಲ್ಲಿ ಏನಾದರೂ ಅಡ್ಡಿಯಿದೆಯೆ ಎಂಬುದನ್ನು ತಿಳಿದುಕೊಳ್ಳುವ, ಇದ್ದರೆ, ಇಂತಹ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಜನತೆ ಇರುವ ಗ್ರಾಮಗಳಲ್ಲಿ ಶಾಲೆಗಳು ನಿಜಕ್ಕೂ ದೇವಾಲ ಯಗಳೇ ಆಗುತ್ತವೆ. ಮುಂದಿನ ಪೀಳಿಗೆಯಲ್ಲಿ ಆದರ್ಶವನ್ನು ತುಂಬುವ ಕಣಜಗಳಾಗುತ್ತವೆ. ಇಲ್ಲವಾದರೆ ಯಾವೊಬ್ಬರ ಕಾಳಜಿ ಇಲ್ಲದೆ ವೃಥಾ ಹಾಳು ಬೀಳುತ್ತವೆ ಎಂದು ಹೇಳಿದರು. ಇಡೀ ರಾಜ್ಯದಲ್ಲಿ ಸುಮಾರು ೪೦ ಸಾವಿರ ಶೈಕ್ಷಣಿಕ ಸಂಸ್ಥೆಗಳಿವೆ. ಇಷ್ಟಕ್ಕೂ ೯-೧೦ ಜನ ಎಸ್‌ಡಿಎಂಸಿ ಸದಸ್ಯರನ್ನು ನೇಮಿಸಿದಾಗ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನ ಎಸ್‌ಡಿಎಂಸಿ ಸದಸ್ಯರೇ ರಾಜ್ಯದಲ್ಲಿರುತ್ತಾರೆ. ಇಷ್ಟೂ ಜನ ನಿರ್ಣಾಯಕ ಪಾತ್ರವನ್ನು ವಹಿಸಲು ಸಾಧ್ಯವಿದೆ. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಇವರಿಗೆ ತಮ್ಮ ಸಾಮರ್ಥ್ಯದ ಅರಿವಿಲ್ಲದಾಗಿರುಮದು ಅತಿ ದೊಡ್ಡ ದುರಂತವೇ ಆಗಿದೆ ಎಂದರು…

No Comments to “ಕೋಲಾರ : `ಶಿಕ್ಷಣ’ ಗುಣಮಟ್ಟಕ್ಕೆ ತನ್ನಿ-ಡಿಸಿ ಮನೋಜ್‌ ಕುಮಾರ್ ಮೀನಾ…”

add a comment.

Leave a Reply

You must be logged in to post a comment.