ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಬಂಗಾರಪೇಟೆ : ಸದಾನಂದಗೌಡರ ಸರ್ಕಾರ `ಮಾಯಾ ಬಜಾರ್’ ಇದ್ದಹಾಗೆ -ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ ವ್ಯಂಗ್ಯ..

ಬಂಗಾರಪೇಟೆ: ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಸರ್ಕಾರ ಮಾಯಾಬಜಾರ್ ಇದ್ದಹಾಗೆ ಇವರು ರಾಜ್ಯದ ಜನತೆಯನ್ನು ಯಾಮಾರಿಸಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಕೆ.ಎಚ್‌.ಮುನಿಯಪ್ಪ ಟೀಕಿಸಿದರು. ಇಂದು ಪಟ್ಟಣದಲ್ಲಿ ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ತಮ್ಮ ಭಾಷಣ ಪ್ರಾರಂಭಿಸುತ್ತಿದ್ದಂತೆ ಪತ್ರಕರ್ತರ ಮೇಲೆ ವಕೀಲರು ನಡೆಸಿದ ಹಲ್ಲೆಯನ್ನು ಕಟು ನುಡಿಗಳಲ್ಲಿ ಖಂಡಿಸಿದ ಅವರು ತಪ್ಪಿತಸ್ದ ವಕೀಲರ ವಿರುದ್ದ ಕೂಡಲೆ ನಿರ್ಧಾಕ್ಷಣ್ಯ ಕ್ರಮ ಕೈಗೂಳ್ಳುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಈ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವಂತಹುದು ಎಂದು ತಿಳಿಸಿದ ಅವರು ಮುಂದೆ ಈ ರೀತಿಯ ಘಟನೆಗಳು ಮತ್ತೆ ಮತ್ತೆ ನಡೆಯದಂತೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕೆಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು. ನಂತರ ಜೆ.ಡಿ.ಎಸ್‌. ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸಚಿವರು ಜಾತ್ಯಾತೀತ ಪಕ್ಷವೆಂದು ಮುಖವಾಡ ಹಾಕಿಕೊಂ ಡಿರುವ ಆ ಪಕ್ಷದ ಮುಖಂಡರು ಸಿದ್ದಾಂತವೆ ಇಲ್ಲದ ಬಿಜೆಪಿಗೆ ಓಟು ಹಾಕಿಸುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು. ಈಗಿರುವ ಬಿ.ಜೆ.ಪಿ. ಸರ್ಕಾರ ಯಾವಾಗ ಬೀಳುತ್ತದೆಯೊ ಗೊತ್ತಿಲ್ಲ ಎಂದ ಅವರು ರಾಜ್ಯದಲ್ಲಿ ಮುಂದಿನ ಸರ್ಕಾರ ಕಾಂಗ್ರೆಸ್‌ನದು ಎಂದು ಭವಿಷ್ಯ ನುಡಿದರು. ನಂತರ  ಅಖಿಲ ಬಾರತ ಕಾಂಗ್ರೇಸ್‌ ಕಮಿಟಿಯ ಕಾರ್ಯದರ್ಶಿಗಳು ಹಾಗೂ ಆಂಧ್ರ ಪ್ರದೇಶದ ಮಾಜಿ ಸಚಿವರೂ ಆದ ಹನುಮಂತರಾವ್‌ ಮಾತನಾಡಿ ದೇಶದಲ್ಲಿ ತ್ಯಾಗ ಬಲಿದಾನಗಳನ್ನು ಮಾಡಿದ ಕಾಂಗೆಸ್‌ ಪಕ್ಷಕ್ಕೆ ಮತ ನೀಡಿದಾಗ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎಂದು ಅಭಿಪ್ರಾಯಪಟ್ಟರು…

No Comments to “ಬಂಗಾರಪೇಟೆ : ಸದಾನಂದಗೌಡರ ಸರ್ಕಾರ `ಮಾಯಾ ಬಜಾರ್’ ಇದ್ದಹಾಗೆ -ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ ವ್ಯಂಗ್ಯ..”

add a comment.

Leave a Reply

You must be logged in to post a comment.