ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ: ಏ.೧.ರಿಂದ ನಾಗರಿಕ ಸೇವೆಗೆ `ಸಕಾಲ’ ಲಭ್ಯ-ಡಿಸಿ ಮನೋಜ್‌ ಕುಮಾರ್ ಮೀನಾ…

ಕೋಲಾರ : ಕರ್ನಾಟಕ ನಾಗರಿಕರ ಸೇವೆಗಳ ಖಾತರಿ ಅಧಿನಿಯಮದಡಿ `ಸಕಾಲ’ಎಂಬ ಘೋಷಣೆಯೊಂದಿಗೆ ಪ್ರಾರಂಭವಾಗಿರುವ ವಿನೂತನ ಕಾರ್ಯಕ್ರಮದಲ್ಲಿ ಹನ್ನೊಂದು ಇಲಾಖೆಗಳ ೧೫೦ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿ ಕರು ಕೇಳುವ ಸೇವೆಗಳನ್ನು ನಿಗದಿತ ಅವಧಿಯೊಳಗೆ ನೀಡಬೇ ಕೆಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದರು. `ಸಕಾಲ’ ಶೀರ್ಷಿಕೆ ಕಾರ್ಯಕ್ರಮವನ್ನು ಏಪ್ರಿಲ್‌ ೧ ರಿಂದ ಜಿಲ್ಲೆಯಲ್ಲಿ ಪ್ರಾರಂಭಿಸಬೇಕಾಗಿರುವ ಹಿನ್ನೆಲೆಯಲ್ಲಿ ರೂಪುರೇಷೆ ಗಳನ್ನು ಸಿದ್ಧಪಡಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರದ ಸೇವೆಗಳನ್ನು ಪಾರದರ್ಶಕವಾಗಿ ಕಟ್ಟಕಡೇ ಪ್ರಜೆಗೂ ನಿಗದಿತ ಕಾಲಮಿತಿಯಲ್ಲಿ ನೀಡುವ ವಿಶಿಷ್ಟ ಯೊಜನೆ ಇದಾಗಿದ್ದು ಸೇವೆಗಳನ್ನು ಕಾಲಮಿತಿಯಲ್ಲಿ ಪೂರೈಸಬೇಕಾಗಿದೆ.  ಇದನ್ನು ತಪ್ಪಿದಲ್ಲಿ, ತಡ ಮಾಡಿದ ದುರುದ್ದೇಶಕ್ಕಾಗಿ ಪ್ರತಿದಿನ ೨೦ ರೂ. ನಿಗದಿತ ಅಧಿಕಾರಿ ದಂಡವಾಗಿ ಸೇವಾಕಾಂಕ್ಷಿಗೆ ನೀಡಬೇಕಾಗಿದೆ ಎಂದು ಹೇಳಿದರು. ದಂಡ ನೀಡಿ ತಪ್ಪಿಸಿಕೊಳ್ಳುವ ಪರಿಪಾಠವಾಗುವ ಹಿನ್ನೆಲೆ ಯಲ್ಲಿ ದಂಡಕರ್ತರ ಸೇವಾ ಪುಸ್ತಕದಲ್ಲಿ ನಮೂದಿಸಲಾಗುಮ ದು. ಇದರಿಂದ ಮುಂಬಡ್ತಿ ಸಂದರ್ಭದಲ್ಲಿ ಇದನ್ನು ಪರಿಗಣಿಸ ಲಾಗುಮದು ಎಂದು ಹೇಳಿದರು. ಆರ್‌.ಟಿ.ಐ. ಕಾಯಿದೆಗಿಂತ ನಾಗರಿಕ ಸೇವೆಗಳ ಖಾತರಿ ಅಧಿನಿಯಮ ೨೦೧೧ ಬಹಳ ಪರಿಣಾಮಕಾರಿಯಾಗಿದೆ. ಇಲಾಖೆಗಳಲ್ಲಿ ನಿಗದಿಪಡಿಸಿದ ಅಧಿಕಾರಿ (ಡಿಸಿಗ್‌ನೇಟೆಡ್‌ ಆಫೀಸರ್) ಸೇವೆಗಳನ್ನು ಸಾರ್ವ ಜನಿಕರಿಗೆ ಕಾಲಮಿತಿಯಲ್ಲಿ ತಲುಪಿಸದೇ ಇದ್ದಾಗ ಅಂತಹ ಅಧಿಕಾರಿಯೆ ದಂಡ ಪಾವತಿಸಬೇಕಾಗಿದೆ. ಕೆಳಮಟ್ಟದ  ಸಿಬ್ಬಂದಿಯವರಿಗೆ ಪ್ರತ್ಯೇಕವಾದ ಕಾಲವನ್ನು ನಿಗದಿತ ಅಧಿಕಾರಿ ನಿಗದಿಪಡಿಸಬೇಕಾಗಿದೆ.ಆ ಮೂಲಕ ಸೇವೆಗಳನ್ನು ಸಾರ್ವಜ ನಿಕರಿಗೆ ನಿಗದಿತ ಕಾಲಮಿತಿಯಲ್ಲಿ ತಲುಪುವಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು…

No Comments to “ಕೋಲಾರ: ಏ.೧.ರಿಂದ ನಾಗರಿಕ ಸೇವೆಗೆ `ಸಕಾಲ’ ಲಭ್ಯ-ಡಿಸಿ ಮನೋಜ್‌ ಕುಮಾರ್ ಮೀನಾ…”

add a comment.

Leave a Reply

You must be logged in to post a comment.