ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಕೋಲಾರ : ಗ್ರಾಮಗಳ ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ-ಜವಳಿ ಖಾತೆ ಸಚಿವ ವರ್ತೂರು ಆರ್. ಪ್ರಕಾಶ್‌…

ಕೋಲಾರ: ಕ್ಷೇತ್ರದಲ್ಲಿ ಕಳೆದ ೧೫ ವರ್ಷಗಳಿಂದ ನಡೆಯದ ಅಭಿವೃದ್ಧಿ ಕೆಲಸಗಳನ್ನು ತಾಮ ಮಾಡಿ ಜನತೆಯ ಬಳಿ ಓಟಿನ ರೂಪದಲ್ಲಿ ಕೂಲಿ ಕೇಳುಮದಾಗಿ ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್‌ ಅವರು ಹೇಳಿದರು. ತಾಲ್ಲೂಕಿನ ಬೀರಮಾನಹಳ್ಳಿ ಗ್ರಾಮದಲ್ಲಿಂದು ನಡೆದ ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷ ವಿಜಯ್‌ಕುಮಾರ್ ಸೇರ್ಪಡೆ ಸಮಾರಂಭ ಮತ್ತು ಸಚಿವರು ಕೊರೆಸಿರುವ ನೂತನ ಕೊಳವೆಬಾವಿ ಮೂಲಕ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತ ನಾಡಿದ ಅವರು, ತಾಮ ಶಾಸಕರಾದ ಕಳೆದ ಮೂರುವರೆ ವರ್ಷಗಳಲ್ಲಿ ಸಿಮೆಂಟ್‌, ಡಾಂಬರು ರಸ್ತೆಗಳ ಕಾಂಗಾರಿಗಳನ್ನು ಹೇರಳ ಪ್ರಮಾಣದಲ್ಲಿ ನಡೆಸಲಾಗಿದೆ. ನೀರಿನ ಅಭಾವ ಹೆಚ್ಚಾಗಿರುವ ಗ್ರಾಮಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ನೀಡಿದವರನ್ನು, ನೀಡದಿರುವವರನ್ನು ನಾನು ಶಾಸಕನಾದ ನಂತರ ಸಮಭಾವದಿಂದ ಕಂಡಿದ್ದೇನೆ. ಗ್ರಾಮೀಣ ಭಾಗದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯವೆಸಗದೆ ಶಾಸಕನಾಗಿ, ಸಚಿವನಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮಹಾದಾಸೆ ಹೊಂದಿರುಮದಾಗಿ ತಿಳಿಸಿದರು.  ಬೀರಮಾನಹಳ್ಳಿ ಗ್ರಾಮದಲ್ಲಿ ಸುಮಾರು ಐದಾರು ಬೋರ್ ವೆಲ್‌ ಕೊರೆಸಿದರೂ ನೀರು ಸಿಗದೆ ಜನತೆ ಪರಿತಪಿಸಿದರು. ಆದರೂ ನಾನು ಗ್ರಾಮಸ್ಥರಿಗೆ ಧೈರ್ಯ ಹೇಳಿ ಮತ್ತೊಂದು ಕೊಳವೆ ಬಾವಿ ಕೊರೆದಿದ್ದು, ನೀರು ದೊರೆತಿದೆಯಲ್ಲದೆ, ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಇದಕ್ಕೂ ಮುನ್ನಾ ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರಲ್ಲದೆ, ಗ್ರಾಮದ ಶ್ರೀ ಚೌಡೇಶ್ವರಿ ದೇವಿಗೆ ಗಂಗಾಭಿಷೇಕ ನೆರವೇರಿಸಿದರು.ಗ್ರಾಮಕ್ಕೆ ನೀರು ದೊರೆತ ಹಿನ್ನಲೆ ಯಲ್ಲಿ ಗ್ರಾಮಸ್ಥರು ಗ್ರಾಮಹಬ್ಬವನ್ನು ಆಚರಿಸಿ ಸಂಭ್ರಮಪಟ್ಟರು…

No Comments to “ಕೋಲಾರ : ಗ್ರಾಮಗಳ ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ-ಜವಳಿ ಖಾತೆ ಸಚಿವ ವರ್ತೂರು ಆರ್. ಪ್ರಕಾಶ್‌…”

add a comment.

Leave a Reply

You must be logged in to post a comment.