ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಚಿಕ್ಕಬಳ್ಳಾಪುರ : ನೀರಿನ ಸಮಸ್ಯೆಗೆ ತುರ್ತು ಪರಿಹಾರ ಅಗತ್ಯ-ಎನ್‌.ಸಿ. ಮುನಿಯಪ್ಪ…

ಚಿಕ್ಕಬಳ್ಳಾಪುರ: ಜಿಲ್ಲೆಯ ೭೮ ಹಳ್ಳಿಗಳಿಗೆ ನೀರಿನ ಸಮಸ್ಯೆಯಿದ್ದು,೪೪ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆ ಯಾಗಿದೆ.ಉಳಿದ ಹಳ್ಳಿಗಳ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗಹರಿಸಲಾ ಗುಮದೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌.ಸಿ.ಮುನಿಯಪ್ಪ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಬರಪರಿಸ್ಥಿತಿ ಹಾಗೂ ನೀರಿನ ಕೊರತೆ ಕುರಿತಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಐದು ತಾಸುಗಳಿ ಗೂ ಹೆಚ್ಚಾಗಿ ನಡೆದ ಸಭೆಯಲ್ಲಿ ಜಿಲ್ಲೆಯ ಪಂಚಾಯತ್‌ ರಾಜ್‌ ಇಂಜಿನಿಯ ರಿಂಗ್‌ ವಿಭಾಗ, ಬೆಸ್ಕಾಂ ಅಧಿಕಾರಿಗಳ ಯೊಜನೆಗಳ ಬಗ್ಗೆ ಚರ್ಚಿ ಸಲಾಯಿತು. ವಾರಕ್ಕೊಮ್ಮೆ ಸಭೆ: ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೆಲ ಇಲಾಖೆಗಳ ಅಧಿಕಾರಿಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದ ಉಸ್ತುವಾರಿ ಕಾರ್ಯದರ್ಶಿಗಳು, ಜಿ. ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳ ಜೊತೆಗೆ ಸಂಬಂಧಪಟ್ಟ ಇಲಾಖೆ ಯವರು ವಾರಕ್ಕೊಮ್ಮೆಯಾ ದರೂ ಸಭೆ ನಡೆಸಿ ಸಮಸ್ಯೆಗಳನ್ನು ಪರಿ ಹರಿಸಬೇಕೆಂ ದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಜಿಲ್ಲಾ ಪಂಚಾಯತ್‌ ಇನ್ನು ೧೦ ದಿನಗಳೊಳಗೆ ಹಣ ಬಿಡುಗಡೆ ಮಾಡಿ ಉಳಿದ ಕಾಮ ಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಬರ ಪರಿಹಾರಕ್ಕೆ ಜಿಲ್ಲೆಗೆ ಒಟ್ಟು ೧೧.೪ ಕೋಟಿ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳಿಗೆ ೭.೧ಕೋಟಿ ಬಿಡು ಗಡೆಯಾಗಿದೆ. ಅದರಲ್ಲಿ ೪.೨೦ ಕೋಟಿ ಖರ್ಚಾಗಿದೆ. ಉಳಿದ ೨.೮೪ ಕೋಟಿ ಗಳಲ್ಲಿ ೧ ಕೋಟಿಯ ಕಾಮಗಾರಿಗಳು ಪ್ರಗತಿಯಲ್ಲಿದೆ, ಹಾಗೂ ೧ ಕೋಟಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿ ದರು. ಜಿಲ್ಲೆಯಲ್ಲಿ ಕೊಳವೆ ಬಾವಿಗಳ ವಿಫಲವಾಗಿರುಮದು ಸಹ ನೀರಿನ ಸಮಸ್ಯೆಗೆ ಕಾರಣವಾಗಿದೆ. ನೂರಾರು ಅಡಿ ಕೊರೆದರೂ ಕುಡಿಯುವ ನೀರು ಸಿಗುಮದಿಲ್ಲ. ಕೊರೆದ ಬೋರ್‌ ಗಳಿಗೆ ಸಕಾಲದಲ್ಲಿ ವಿದ್ಯುತ್‌ ಸಂಪರ್ಕವಿರುಮದಿಲ್ಲ. ಇದನ್ನು ಶೀಘವೇ ಬಗೆಹರಿಸಬೇಕೆಂದು ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು. ಜಿಲ್ಲೆಯಲ್ಲಿ ೮೪ ದಿವಸಗಳಿಗೆ ಆಗುವಷ್ಟು ಮೇಮ ಲಭ್ಯವಿದ್ದು, ಮೇಮ ಬ್ಯಾಂಕ್‌ ತೆರೆಯಲಾಗಿದೆ ಹಾಗೂ ಮಿನಿ ಕಿಟ್‌ಗಳನ್ನು ಜನರಿಗೆ ವಿತರಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು…

No Comments to “ಚಿಕ್ಕಬಳ್ಳಾಪುರ : ನೀರಿನ ಸಮಸ್ಯೆಗೆ ತುರ್ತು ಪರಿಹಾರ ಅಗತ್ಯ-ಎನ್‌.ಸಿ. ಮುನಿಯಪ್ಪ…”

add a comment.

Leave a Reply

You must be logged in to post a comment.