ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ರೈಲ್ವೆ ಬಜೆಟ್‌ `ಕೋಲಾರ’ಕ್ಕೆ ನಿರಾಸೆ-ಜವಳಿ ಖಾತೆ ಸಚಿವ ಆರ್.ವರ್ತೂರು ಪ್ರಕಾಶ್‌…

ಕೋಲಾರ : ಕೇಂದ್ರ ರೈಲ್ವೆ ಬಜೆಟ್‌ ಜಿಲ್ಲೆಯ ಜನರ ಪಾಲಿಗೆ ಸಂಪೂರ್ಣ ನಿರಾಸೆಯನ್ನುಂಟು ಮಾಡಿದ್ದು, ಇದೊಂದು ಜನರನ್ನು ಯಾಮಾರಿಸುವ ಬಜೆಟ್‌ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಖಾತೆ ಸಚಿವ ಆರ್.ವರ್ತೂರು ಪ್ರಕಾಶ್‌ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ಕೋಲಾರವನ್ನು ಪ್ರತಿನಿದಿಸುತ್ತಿರುವ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌.ಮುನಿಯಪ್ಪ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯಾಮದೇ ಹೊಸ ರೈಲ್ವೆ ಯೊಜನೆಗಳನ್ನು ಮಂಜೂರು ಮಾಡಿಸದೆ ಹಳೆಯಯೊಜನೆಗಳನ್ನೇ ಹೊಸ ರೂಪ ದಲ್ಲಿ ಜನರ ಮುಂದಿಟ್ಟು ಯಾಮಾರಿಸಿದ್ದಾರೆಂದು ವ್ಯಂಗ್ಯವಾಡಿದ್ದಾರೆ. ಕಳೆದ ರೈಲ್ವೆ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವ್ಯಾಗನ್‌ ತಯಾರಿಕಾ ಘಟಕ ಮಂಜೂರಾಗಿದೆಯೆಂದು ವ್ಯಾಪಕ ಪ್ರಚಾರ ಗಿಟ್ಟಿಸಿದ್ದ ಕೇಂದ್ರ ರೈಲ್ವೆ ಸಚಿವರು ಈ ಬಾರಿ ಕೋಲಾರಕ್ಕೆ ಕೋಚ್‌ ಕಾರ್ಖಾನೆ ಯನ್ನು ಮಂಜೂರು ಮಾಡಿಸುವ ನಾಟಕವನ್ನಾಡಿದ್ದಾರೆ, ಅದೂ ರಾಜ್ಯ ಸರಕಾರ ಸಹಕಾರ ನೀಡಿ ದರೆ ಮಾತ್ರ ಎಂಬ ಷರತ್ತು ಇಟ್ಟಿರುಮದು ರೈಲ್ವೆ ಸಚಿವರಿಗೆ ಕೋಲಾರ ಜಿಲ್ಲೆಯ ಜನರ ಮೇಲಿರುವ ಪ್ರೀತಿಯನ್ನು ಬಹಿ ರಂಗ ಪಡಿಸಿದೆಯೆಂದು ಟೀಕಿಸಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರ ನಡು ವಿನ ಬ್ರಾಡ್‌ಗೇಜ್‌ ಪರಿವರ್ತನಾ ಯೊಜನೆಯನ್ನು  ಬಜೆಟ್‌ನಲ್ಲಿ ಪುನರು ಚ್ಚರಿಸುವ ಮೂಲಕ ಕೇಂದ್ರ ರೈಲ್ವೆ ಬಜೆಟ್‌ ಹಳೆಯ ಮದ್ಯ ಹೊಸ ಬಾಟಲಿ ನಲ್ಲಿ ನೀಡಿದಂತಾಗಿದೆ. ಜಿಲ್ಲಾ ಕೇಂದ್ರವನ್ನು ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯ ಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೊಸ ರೈಲುಗಳ ಓಡಾಟಕ್ಕೆ ಬಜೆಟ್‌ ಅವಕಾಶ ನೀಡಿಲ್ಲ, ಜಿಲ್ಲೆಯಲ್ಲಿ ಹೇರಳ ವಾಗಿ ಬೆಳೆ ಯುವ ತರಕಾರಿ, ಹಣ್ಣು, ಮಾವನ್ನು ಹೊರ ರಾಜ್ಯಗಳಿಗೆ ಕಳುಹಿಸುವ ವಿಶೇಷ ಗೂಡ್ಸ್‌ ರೈಲುಗಳ ಪ್ರಸ್ತಾಪ ಇಲ್ಲದಂ ತಾಗಿದೆ.ಕೋಲಾರ ಬೆಂಗಳೂರು ನಡುವೆ ಯಾವಾಗ ರೈಲು ಓಡಿಸಲಾಗುಮದು ಎಂಬ ಬಗ್ಗೆಯೂ ಬಜೆಟ್‌ನಲ್ಲಿ ಚಕಾರ ವಿಲ್ಲ. ರೈಲ್ವೆ ಬಜೆಟ್‌ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ  ಕಿಂಚಿ ತ್ತೂ ನೆರವಾಗಿಲ್ಲ, ಇದೊಂದು ಕಣ್ಣೊರೆ ಸುವ ಬಜೆಟ್‌ ಆಗಿದೆಯೆಂದು ಸಚಿವರು ವ್ಯಂಗ್ಯವಾಡಿದ್ದಾರೆ…

No Comments to “ರೈಲ್ವೆ ಬಜೆಟ್‌ `ಕೋಲಾರ’ಕ್ಕೆ ನಿರಾಸೆ-ಜವಳಿ ಖಾತೆ ಸಚಿವ ಆರ್.ವರ್ತೂರು ಪ್ರಕಾಶ್‌…”

add a comment.

Leave a Reply

You must be logged in to post a comment.