ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

‘ಜಿಲ್ಲಾ ಮಟ್ಟದ ಪತ್ರಿಕೆಗಳೇ ನೈಜ’ ಮುಖ್ಯಮಂತ್ರಿಗಳ ಪತ್ರಿಕಾಕಾರ್ಯದರ್ಶಿ ಎನ್‌. ಭೃಂಗೀಶ್‌ ಅಭಿಪ್ರಾಯ..

 ಬೆಂಗಳೂರು: ವ್ಯಾಪರೀಕರಣದ ಮನೋಭಾವದಲ್ಲಿ ಪ್ರಸ್ತುತ, ಜಿಲ್ಲಾ ಮಟ್ಟದ ಪತ್ರಿಕೆಗಳೇ ನೈಜ ಪತ್ರಿಕೆಗಳು, ಸತ್ಯ, ವಸ್ತು ನಿಷ್ಠ ವರದಿಗಳನ್ನು ಪ್ರಕಟಿ ಸುಮದರ ಮೂಲಕ ಪ್ರಾಮಾಣಿಕವಾಗಿ ಉಳಿದಿವೆ ಎಂದು ಮುಖ್ಯಮಂತ್ರಿಗಳ ಪತ್ರಿಕಾಕಾರ್ಯದರ್ಶಿ ಎನ್‌. ಭೃಂಗೀಶ್‌ ಅಭಿಪ್ರಾಯಪಟ್ಟರು. ಅವರು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಆಯೊಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಸತ್ಯ, ನಿಷ್ಠೆ ಎಂದು ಬರೆಯುವ, ಚರ್ಚೆ ಮಾಡುವ, ಪತ್ರಕರ್ತರು, ಆ ರೀತಿ ನಡೆದುಕೊಳ್ಳುತ್ತಿದ್ದಾರೆಯೆ ಎಂದು ಪ್ರಶ್ನಿಸಿದ ಅವರು ೨೦ ವರ್ಷ ಗಳಿಂದ ಮುಖ್ಯಮಂತ್ರಿಗಳ ಕಾರ್ಯ ಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರನ್ನೂ ನಾನೇ ಬಲ್ಲ ಆದರೇ ಅದನ್ನು ಬಹಿರಂಗ ಪಡಿಸುಮದು ಸರಿಯಲ್ಲ ಎಂದರು. ಭಾಷಣ ಮಾಡುಮದು, ಕೇಳುಮದು ಎರಡು ಸಂಗತಿಗಳು ಬೇಸರ ತರಿಸುತ್ತಿವೆ.. ಸತ್ಯ ಸಂಗತಿಗಳನ್ನು ಹೇಳದೆ ಮುಚ್ಚಿಡಲಾಗುತ್ತಿದೆ.  ಬರೀ ಪೊಳ್ಳು ಮಾತುಗಳಿಂದ ಜನತೆ ರೋಸಿ ದ್ದಾರೆ. ದೃಶ್ಯ ಮಾಧ್ಯಮಗಳು ದಿನನಿತ್ಯ ನಿತ್ಯಾನಂದನ ಜಪ ಮಾಡುಮದ ರೊಂದಿಗೆ ಅಸತ್ಯ.. ಅಧರ್ಮಗಳನ್ನೇ ಭಿಂಬಿಸುತ್ತಿವೆ..ಕೆಲ ರಾಜ್ಯ ಮಟ್ಟದ ಪತ್ರಿಕೆಗಳು ಸತ್ಯವನ್ನು ಹೇಳದೇ, ಹೇಳಿದರೂ ಅರ್ಧ ಸತ್ಯವನ್ನು ಮಾತ್ರ ಹೇಳಿ ವಂಚಿಸುತ್ತಿದ್ದಾರೆ. ಇದು ಸರಿಯೆ ಎಂದು ಭೃಂಗೀಶ್‌ ಖೇದ ವ್ಯಕ್ತಪಡಿಸಿ ದರು. ನೆಲದ ಗುಣ – ಸಂಸ್ಕøತಿಯನ್ನು ಪತ್ರಕರ್ತರು ಅರ್ಥಮಾಡಿಕೊಂಡಿಲ್ಲ, ಅರ್ಥಮಾಡಿಕೊಂಡವರು ಕೆಲವೇ ಮಂದಿ ಅವರುಗಳು ಜಿಲ್ಲಾ ಮಟ್ಟದ ಪತ್ರಿಕೆಗಳವರು ಎಂದು ಅಭಿನಂದಿಸಿದ ಭೃಂಗೀಶ್‌ ರಾಜಕಾರಣಿಗಳ ಕೈಲಿ ಮಾಧ್ಯಮ ಸಿಕ್ಕಿ ಮೌಲ್ಯ ಕಣ್ಮರೆಯಾ ಗುತ್ತಿದೆ ಎಂದರು.

No Comments to “‘ಜಿಲ್ಲಾ ಮಟ್ಟದ ಪತ್ರಿಕೆಗಳೇ ನೈಜ’ ಮುಖ್ಯಮಂತ್ರಿಗಳ ಪತ್ರಿಕಾಕಾರ್ಯದರ್ಶಿ ಎನ್‌. ಭೃಂಗೀಶ್‌ ಅಭಿಪ್ರಾಯ..”

add a comment.

Leave a Reply

You must be logged in to post a comment.