ಶಾಸಕ ಕೊತ್ತೂರು ಮಂಜುನಾಥ್‌ ಮಾಡುವ ದಾನ,ಧರ್ಮ ನನ್ನಿಂದಲೂ ಸಾಧ್ಯವಿಲ್ಲ-ಕೇಂದ್ರ ಸಚಿವ ಕೆಹೆಚ್‌ ಮುನಿಯಪ್ಪ… ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು ಸರ್ಕಾರದ `ಆಂಗ್ಲ’ ಪ್ರೇಮ ಖಂಡಿಸಿ ಕೋಲಾರದಲ್ಲಿ ಪ್ರತಿಭಟನೆ..

ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು

ಕೋಲಾರ : ಸರ್ಕಾರಿ ಶಾಲೆಗಳಲ್ಲಿ ಈಗ ಕಲಿಸುತ್ತಿರುವ ಶಿಕ್ಷಣ ವ್ಯವಸ್ಥೆಯೆ..ಸರಿಯಿಲ್ಲ. ಇದೊಂದು ಕಳಪೆ ಗುಣ ಮಟ್ಟದ ಶಿಕ್ಷಣ ವ್ಯವಸ್ಥೆಯಾಗಿದ್ದು,  ಇದ ರಲ್ಲಿ ಈ ನೆಲದ ಸೊಗಡು, ಬೆವರು, ಸಂಸ್ಕøತಿಯೆ.. ಇಲ್ಲವಾಗಿದ್ದು, ವಿದ್ಯಾರ್ಥಿ ಗಳಿಗೆ ಕನ್ನಡದಲ್ಲಿ ಒಂದು ವಾಖ್ಯ ಬರೆಯಲು ಸಾಧ್ಯವಿಲ್ಲದ ಗಂಭೀರ ಸ್ಥಿತಿ ತಲುಪಿದ್ದೇವೆಂದು ಆದಿಮ ಸಂಸ್ಥೆಯ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಕೋಡಿ ಗಾನಹಳ್ಳಿ ರಾಮಯ್ಯ  ಖೇದ ವ್ಯಕ್ತ ಪಡಿಸಿದ್ದಾರೆ. ನಗರದಲ್ಲಿ ಬುಧವಾರ ಅವರು  ಡಿವಿಜಿ ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅಸಮಾನತೆಯ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದ್ದು, ಬಡವರಿಗೆ ಸರ್ಕಾರಿ ಶಾಲೆ ಕಳಫೆ ಶಿಕ್ಷಣ,  ಶ್ರೀಮಂತ ರು, ಸಚಿವ ಮಹೋದಯರು ಉನ್ನತ ಮಟ್ಟದ ಅಧಿಕಾರಿಗಳು  ಭಾರೀ ವೊತ್ತದ ಡೊನೇಷನ್‌  ತೆತ್ತು  `ಡೂಂ’  ಖಾಸಗಿ  ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ವಿಶ್ವ ಬ್ಯಾಂಕ್‌ನಲ್ಲಿ ಸಾಲದ ಭಿಕ್ಷೆ ಬೇಡಿ ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಕೊಡುತ್ತಿರುವ ಸರ್ಕಾರದ ವ್ಯವಸ್ಥೆ ಈ ನಾಡಿನಲ್ಲಿದೆ ಎಂದರೆ ಇದಕ್ಕಿಂತ ನಾಚಿಗೆಗೇಡಿನ ವಿಷಯ ಮತ್ತೊಂದಿಲ್ಲ. ನಮ್ಮ ಮಕ್ಕಳನ್ನೂ ಸಾಲಗಾರರನ್ನಾಗಿ ದ್ದಾರೆ. ಅಸಮಾನ ಶಿಕ್ಷಣ ನೀತಿಯ ವಿರುದ್ದ ಜಿಂಕೆ ರಾಮಯ್ಯ  ಕಿಡಿಕಾರಿದರು.

No Comments to “ಗ್ರಂಥಾಲಯದಲ್ಲಿ ಬರೀ ಕಸದರಾಶಿಯೆ… ತುಂಬಿದೆ.. ಖ್ಯಾತ ಸಾಹಿತಿ ರಾಮಯ್ಯ ಸಿಡಿಮಿಡಿ:….ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಹಾಳು”

add a comment.

Leave a Reply

You must be logged in to post a comment.